ನವದೆಹಲಿ: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಲೇ ಇದೆ. ಈ ಹಿನ್ನೆಲೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದಿದ್ದು, ಆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುತ್ತೆ.

ಸಂಜೆ 4 ಗಂಟೆ ಸಭೆ ಮಾಡಲಾಗುತ್ತದೆ. ರಾಜ್ಯದ ಎಲ್ಲಾ ಸಿಎಂ ಗಳ ಜೊತೆ ಕೊರೊನಾ ನಿರ್ವಹಣೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೊನ್ನೆ ಕೂಡ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಇದೀಗ ಎಲ್ಲಾ ರಾಜ್ಯದ ಸಿಎಂ ಗಳ ಜೊತೆ ಸಭೆ ನಡೆಸಲಿದ್ದಾರೆ.
ಇನ್ನು ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ದಿನೇ ದಿನೇ ಏರಿಕೆಯಾಗ್ತಾನೆ ಇದೆ. ಇದು ಸಾಮಾನ್ಯವಾಗಿ ಜನರಿಗೆ ಕೊರೊನಾ ಭಯಕ್ಕಿಂತ ಇನ್ನೆಲ್ಲಿ ಲಾಕ್ಡೌನ್ ಮಾಡ್ತಾರೋ ಅನ್ನೋ ಭಯ ಶುರುವಾಗಿದೆ. ಇಂದಿನ ಪ್ರಧಾನಿ ಮೋದಿ ಅವರ ಸಭೆಯಲ್ಲು ಮುಖ್ಯಮಂತ್ರಿಗಳಿಗೆ ಯಾವ ಸೂಚನೆ ನೀಡ್ತಾರೆ ಅನ್ನೋದನ್ನ ನೋಡ್ಬೇಕಿದೆ.
