in ,

ಫೋಟೋಗ್ರಾಫರ್ ಪ್ರವೀಣ್ ಜೈನ್ ಕ್ಯಾಮಾರ ಕಣ್ಣಲ್ಲಿ ಅರಳಿದ ನವದುರ್ಗೆಯರು

suddione whatsapp group join

ಸುದ್ದಿಒನ್, ಚಿತ್ರದುರ್ಗ, (ಅ.07) : ದಸರಾ ಹಬ್ಬದ ಪ್ರಯುಕ್ತ ದೇವಿಯ ಮಹಿಮೆವುಳ್ಳ ಚಿತ್ರ ಪ್ರದರ್ಶನವನ್ನು ಆನ್‌ಲೈನ್ ಮೂಲಕ ಏರ್ಪಡಿಸಿದ್ದಾರೆ ಹವ್ಯಾಸಿ ಫೋಟೋಗ್ರಾಫರ್ ಪ್ರವೀಣ್ ಜೈನ್.

ಚಿತ್ರದುರ್ಗದ ಪ್ರವೀಣ್ ಜೈನ್ ಕಳೆದ 6 ವರ್ಷಗಳಿಂದ ಫೋಟೋಗ್ರಾಫಿಯನ್ನು ಹವ್ಯಾಸವನ್ನಾಗಿಸಿಕೊಂಡು ಇದೀಗ ಹೊಸ ಸ್ಪರ್ಷ ನೀಡಿದ್ದಾರೆ. ಚಿತ್ರದುರ್ಗದ ಹಲವಾರು ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಮತ್ತು ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳನ್ನು ತೆಗೆದು ಪ್ರಸಿದ್ಧಿಯಾಗಿದ್ದಾರೆ.

ಇವರ ವಿಶೇಷ ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿ ಪೇಜ್‌ನಲ್ಲಿ, ಕರ್ನಾಟಕ ಪ್ರವಾಸೋದ್ಯಮ ಜಾಲತಾಣದಲ್ಲಿ CHIIZ International Magzin ನಲ್ಲಿ ಹಾಗೂ MI ಮೊಬೈಲ್ ಕಂಪನಿಯ ವಾಲ್‌ಪೇಪರ್ ಸೇರಿದಂತೆ ವಿವಿಧೆಡೆ ಪ್ರಕಟಗೊಂಡಿವೆ.

ಇದೀಗ ದಸರಾ ಹಬ್ಬದ ಪ್ರಯುಕ್ತ ನವದುರ್ಗೆಯರ ವಿನೂತನ ವಿಶಿಷ್ಟ ವಸ್ತ್ರ ವಿನ್ಯಾಸ ಮತ್ತು ಮೇಕಪ್‌ನೊಂದಿಗೆ ರೂಪದರ್ಶಿಯರಿಗೆ ನವದುರ್ಗೆಯರ ವೇಷದೊಂದಿಗೆ ಪೋಟೋ ಶೂಟ್ ಮಾಡಿದ್ದಾರೆ. ಈ ಮೂಲಕ ದಸರಾ ಹಬ್ಬದ ಒಂಭತ್ತು ದಿನಗಳ ಮಹಿಮೆಯನ್ನು ತಿಳಿಸಲು ಸಿದ್ಧತೆ ನಡೆಸಿದ್ದಾರೆ.

ಪ್ರವೀಣ್ ಜೈನ್ ಅವರ ಕ್ರಿಯಾಶೀಲತೆಗೆ ಜೀವ ತುಂಬಿದ್ದಾರೆ ಮೇಕಪ್ ಕಲಾವಿದೆ ಜಯಲಕ್ಷ್ಮಿ ರಘು ಹಾಗೂ ರೂಪದರ್ಶಿಯರಾದ ಬಿ.ಎಸ್. ಚಂದನ, ಎಂ.ರAಜಿತ, ನಿಖಿತ ಬ್ಯಾಡಗಿ, ಸ್ನೇಹ ಭಂಡಾರಿ, ಅಂಕಿತ ಕೆಂಚಪ್ಪ, ಸಂಚಿತ, ನೈದಿಲೆ, ಸೃಷ್ಟಿ, ಪಿ.ಚಂದನ.

ಪ್ರತಿದಿನ ಮಧ್ಯಾಹ್ನ ೧೨ ಗಂಟೆಗೆ ಚಿತ್ರಗಳನ್ನು http://www.instagram.com/prapture, http.//www.instagram.com/glam_o_jaya ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ಮೊದಲನೆ ದಿನ ಶೈಲಪುತ್ರಿ ಪರ್ವತರಾಜನ ಮಗಳು ಸತಿದೇವಿಯ ಪುರ್ನಜನ್ಮ ಆದಿಶಕ್ತಿ ಎಂದು ಗುರುತಿಸಲಾಗಿದೆ. ಎರಡನೇ ದಿನ ಬ್ರಹ್ಮಚಾರಿಣಿ ಸೌಮ್ಯಳೂ, ಶಾಂತ ಸ್ವಭಾವದವಳೂ ಶಿವನನ್ನು ಪತಿಯಾಗಿ ಪಡೆಯಲು ನಾರದನ ಉಪದೇಶದಂತೆ ತಪಸ್ಸು ಮಾಡುತ್ತಾಳೆ. ಆದ ಕಾರಣ ಬ್ರಹ್ಮಚಾರಿಣಿ ಹೆಸರು ಬಂದಿದೆ.

