ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಮನೆ ಮುಂದೆ ಕೋಳಿ – ಸೀರೆ ಎಸೆದ ಜನ : ಯಾಕೆ ಗೊತ್ತಾ..?
ಮಂಡ್ಯ: ಇಂದು ರಾಜ್ಯದಲ್ಲಿ ಮತದಾನ ನಡೆಯುತ್ತಿದೆ. ನಿನ್ನೆ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ಜನರಿಗೆ ಕೋಳಿ, ಸೀರೆಯನ್ನು ಹಂಚಿದ್ದಾರೆ ಎನ್ನಲಾಗಿದೆ. ಆದ್ರೆ ಆ ಸೀರೆ, ಕೋಳಿಯನ್ನೆಲ್ಲಾ ಬೆಂಬಲಿಗರ ಮನೆ ಮುಂದೆ ಬಿಸಾಡಿ ಹೋಗಿರುವ ಘಟನೆ ನಡೆದಿದೆ.
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ಬೆಂಬಲಿಗರು ಈ ರೀತಿ ಹಂಚಿದ್ದಾರೆ ಎನ್ನಲಾಗಿದೆ. ಕೆ ಆರ್ ಪೇಟೆ ತಾಲೂಕಿನ ಗಂಜಿಗೆರೆ ಹಾಗೂ ಅಕ್ಕಿಹೆಬ್ಬಾಳು ಗ್ರಾಮದ ಜನ, ಇದನ್ನೆಲ್ಲಾ ತಂದು ಅವರ ಮನೆ ಮುಂದೆಯೇ ಎಸೆದಿದ್ದಾರೆ. ಗುಂಪು ಗುಂಪಾಗಿ ಬಂದು ನೀಡಿದ್ದ ಸೀರೆ, ಕೋಳಿಗಳನ್ನು ಎಸೆದು ಹೋಗಿದ್ದಾರೆ.
ಜನರು ಸೀರೆ, ಕೋಳಿಗಿಂತ ಅಭಿವೃದ್ಧಿ ಬೇಕು ಎಂಬುದನ್ನು ಬಯಸುತ್ತಿದ್ದಾರೆ. ಅದಕ್ಕೆ ರಾತ್ರಿ ಸಮಯದಲ್ಲಿ ಬಂದು ಹಂಚಿದ್ದನ್ನು ಬೆಳಗ್ಗೆ ತೆಗೆದುಕೊಂಡು ಹೋಗಿ ಅವರ ಮನೆ ಮುಂದೆಯೇ ಬಿಸಾಡಿ ಬಂದಿದ್ದಾರೆ. ಚುನಾವಣೆ ನಡೆಯುತ್ತಿರುವ ಹೊತ್ತಲ್ಲೇ ಇಂಥದ್ದೊಂದು ಘಟನೆ ನಡೆದಿದೆ.





GIPHY App Key not set. Please check settings