Connect with us

Hi, what are you looking for?

ಪ್ರಮುಖ ಸುದ್ದಿ

ನಾವಿಕನಿಲ್ಲದ ಕಾಂಗ್ರೆಸ್; ಮುಂದುವರೆದ ಮೋದಿ ಮೇನಿಯಾ !

ನವದೆಹಲಿ, ಸುದ್ದಿಒನ್ : ಇದು ಕೋವಿಡ್ ನಾಮ ಸಂವತ್ಸರ. ಹೆಸರೇ ಸೂಚಿಸುವಂತೆ, 2020 ಎಲ್ಲರಲ್ಲೂ ಕರೋನ ಭಯವನ್ನು,  ನಡುಕವನ್ನು ಉಂಟು ಮಾಡಿದ ವರ್ಷ ಇದು. ಆದರೆ, ರಾಜಕೀಯವಾಗಿ ಮಾತ್ರ ಈ ವರ್ಷ ವರ್ಣರಂಜಿತ.

ದೆಹಲಿ ಚುನಾವಣೆಯೊಂದಿಗೆ ಪ್ರಾರಂಭವಾದ ವರ್ಷ ಬಿಹಾರ ಚುನಾವಣೆಯೊಂದಿಗೆ ಕೊನೆಗೊಂಡಿತು. ಪ್ರಮುಖ ಪಕ್ಷಗಳಿಗೆ ಕರೋನಾ ಕಾಲ ರಾಜಕೀಯ ಪಾಠಗಳನ್ನು ಸರಿಯಾಗಿ ಕಲಿಸಿತು.

ಈ ವರ್ಷವೂ ಬಿಜೆಪಿ ತನ್ನ ಅಬ್ಬರವನ್ನು ಮುಂದುವರಿಸಿದೆ. ಆದರೆ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿದು ಮುನ್ನಡೆಸುವವರೇ ಇಲ್ಲದಂತಾಗಿದೆ. ತಮಿಳು ಸೂಪರ್ ಸ್ಟಾರ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಘೋಷಣೆ ಈ ವರ್ಷದ ಹೈಲೈಟ್.

ಪ್ರಧಾನಿ ನರೇಂದ್ರ ಮೋದಿಯವರು ತಮಗಿರುವ ಬ್ರಾಂಡ್ ಇಮೇಜ್ ಅನ್ನು ಉಳಿಸುಕೊಳ್ಳುವಲ್ಲಿ ಈ ವರ್ಷವೂ ಸಹ ಸಫಲರಾಗಿದ್ದಾರೆ. ಕರೋನದಂತಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಲೇ ದೇಶವನ್ನು ಆರ್ಥಿಕವಾಗಿ ಪ್ರಗತಿಯತ್ತ ಕೊಂಡೊಯ್ಯಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವು ಕರೋನ ಮಹಾಮಾರಿಯನ್ನು ಎದುರಿಸುವಲ್ಲಿ ವಿಫಲವಾಗುತ್ತದೆ ಎಂದು ಊಹಿಸಿದವರಿಗೆ, ಅವರ ನಿರೀಕ್ಷೆಯನ್ನು ಮೀರಿ‌ ತಮ್ಮದೇ ಶೈಲಿಯಲ್ಲಿ ಪ್ರಣಾಳಿಕೆಯನ್ನು ರೂಪಿಸಿದರು.

ಆತ್ಮನಿರ್ಭರ್ ‘ಭಾರತ್’ ಘೋಷಣೆಯೊಂದಿಗೆ ಮುಂದೆ ಸಾಗುತ್ತಿದ್ದಾರೆ. ಐಎಎನ್‌ಎಸ್-ಸಿ ಮತದಾರರ ಸಮೀಕ್ಷೆಯ ಪ್ರಕಾರ, ಈ ಕಷ್ಟದ ಸಮಯದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವುದರಿಂದ ಭಾರತದ ಖ್ಯಾತಿಯನ್ನು ವಿಶ್ವ ಮಟ್ಟಕ್ಕೆ ಹೆಚ್ಚಿಸಿದೆ ಎಂದು ದೇಶದ ಜನಸಂಖ್ಯೆಯ 93% ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ಅಸಮರ್ಥತೆಯು ಪ್ರಧಾನಿ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ವರ್ಷದ ಕೊನೆಯಲ್ಲಿ, ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟ ಮಾತ್ರ ಅವರನ್ನು ಮುಜುಗರಕ್ಕೀಡುಮಾಡಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

8 ಕೋಟಿ ಜನರು ಭಾಗವಹಿಸುವ ಸಾಧ್ಯತೆ ರೈತರ ಮಾಡಿದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ದಿಗ್ಬಂಧನಗೊಳಿಸುವ ಯೋಜನೆ ಪೆಟ್ರೋಲಿಯಂ ಬೆಲೆಗಳು, ಇ-ವೇ ಬಿಲ್ ನಿಬಂಧನೆಗಳ ವಿರುದ್ಧ ಪ್ರತಿಭಟನೆ ನವದೆಹಲಿ:  ದಿನದಿಂದ ದಿನಕ್ಕೆ ಏರುತ್ತಿರುವ, ಶತಕದ...

