ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವು ಬೆನ್ನಲ್ಲೇ ಮೊಳಗಿದ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳು !

suddionenews
1 Min Read

ಸುದ್ದಿಒನ್ ಡೆಸ್ಕ್

ಬೆಂಗಳೂರು :  ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹೊಸ ಇತಿಹಾಸ ಸೃಷ್ಟಿಸಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ, ಸೋನಿಯಾ ಗಾಂಧಿಯವರ ರಾಜಕೀಯ ತಂತ್ರಗಳು, ಪ್ರಿಯಾಂಕಾ ಗಾಂಧಿಯವರ ಪರಿಶ್ರಮ, ಸಿದ್ದರಾಮಯ್ಯನವರ ಮಾಸ್ ಇಮೇಜ್, ಡಿ.ಕೆ.ಶಿವಕುಮಾರ್ ಅವರ ಪಕ್ಷ ಸಂಘಟನೆ,  ಕಾರ್ಯಕರ್ತರ ಶ್ರಮ ಇವೆಲ್ಲವೂ ಸೇರಿ ಕಾಂಗ್ರೆಸ್ ಗೆಲುವಿನ ಹಾದಿ ಸುಗಮವಾಯಿತು.

ಇಂತಹ ವಿಜಯೋತ್ಸವವನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸಬೇಕು ನಿಜ. ಆದರೆ, ಕೆಲವರು ಕಿಡಿಗೇಡಿಗಳ ಕೃತ್ಯದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿದೆ.

ಕಾಂಗ್ರೆಸ್ ಪಡೆದ ಗೆಲುವಿನಿಂದ ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಸಂಭ್ರಮ ಆಚರಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲೂ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಲ ಯುವಕರ ವರ್ತನೆ ವಿವಾದಕ್ಕೀಡಾಯಿತು.

‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳು ಚರ್ಚೆಗೆ ಕಾರಣವಾಯಿತು.
ಪೊಲೀಸರು ತಡೆದರೂ ಘೋಷಣೆ ಕೂಗುತ್ತಲೇ ಇದ್ದರು. ಇದೀಗ ಈ ವಿಚಾರ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇದರ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದೆ.

ಈ ಘಟನೆಗೆ ಬಿಜೆಪಿಯ ಪ್ರಮುಖ ನಾಯಕ ಅಮಿತ್ ಮಾಳವೀಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಬೆಳಗಾವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದವು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ತಯಾರಿ ನಡೆಸುತ್ತಿರುವ ಈ ಹೊತ್ತಿನಲ್ಲಿ ಪೊಲೀಸರು ನೋಡಿಯೂ ನೋಡದಂತೆ ಕುರುಡರಾಗಿದ್ದರು.

ಭಟ್ಕಳದಿಂದ ಬೆಳಗಾವಿಯವರೆಗೆ.. ‘ಮೊಹಬ್ಬತ್ ಕಿ ದುಕಾನ್’ ಹೀಗಿದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಕರ್ನಾಟಕದ ಸಾಮಾಜಿಕ ಸ್ವರೂಪವನ್ನೇ ಹಾಳು ಮಾಡುತ್ತಿದೆ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಇದು ಈಗ ಹೊಸ ಸಂಚಲನ ಮೂಡಿಸಿದೆ.

ಇಷ್ಟೇ ಅಲ್ಲ, ಮತ್ತೊಂದು ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅಮಿತ್ ಮಾಳವೀಯ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಯುವಕನೊಬ್ಬ ಪಾಕಿಸ್ತಾನದ ಧ್ವಜ ಹಿಡಿದುಕೊಂಡು ಬೀಸುತ್ತಿರುವ ದೃಶ್ಯವಿದೆ. ಇವರು ಟ್ವೀಟ್ ಮಾಡಿರುವ ವಿಡಿಯೋಗಳಿಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿರುವುದು ಗಮನಾರ್ಹ.

Share This Article
Leave a Comment

Leave a Reply

Your email address will not be published. Required fields are marked *