ಮೂರನೇ ದಿನ ಚಂದ್ರಘಟ ಮಾತಾ ರೌದ್ರ ಸ್ವರೂಪಿಣಿಯಾಗಿರುತ್ತಾಳೆ. ಭಕ್ತರನ್ನು ಪ್ರೀತಿಯಿಂದ ಸಲವುವ ತಾಯಿ ಚಂದ್ರಕಾರದ ಘಂಟೆ ಮಸ್ಕದಲ್ಲಿ ಧರಿಸಿದವಳು. ೧೦ ಕೈಗಳಿದ್ದು ೧೦ ಕೈಗಳಲ್ಲಿ ಶಸ್ತಾçಸ್ತç ಹಿಡಿದವಳು. ನಾಲ್ಕನೇ ದಿನ ಕೂಷ್ಮಾಂಡ ದೇವಿ ಭೂ ಮಂಡಲವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದ್ದಾಳೆ ಎಂದು ಹೇಳಲಾಗುತ್ತದೆ. ಈ ತಾಯಿ ತನ್ನ ನಗುವಿನಿಂದ ಅಂದಕಾರವನ್ನು ತೊಡೆದು ಹಾಕುವ ಶಕ್ತಿ ದೇವತೆ.

ಐದನೇ ದಿನ ಸ್ಕಂದ ಮಾತೆ ಈ ಮಾತೆ ಚಂದ್ರಮುಖ ಹೊಂದಿರುತ್ತಾಳೆ. ಪಂಚಮಿ ತಿಥಿಯಲ್ಲಿ ಬರುವಳು ಈ ಆವತಾರಕ್ಕೆ ಪೂಜಿಸುವುದರಿಂದ ಭಕ್ತರು ಜೀವನ ಸಮಸ್ಯೆಯಿಂದ ಮುಕ್ತರಾಗುತ್ತಾರೆ. ಆರನೇ ದಿನ ಕಾತ್ಯಾಯಿನಿ ದೇವಿ ಈ ದೇವಿಯ ಕರುಣಿ ಅಥವಾ ಆರ್ಶೀವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ. ಈ ದೇವಿ ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧಚಂದ್ರಕೃತಿ ಅಲಂಕೃತಳಾಗಿರುತ್ತಾಳೆ.

ಏಳನೇ ದಿನ ಕಾಲರಾತ್ರಿ ದೇವಿ ಈ ದೇವಿಯ ಆರಾಧನೆಯಿಂದ ಎಲ್ಲಾ ರೀತಿ ದೃಷ್ಟಶಕ್ತಿ, ದೃಷ್ಟತೆ ಮತ್ತು ನಕರಾತ್ಮಕ ಶಕ್ತಿ ಹಾಗೂ ಭೀತಿ ದೂರವಾಗುತ್ತದೆ.  ಎಂಟನೇ ದಿನ ಮಹಾಗೌರಿ ದೇವಿ ಗೌರಿ ಎಂದರೆ ಗಿರಿ ಅಥವಾ ಪರ್ವತನ ಮಗಳು ಕೈಯಲ್ಲಿ ಡಮರುಗ, ತ್ರಿಶೂಲ ಹಿಡಿದಿರುವಳು. ರಾಹುವಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವಳು. ಹಾಗೂ ಒಂಭತ್ತನೆ ದಿನ ಸಿದ್ಧಿದಾತ್ರಿ ದೇವಿ ಈಶ್ವರ ದೇವರ ದೇಹವನ್ನು ಪ್ರವೇಶಿಸಿ ಅರ್ಧಭಾಗದಲ್ಲಿ ನಿಂತಹಳು. ಕೈಯಲ್ಲಿ ಶಂಖ ರಾಜದಂಡ ಮತ್ತು ತಾವರೆ ಇರುವುದನ್ನು ಒಳಾಂಗಣದಲ್ಲಿ ಚಿತ್ರೀಕರಿಸಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕಾಂಗ್ರೆಸ್, ಜೆಡಿಎಸ್ ಅವರದ್ದು ವಿಕೃತ ಮನಸ್ಸು : ಎಂ ಪಿ ರೇಣುಕಾಚಾರ್ಯ ಕಿಡಿ

ಐಟಿ ಅಧಿಕಾರುಗಳು ಕಾನೂನಾತ್ಮಕವಾಗಿ ಅವರ ಕೆಲಸ ಮಾಡಿದ್ದಾರೆ: ಅರಗ ಜ್ಞಾನೇಂದ್ರ