in ,

ಮೀಟೂ ವಿರುದ್ಧ ಧ್ವನಿ ಎತ್ತಿದ್ದ ನಟಿ ಮೇಲೆ ಹಲ್ಲೆ, ಆಸಿಡ್ ದಾಳಿ ಯತ್ನ..!

suddione whatsapp group join

ಮುಂಬೈ: ನಟಿ ಪಾಯಲ್ ಘೋಷ್ ಯಾರಿಗೆ ಗೊತ್ತಿಲ್ಲ ಹೇಳಿ. ಮೀಟೂ ಪ್ರಕರಣ ಸದ್ದು ಮಾಡಿದ್ದಾಗ ಈಕೆಯ ಹೆಸರು ಅಷ್ಟೇ ಸದ್ದು ಮಾಡಿತ್ತು. ನಿರ್ಮಾಪಕ, ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ವರಿಸಿ, ಎಲ್ಲರ ಚಿತ್ತ ತನ್ನತ್ತ ಕಸಿದಿದ್ದರು. ಇದೀಗ ನಟಿ ಮೇಲೆ ಅದ್ಯಾರೋ ಮುಸುಕು ಹಾಕಿಕೊಂಡಿದ್ದ ಒಂದಷ್ಟು ಮಂದಿ ಹಲ್ಲೆ ಮಾಡಿದ್ದಾರೆ.

ನಟಿ ಪಾಯಲ್ ಘೋಷ್, ಮೆಡಿಕಲ್ ಶಾಪ್ ನಲ್ಲಿ ಔಷಧ ತೆಗೆದುಕೊಂಡು ಕಾರಿನಲ್ಲಿ ಕುಳಿತಿದ್ದರಂತೆ. ಆಗ ಯಾರೋ ಕಿಡಿಗೇಡಿಗಳು ದಾಳಿ ಮಾಡಿದ್ದಾರೆಂದು ಪಾಯಲ್ ಆರೋಪಿಸಿದ್ದಾರೆ. ಕೆಲವು ಮುಖವಾಡ ತೊಟ್ಟಿದ್ದ ವ್ಯಕ್ತಿಗಳು ನನ್ನ ಮೇಲೆ ಆಸಿಡ್ ಎರಚಲು ಯತ್ನಿಸಿದ್ದಾರೆ. ಕಬ್ಬಿಣದ ರಾಡ್ ನಿಂದ ಹಲ್ಲೆಗೂ ಯತ್ನಿಸಿದ್ದಾರೆಂದು ಹೇಳಿದ್ದಾರೆ.

ಈ ಸಂಬಂಧ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿರುವ ಪಾಹಲ್ ಅದರಲ್ಲಿ, ನಾನು ನಿನ್ನೆ ಔಷಧಿಗಳನ್ನು ಪಡೆಯಲು ಹೊರಗೆ ಹೋಗಿದ್ದೆ. ಅದನ್ನು ಖರೀದಿಸಿ ನಾನು ನನ್ನ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದಾಗ, ಕೆಲವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಅವರ ಕೈಯಲ್ಲಿ ಗಾಜಿನ ಬಾಟಲಿಯೂ ಇತ್ತು. ಅದು ಏನೆಂದು ನನಗೆ ಗೊತ್ತಿಲ್ಲ. ಆದರೆ ಅದರಲ್ಲಿ ಆಸಿಡ್ ಇರುವಂತೆ ಕಾಣುತ್ತಿತ್ತು. ಅಲ್ಲದೆ ಅವರು ಕಬ್ಬಿಣದ ರಾಡ್‌ಗಳಿಂದ ನನ್ನನ್ನು ಹೊಡೆಯಲು ಪ್ರಯತ್ನಿಸಿದರು. ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಜೋರಾಗಿ ಕೂಗಿಕೊಂಡೆ. ಆಗ ಅವರು ಪರಾರಿಯಾದರು. ಆ ಕ್ಷಣದಲ್ಲಿ ಅವರು ತಂದಿದ್ದ ಕಬ್ಬಿಣದ ರಾಡ್ ನನ್ನ ಎಡಗೈಗೆ ತಾಗಿ ಬಿತ್ತು ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಉತ್ತರಪ್ರದೇಶದ ಕಾನೂನನ್ನೇ ರಾಜ್ಯಕ್ಕೂ ತನ್ನಿ : ಮತಾಂತರದ ಬಗ್ಗೆ ಶಾಸಕ ಬೋಪಯ್ಯ ಮಾತು..!

ಮಹಾಂತ ನರೇಂದ್ರ ಗಿರಿ ಸಾವಿಗೆ ಹೊಸ ಟ್ವಿಸ್ಟ್ ಕೊಡ್ತು ಆ ಡೆತ್ ನೋಟ್..!