
ಬೆಂಗಳೂರು: ಡಾ. ರಾಜ್ ಕುಮಾರ್ ಫ್ಯಾಮಿಲಿಯನ್ನ ರಾಜಕೀಯಕ್ಕೆ ತರೋದಕ್ಕೆ ಸಾಕಷ್ಟು ದಿಗ್ಗಜರು ಪ್ರಯತ್ನ ಪಟ್ಟರು ಅದು ಆಗಿಲ್ಲ. ಅಂದು ರಾಜ್ ಕುಮಾರ್ ಅವರನ್ನ ಪ್ರಯತ್ನಿಸಿದ್ರು. ಪುನೀತ್ ರಾಜ್‍ಕುಮಾರ್ ಅವರನ್ನು ಪ್ರಯತ್ನಿಸಿದ್ದರು. ಅದು ಸ್ವತಃ ಪ್ರಧಾನಿ ಮೋದಿಯವರೇ ಪುನೀತ್ ಅವರಿಗೆ ಆಫರ್ ನೀಡಿದ್ದರಂತೆ.

ಎಷ್ಟೇ ಆಗಲಿ ಅಣ್ಣಾವ್ರ ಮುದ್ದಿನ ಮಗ.. ಅಣ್ಣಾವ್ರು ಹಾಕಿಕೊಟ್ಟ ಹಾದಿಯಲ್ಲೇ ನಡೆದಿದ್ದಾರೆ. ಈ ಬಗ್ಗೆ ನಿರ್ಮಾಪಕ ಎಸ್ ವಿ ಬಾಬು ಮಾತನಾಡಿದ್ದಾರೆ. ವಿಧಾನಸಭಾ ಚುನಾವಣೆ ವೇಳೆಯೇ ಇಂಥ ಪ್ರಯತ್ನ ನಡೆದಿತ್ತಂತೆ. ಆ ವೇಳೆಗೆ ಬಿಜೆಪಿ ಗೆಲುವಿನ ಬಗ್ಗೆ ಕೊಂಚ ಅನುಮಾನವಿತ್ತು. ಜೊತೆಗೆ ಕಷ್ಟವು ಇತ್ತು. ಹೀಗಾಗಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಏನಾದರೂ ಮಾಡಬೇಕೆಂಬುದು ಚರ್ಚೆಯಾಗಿತ್ತು.
ಯಾರನ್ನ ಕರೆತಂದರೆ ಪಕ್ಷದ ವರ್ಚಸ್ಸು ಹೆಚ್ಚಾಗುತ್ತೆ ಎಂಬ ಚರ್ಚೆಯಾದಾಗ ಅಣ್ಣಾವ್ರ ಕುಟುಂಬದ ಕುಡಿ ಎಂಟ್ರಿಯಾದರೆ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತೆ. ಆದ್ರೆ ಯಾವುದೇ ಕಾರಣಕ್ಕೂ ಅಣ್ಣಾವ್ರ ಮಕ್ಕಳು ಇದಕ್ಕೆ ಒಪ್ಪಲ್ಲ ಎಂದಿದ್ದೆ. ಆದ್ರೆ ಒಮ್ಮೆ ಪ್ರಯತ್ನ ಮಾಡಿಯೇ ಬಿಡೋಣಾ ಅಂತ ನಾಯಕರೆಲ್ಲಾ ಸೌಜನ್ಯಕ್ಕಾಗಿ ಅಪ್ಪು ಮನೆಗೆ ಭೇಟಿ ನೀಡಿದೆವು. ಅಲ್ಲಿ ಮಹಾರಾಷ್ಟ್ರ ಚೀಫ್ ವಿಪ್ ಆಗಿರೋ ಆಶೀರ್ ಶೆಲ್ಲರ್ ಪರೋಕ್ಷವಾಗಿ ಪಕ್ಷಕ್ಕೆ ಆಹ್ವಾನ ನೀಡಿದ್ರು. ಅಪ್ಪು ನಗುತ್ತಲೇ ಎದ್ದು ಟೀ ತರಿಸುತ್ತೇನೆ ಎಂದರು. ಆಗಲೇ ಅರ್ಥವಾಯಿತು. ನಾನು ಕರೆಯೋದು ಬೇಡ ಎಂದೇ.
ಅದಾದ ಬಳಿಕ ಒಮ್ಮೆ ಪ್ರಧಾನಿಯವರನ್ನ ಭೇಟಿ ಮಾಡಿಸಿ ಪ್ರಯತ್ನಿಸೋಣಾ ಎಂದಿದ್ದರು. ಅದಕ್ಕೆ ಅಶ್ವಿನಿ ಮೇಡಂ ಒಪ್ಪಿಗೆ ಇತ್ತು. ಹೀಗಾಗಿ ಪ್ರಧಾನಿಯವರು ದಾವಣಗೆರೆಗೆ ಬಂದಾಗ ಭೇಟಿ ಮಾಡಿಸಿದೆವು. ನಮ್ಮನ್ನು ದೂರದಲ್ಲೇ ನಿಲ್ಲಿಸಿ, ಅಶ್ವಿನಿ ಮೇಡಂ ಮತ್ತು ಪುನೀತ್ ಸರ್ ಇಬ್ಬರೇ ಮೋದಿ ಅವರ ಭೇಟಿಗೆ ಮುಂದೆ ಹೋಗಿದ್ದರು. ಆಗ ಅವರಿಬ್ಬರ ನಡುವೆ ಏನು ಮಾತುಕತೆ ಆಯಿತು ಗೊತ್ತಿಲ್ಲ. ಆದ್ರೆ ರಾಜಕೀಯಕ್ಕೆ ಬರುವ ಯಾವ ಸುಳಿವನ್ನು ನೀಡಲಿಲ್ಲ ಎಂದಿದ್ದಾರೆ.
GIPHY App Key not set. Please check settings