Connect with us

Hi, what are you looking for?

ಪ್ರಮುಖ ಸುದ್ದಿ

ನೂತನ ಸಂಸತ್ ಭವನಕ್ಕೆ ಮೋದಿ ಭೂಮಿ ಪೂಜೆ: ಐತಿಹಾಸ ಕ್ಷಣಕ್ಕೆ ಸಾಕ್ಷಿಯಾದ ಗಣ್ಯರು

ಸುದ್ದಿಒನ್, ನವದೆಹಲಿ : ನೂತನ ಸಂಸತ್ ಭವನ ಕಟ್ಟಡದ ಶಿಲಾನ್ಯಾಸಕ್ಕೆ ಪ್ರಧಾನಿ ಮೋದಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ದೆಹಲಿಯ ಇಂಡಿಯಾ ಗೇಟ್ ಬಳಿಯ ಸೆಂಟ್ರಲ್ ವಿಸ್ಟಾದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಟಾಟಾ ಟ್ರಸ್ಟ್ ಚೇರ್‌ಮನ್ ರತನ್ ಟಾಟಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕೇಂದ್ರ ಸಚಿವ ಹೆಚ್‌ಎಸ್ ಪುರಿ ಹಾಗೂ ಹಲವು ಧಾರ್ಮಿಕ ಮುಖಂಡರು ಭಾಗಿಯಾಗಿದ್ದಾರೆ.

ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಹೊಣೆಯನ್ನು ಟಾಟಾ ಪ್ರಾಜೆಕ್ಟ್ ಸಂಸ್ಥೆಗೆ ನೀಡಿದೆ. ಹೊಸ ಸಂಸತ್ತಿನ ಕಟ್ಟಡ ಒಟ್ಟು 20,000 ಕೋಟಿ ರೂ.ಗಳ ಯೋಜನೆಯಾಗಿದ್ದು, ಸೆಂಟ್ರಲ್ ವಿಸ್ಟಾ ಯೋಜನೆಯ ಪ್ರಮುಖ ಭಾಗವಾಗಿದೆ. ಇದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ನ ಯುದ್ಧ ಸ್ಮಾರಕದವರರೆಗಿನ 3 ಕಿ.ಮೀ ವ್ಯಾಪ್ತಿಯನ್ನು ಒಳಗೊಳ್ಳಲಿದೆ.

ಒಟ್ಟು 64,500 ಚ.ಮೀ. ವ್ಯಾಪ್ತಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ವಿಶಾಲ ಸಂಸತ್ ಭವನ ನಿರ್ಮಾಣವಾಗಲಿದೆ. ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ ವ್ಯವಸ್ಥೆ ಇರಲಿದ್ದು, ರಾಜ್ಯಸಭೆಯಲ್ಲಿ 384 ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.

ಅಲ್ಲದೇ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಒಟ್ಟು 1,224 ಸದಸ್ಯರಿಗೆ ಆಸನದ ವ್ಯವಸ್ಥೆ ಇರಲಿದೆ. ಅಲ್ಲದೇ ಪ್ರತಿಯೊಬ್ಬ ಸಂಸತ್ ಸದಸ್ಯನಿಗೂ 40 ಚ.ಮೀ ವಿಸ್ತೀರ್ಣದ ಕಚೇರಿಯನ್ನು ಹೊಂದುವ ಅವಕಾಶ ಕೂಡ ಕಲ್ಪಿಸಲಾಗುವುದು. ಇದು 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ :ದವಳಗಿರಿ ಬಡಾವಣೆಯ ಒಂದನೆ ಹಂತದಲ್ಲಿರುವ ನಿವೇಶನದಲ್ಲಿ ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಹಿರಿಯ ಉಪ ನಿರ್ದೇಶಕರ ಕಚೇರಿ ಕಟ್ಟಡ ಕಾಮಗಾರಿ ಭೂಮಿ ಪೂಜೆಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೋಮವಾರ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು,...

