in

ಪಕ್ಷದ ಪದಾಧಿಕಾರಿಗಳ ಮನೆ ಮೇಲೆ ಜೆಡಿಎಸ್ ಬಾವುಟ ಕಟ್ಟಲು ಸೂಚನೆ : ಕಾರಣ ಏನ್ ಗೊತ್ತಾ..?

suddione whatsapp group join

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ಪಕ್ಷ ಬಲವರ್ಧನೆಯಲ್ಲಿ ತೊಡಗಿವೆ. ಅದರಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಈ ಬಾರಿ ಪಕ್ಷವನ್ನ ಅಧಿಕಾರಕ್ಕೆ ತರಲೇಬೇಕೆಂಬ ಹಠ ಜೆಡಿಎಸ್ ನಲ್ಲಿದೆ. ಒಂದು ಭರವಸೆಯೂ ಇದೆ. ಹೀಗಾಗಿ ತಯಾರಿಯ ಒಂದು ಭಾಗವಾಗಿ ಎಲ್ಲಾ ಪದಾಧಿಕಾರಿಗಳಿಗೂ ತಮ್ಮ ತಮ್ಮ ಮನೆಯ ಮೇಲೆ ಜೆಡಿಎಸ್ ಬಾವುಟ ಕಟ್ಟೋಕೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳ ಪಾದಾಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಮನೆಯ ಮೇಲೆ ಕಡ್ಡಾಯವಾಗಿ ಬಾವುಟ ಹಾಕೋದಕ್ಕೆ ಜೆಡಿಎಸ್ ಸೂಚಿಸಿದೆ. ಅಷ್ಟೇ ಅಲ್ಲ ಬಾವುಟದಲ್ಲಿ ಹೆಸರು, ಪಕ್ಷದಲ್ಲಿ ಹೊಂದಿರೋ ಸ್ಥಾನವನ್ನು ಭಾವುಟದಲ್ಲಿ ಹಾಕುವಂತೆ ಸೂಚನೆ ನೀಡಲಾಗಿದೆ.

ಇನ್ನು 2023ರ ಚುನಾವಣೆ ಬಹು ದೂರ ಇರುವಾಗಲೇ ಪಕ್ಷಗಳು ತರಹೇವಾರಿ ಐಡಿಯಾಗಳನ್ನ ಮಾಡುತ್ತಿವೆ. ಈ ಬಾರಿ ಸ್ವತಂತ್ರ್ಯ ಅಧಿಕಾರಿ ಕೊಟ್ಟು ನೋಡಿ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಜನರ ಬಳಿ ಮನವಿ ಮಾಡಿದ್ದಾರೆ. ಜನ ಬದಲಾವಣೆ ಬಯಸಿ ಜೆಡಿಎಸ್ ಕೈ ಹಿಡಿತಾರಾ ಅನ್ನೋದನ್ನ ನೋಡ್ಬೇಕಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಳ್ಳಾರಿಯಲ್ಲಿ ಕಲುಷಿತ ನೀರು ಸೇವಿಸಿ 30 ಕ್ಕೂ ಹೆಚ್ಚು ಜನ ಅಸ್ವಸ್ಥ..!

17 ತಿಂಗಳ ಬಳಿಕ ಸವದತ್ತಿ ಯಲ್ಲಮ್ಮ ದರ್ಶನ ಕೊಡಲಿದ್ದಾಳೆ..!