ಬೆಂಗಳೂರು: ತಮಿಳು ಖ್ಯಾತ ನಟ ವಿಜಯ್ ಸೇತುಪತಿ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿದ್ದ ನಟ ವಿಜಯ್ ಸೇರುಪತಿ, ವಿಮಾನದಲ್ಲಿ ಬರುವ ವೇಳೆ ಪ್ರಯಾಣಿಕನ ಜೊತೆ ಕಿರಿಕ್ ಮಾಡುಕೊಂಡಿದ್ದರು ಎನ್ನಲಾಗಿದೆ.
ಕಿರಿಕ್ ನಂತರ ಏರ್ಪೋಟ್ ನಿಂದ ಹೊರ ಬರ್ತಿದ್ದ ನಟ ವಿಜಯ್ ಸೇತು ಪತಿ ಮತ್ತು ಅವನ ಪಿಎ ಮೇಲೆ ಹಿಂದಿನಿಂದ ಬಂದು ನಟನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ. ಹಲ್ಲೆಯ ನಂತರ ನಟ ಮತ್ತು ಪ್ರಯಾಣಿಕ ಏರ್ಪೋಟ್ ಠಾಣೆಗೆ ಹೋಗಿದ್ದರು. ಅಲ್ಲಿ ಕೇಸ್ ಹಾಕದೆ ಅಪಾಲಜಿ ಬರೆಸಿಕೊಂಡು ರಾಜಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಮಿಳಿನ ರಿಯಾಲಿಟಿ ಶೋ ಶೂಟಿಂಗ್ ಬರ್ತಿದ್ದ ವಿಜಯ್ ಸೇತುಪತಿ ನಿನ್ನೆಯೂ ಬಂದಿದ್ದರು. ಇನೋವೆಟಿವ್ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ವಿಜಯ್ ಸೇತುಪತಿ ಜೊತೆ ಬರ್ತಾ ಇದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ಇದ್ದರು ಎನ್ನಲಾಗ್ತಿದೆ. ಈ ವೇಳೆ ವಿಜಯ್ ಸೇತುಪತಿಯ ಪಿಎಗೂ ಸಹ ಪ್ರಯಾಣಿಕನಿಗೂ ಜಗಳ ಆಗಿದೆ. ನಂತರ ಏರ್ಪೋರ್ಟ್ ನಲ್ಲಿ ಇಳಿದು ಬರೋವಾಗ ಹಲ್ಲೆ ನಡೆದಿದೆ.
ಈ ಸಂಬಂಧ ತಮಿಳು ನಟ ವಿಜಯ್ ಸೇತುಪತಿ ಹೇಳಿಕೆ ನೀಡಿದ್ದು, ಪುನೀತ್ ರಾಜ್ ಕುಮಾರ್ ಫ್ಯಾನ್ ನಾನು. ಅವರನ್ನು ಇದುವರೆಗೆ ಭೇಟಿ ಆಗಿಲ್ಲ, ಆ ಸೌಭಾಗ್ಯ ನನಗೆ ಸಿಕ್ಕಿಲ್ಲ. ಆದರೆ ಕಾಲ್ ನಲ್ಲಿ ಒಂದು ಸಲ ಮಾತನಾಡಿದ್ದೆ. ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು. ನನ್ನ ಸಿನೆಮಾ ನೋಡಿ ಕಾಲ್ ಮಾಡಿದ್ರು ನನಗೆ. ಅವರು ಇಲ್ಲ ಎನ್ನುವುದು ಈ ಕ್ಷಣದ ವರೆಗೆ ಅರಗಿಸಿಕೊಳ್ಳಲು ಆಗಿಲ್ಲ ನಂಗೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…