ಪ್ರಮುಖ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ. ಅವರ ಪ್ರತಿಭಟನೆಗೆ ಪಾಕಿಸ್ತಾನ ಮೂಲದ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಬೆಂಬಲ ಸೂಚಿಸಿದ್ದಾರೆ. ಜೈಪುರ...

ಪ್ರಮುಖ ಸುದ್ದಿ

ನವದೆಹಲಿ: ದೇಶದೆಲ್ಲೆಡೆ ಕೊರೊನಾ‌ ಲಸಿಕೆ ಹಾಕಲಾಗುತ್ತಿದೆ. ಈಗಾಗಲೇ ಮೊದಲ ಹಂತ ಮುಗಿದಿದ್ದು, ಎರಡನೇ ಹಂತದ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಿದೆ. ಇದೀಗ ಪ್ರಧಾನ ಮಂತ್ರಿ ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ಇಂದು ಪ್ರಧಾನಿ...

ಪ್ರಮುಖ ಸುದ್ದಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಎಲ್ಲೆಡೆ ಹಣ ಸಂಗ್ರಹಿಸಲಾಗುತ್ತಿತ್ತು. ಈ ವಿಚಾರ ರಾಜಕೀಯ ವ್ಯಕ್ತಿಗಳ ಕಿತ್ತಾಟಕ್ಕೂ ಕಾರಣವಾಯ್ತು. ಇದೀಗ 44 ದಿನಗಳ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುತ್ತಿದ್ದ ಕೆಲಸ ಮುಕ್ತಾಯವಾಗಿದೆ....

ಪ್ರಮುಖ ಸುದ್ದಿ

ನವದೆಹಲಿ : ಮಾರ್ಚ್‌ನಲ್ಲಿ ದೇಶಾದ್ಯಂತದ ಬ್ಯಾಂಕುಗಳಿಗೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜಾ ದಿನಗಳು ಸೇರಿದಂತೆ ಒಟ್ಟು 11 ದಿನಗಳ ಕಾಲ ರಜೆ ಬಂದಿದೆ . ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಇಯರ್...

ಪ್ರಮುಖ ಸುದ್ದಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸೃಷ್ಟಿಸುತ್ತಿರುವ ಅವಾಂತರ ಹೆಚ್ಚಾಗಿದೆ. ಸಾಮಾಜಿಕ ಸ್ವಾಸ್ಥದ ದೃಷ್ಟಿಯಿಂದ ಚಿಂತನೆ ನಡೆಸಿದ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್...

ಪ್ರಮುಖ ಸುದ್ದಿ

ದಾವಣಗೆರೆ: ಆರ್‍ಎಸ್‍ಎಸ್, ಹಿಂದೂ ಸಂಘಟನೆಗಳು, ಪ್ರಧಾನಿ ಸೇರಿದಂತೆ ಎಲ್ಲರೂ ಷಡ್ಯಂತ್ರ ರೂಪಿಸಿ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದಾರೆ ಎಂದು ರಾಜ್ಯಸಭಾದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಪ್ರಮುಖ ಸುದ್ದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪಿಎಂ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಪ್ರಚಾರದಲ್ಲಿ ತೊಡಗಿರುವ ಮಮತಾ ಬ್ಯಾನರ್ಜಿ, ದುನ್ ಲೋಪ್ ನಲ್ಲಿ ಮೋದಿ ವಿರುದ್ಧ...

ಪ್ರಮುಖ ಸುದ್ದಿ

8 ಕೋಟಿ ಜನರು ಭಾಗವಹಿಸುವ ಸಾಧ್ಯತೆ ರೈತರ ಮಾಡಿದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ದಿಗ್ಬಂಧನಗೊಳಿಸುವ ಯೋಜನೆ ಪೆಟ್ರೋಲಿಯಂ ಬೆಲೆಗಳು, ಇ-ವೇ ಬಿಲ್ ನಿಬಂಧನೆಗಳ ವಿರುದ್ಧ ಪ್ರತಿಭಟನೆ ನವದೆಹಲಿ:  ದಿನದಿಂದ ದಿನಕ್ಕೆ ಏರುತ್ತಿರುವ, ಶತಕದ...

error: Content is protected !!