
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ರೂಪೇಶ್ ರಾಜಣ್ಣ ಮತ್ತೆ ಹೋರಾಟ ಶುರು ಮಾಡಿದ್ದಾರೆ. ಇತ್ತಿಚೆಗಷ್ಟೇ ಕಿಶೋರ್ ನಟನೆಯ ಪೆಂಟಗನ್ ಸಿನಿಮಾದ ಐದನೇ ಕಥೆಯ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ನೋಡಿದ ರೂಪೇಶ್ ರಾಜಣ್ಣ, ವೇದಿಕೆ ಮೇಲೆಯೇ ಗರಂ ಆಗಿದ್ದಾರೆ.
ಪೆಂಟಗನ್ ಸಿನಿಮಾದಲ್ಲಿ ಕನ್ನಡಪರ ಹೋರಾಟಗಾರರ ಕಥೆ ಇದೆ. ಈ ಟೀಸರ್ ನಲ್ಲಿ ಕನ್ನಡಪರ ಹೋರಾಟಗಾರರ ಬಗ್ಗೆ ಹಲವು ಪದಗಳನ್ನು ಬಳಕೆ ಮಾಡಲಾಗಿದೆ. ರೋಲ್ ಕಾಲ್ ಶಬ್ದ ಬಳಕೆಯಾಗಿದೆ. ಇದಕ್ಕೆ ರೂಪೇಶ್ ರಾಜಣ್ಣ ವಿರೋಧ ವ್ಯಕ್ತಪಡಿಸಿದ್ದು, ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಎ ಕೂಡ ವಿರೋಧಿಸಿದ್ದಾರೆ.
ವಿರೋಧಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಗುರು ದೇಶಪಾಂಡೆ, ಟೀಸರ್ ನೋಡಿಯೇ ಎಲ್ಲದನ್ನು ತೀರ್ಮಾನಿಸಬೇಡಿ. ಸಿನಿಮಾ ಬಂದ ಮೇಲೆ ಅದರ ಒಳಗೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಟೀಸರ್ ನಲ್ಲಿ ಏನೆ ಮಾತನಾಡಿಸಿದರೂ, ಸಿನಿಮಾದಲ್ಲಿ ಅದಕ್ಕೆ ಉತ್ತರ ಸಿಗಲಿದೆ. ಸಿನಿಮಾ ನೋಡಿದ ಮೇಲೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಆಗ ಪ್ರತಿಭಟಿಸಿ ಎಂದಿದ್ದಾರೆ.

GIPHY App Key not set. Please check settings