ಪ್ರಮುಖ ಸುದ್ದಿ

ನವದೆಹಲಿ : ಯೋಗ ಗುರು ಮತ್ತು ಪತಂಜಲಿ ಸಂಸ್ಥೆಯ ಸಂಸ್ಥಾಪಕ ರಾಮದೇವ್ ಬಾಬಾ ಅವರನ್ನು ಬಂಧಿಸುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.  ಕರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಪತಂಜಲಿ ಇತ್ತೀಚೆಗೆ ‘ಕೊರೊನಿಲ್’ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಈ...

ರಾಷ್ಟ್ರೀಯ ಸುದ್ದಿ

ನವದೆಹಲಿ:  ದಾಯಾದಿ ದೇಶ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಇಂಡಿಯನ್ ಏರ್ಲೈನ್ಸ್ ಪ್ರಮುಖ ಅನುಮತಿ ನೀಡಿದೆ.  ಭಾರತದ ಮೂಲಕ ಶ್ರೀಲಂಕಾಕ್ಕೆ ಹೋಗಲು ಪಾಕಿಸ್ತಾನ ಪ್ರಧಾನಿಗೆ ಭಾರತೀಯ ನಾಗರಿಕ ವಿಮಾನಯಾನ ಪ್ರಾಧಿಕಾರ (ಐಸಿಎಎ) ಅನುಮೋದನೆ...

ಪ್ರಮುಖ ಸುದ್ದಿ

ವಾರದಲ್ಲಿ 87 ಸಾವಿರ ಹೊಸ ಪ್ರಕರಣಗಳು ವ್ಯಾಕ್ಸಿನೇಷನ್ ತ್ವರಿತಗೊಳಿಸಲು ರಾಜ್ಯಗಳಿಗೆ ಕೇಂದ್ರ ಪತ್ರ ಮತ್ತೊಮ್ಮೆ ಲಾಕ್‌ಡೌನ್ ನತ್ತ ಮಹಾರಾಷ್ಟ್ರ ಸರ್ಕಾರದ ಚಿತ್ತ ಜನರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದ ಆರೋಗ್ಯ ಇಲಾಖೆ ನವದೆಹಲಿ: ಕರೋನಾ...

ಕ್ರೀಡಾ ಸುದ್ದಿ

ಚೆನ್ನೈ : ಐಪಿಎಲ್ 2021 ಮಿನಿ ಹರಾಜಿನಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮೌನ...

ಪ್ರಮುಖ ಸುದ್ದಿ

ವಾಟ್ಸಾಪ್ ಯಾವ ಘಳಿಗೆಯಲ್ಲಿ ಹೊಸ ಗೌಪ್ಯತೆ ನೀತಿ ನಿಯಮಗಳು ಜಾರಿ ಮಾಡಿತೋ, ಆವಾಗಿನಿಂದ ದುರದೃಷ್ಟ ವಕ್ಕರಿಸಿದಂತಿದೆ. ಒಂದೆಡೆ, ವಾಟ್ಸಾಪ್ ಅದರ ಪ್ರತಿಸ್ಪರ್ಧಿ ಅಪ್ಲಿಕೇಶನ್‌ಗಳಾದ ಸಿಗ್ನಲ್ ಮತ್ತು ಟೆಲಿಗ್ರಾಮ್ ಗಳನ್ನು ಡೌನ್‌ಲೋಡ್ ಮಾಡಲು ಮುಂದಾಗುತ್ತಿದ್ದಾರೆ....

ಪ್ರಮುಖ ಸುದ್ದಿ

ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದು ರಾಜ್ಯದ ಜನರಿಗೆ ಸಂತಸ ತಂದಿದ್ರೆ ಸರ್ಜಾರಕ್ಕೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ ಈ ಮಧ್ಯೆ ಅಂತರಾಷ್ಟ್ರ ಪ್ರಯಾಣಿಕರಲ್ಲಿ...

ಪ್ರಮುಖ ಸುದ್ದಿ

ಬೆಂಗಳೂರು : ಕೋವಿಡ್ ವಿಚಾರದಲ್ಲಿ ಕೊನೆಗೂ ರಾಜ್ಯ ಸರ್ಕಾರ ಎಚ್ತೆತ್ತುಕೊಂಡಿದ್ದು, ಮಹಾರಾಷ್ಟ್ರ, ಕೇರಳಕ್ಕೆ ಹೊಂದಿಕೊಂಡ ಹತ್ತು ಜಿಲ್ಲೆಗಳ ಮೇಲೆ ನಿಗಾವಹಿಸಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಏರಿಕೆ ಕಂಡು ಬಂದ...

ಪ್ರಮುಖ ಸುದ್ದಿ

ಅಪ್ಪಿ ತಪ್ಪಿ ಕಳ್ಳರ ಮುಂದೇನಾದ್ರೂ ಕ್ಯಾಮೆರಾ ಕಂಡ್ರೆ ಇನ್ನೆಲ್ಲಿ ಸಿಕ್ಕಿಬೀಳ್ತಿವೋ ಅಂತ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ ಅದಕ್ಕೆ ವಿರುದ್ಧ, ವರದಿಗಾರನ ಹತ್ತಿರವೇ ಹಣ ದೋಚಿದ್ದಾನೆ. ಅದು ವರದಿಗಾರ ಅವರ...

error: Content is protected !!