in ,

ಸೆಪ್ಟೆಂಬರ್ 20ಕ್ಕೆ ನೀನಾಸಂ ಸತೀಶ್ ಅಭಿನಯದ ಪೆಟ್ರೋ ಮ್ಯಾಕ್ಸ್ ಟ್ರೈಲರ್ ರಿಲೀಸ್

suddione whatsapp group join
ನೀನಾಸಂ ಸತೀಶ್  ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೆಟ್ರೋ ಮ್ಯಾಕ್ಸ್. ಪ್ರಪ್ರಥಮ ಬಾರಿಗೆ ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟಿ ಹರಿಪ್ರಿಯಾ ಹಾಗೂ ನೀನಾಸಂ ಸತೀಶ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಪೆಟ್ರೋ ಮ್ಯಾಕ್ಸ್ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರತಂಡ ಪ್ರೇಕ್ಷಕರಿಕೆ ಚಿತ್ರದ ಸಣ್ಣ ತುಣುಕು ನೀಡಲು ಸಜ್ಜಾಗಿದೆ.
ಟೀಸರ್ ಮೂಲಕವೇ  ನಿರೀಕ್ಷೆ ಹೆಚ್ಚಿಸಿದ್ದ ಪೆಟ್ರೋ ಮ್ಯಾಕ್ಸ್ ಚಿತ್ರದ ಟ್ರೈಲರ್ ಸೆಪ್ಟೆಂಬರ್ 20ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ  ಪೆಟ್ರೋ ಮ್ಯಾಕ್ಸ್ ಚಿತ್ರವನ್ನು  ಕೇವಲ 36 ದಿನಗಳಲ್ಲಿ ಚಿತ್ರೀಕರಿಸಲಾಗಿದ್ದು, ಕಾಮಿಡಿ ಜೊತೆಗೆ ಇಂಟ್ರಸ್ಟಿಂಗ್ ಕಥೆಯೇ ಚಿತ್ರದ ಹೈಲೈಟ್.
ನೀನಾಸಂ ಸತೀಶ್ ರಾಕೆಟ್ ಸಿನಿಮಾ ನಂತರ  ಮತ್ತೊಮ್ಮೆ ಸಿನಿಮಾ‌ ನಿರ್ಮಾಣಕ್ಕೆ ಮುಂದಾಗಿದ್ದು, ಪೆಟ್ರೋ ಮ್ಯಾಕ್ಸ್ನಲ್ಲಿ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋ ಮ್ಯಾಕ್ಸ್ ಪಿಕ್ಚರ್ಸ್‌ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಪೆಟ್ರೋ ಮ್ಯಾಕ್ಸ್ ಚಿತ್ರದಲ್ಲಿ ವಿಜಯಲಕ್ಷೀ ಸಿಂಗ್, ಕಾರುಣ್ಯ ರಾಮ್ ಸೇರಿದಂತೆ ಅನೇಕ ಕಲಾವಿದರು ಬಣ್ಣಹಚ್ಚಿದ್ದಾರೆ.
ಇನ್ನು ನಿರ್ದೆಶಕ ವಿಜಯ ಪ್ರಸಾದ್ ಅವರೇ ಕಥೆ- ಚಿತ್ರಕಥೆ  ಬರೆದಿದ್ದು, ಅನೂಪ್ ಸಿಳೀನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ವರ್ಕ್ ಪೆಟ್ರೋ ಮ್ಯಾಕ್ಸ್ ಚಿತ್ರಕ್ಕಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕರ್ನಾಟಕದಲ್ಲಿ ದೇವಾಲಯಗಳನ್ನ ಅವಸರದಲ್ಲಿ ಒಡೆಯಬಾರದು : ಸಿಎಂ ಬಸವರಾಜ್ ಬೊಮ್ಮಾಯಿ

ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ : ಹೆಚ್ ಡಿ ಕುಮಾರಸ್ವಾಮಿ