ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದಷ್ಟೇ ರಿಲೀಸ್ ಆದ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ವಿವಾದಕ್ಕೀಡಾಗಿದೆ. ಆ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅಪಮಾನವಾಗಿದೆ ಎಂದು ಬ್ರಾಹ್ಮಣ ಸಮುದಾಯ ತಿರುಗಿ ಬಿದ್ದಿದೆ. ಈ ಕೂಡಲೇ ಆ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಕೂಡ ಒತ್ತಡ ಹೇರಿದೆ.
ಈ ನಿಟ್ಟಿನಲ್ಲಿ ಇಂದು ಫಿಲ್ಮ್ ಚೆಂಬರ್ ನಲ್ಲಿ ಪ್ರತಿಭಟನೆ ಮಾಡಿರುವ ಬ್ರಾಹ್ಮಣ ಮಹಾಸಭಾ, ಆ ದೃಶ್ಯಗಳನ್ನು ಕೂಡಲೇ ಕತ್ತರಿಸುವಂತೆ ತಿಳಿಸಿದೆ. ಕೂಡಲೇ ಸಿನಿಮಾ ಪ್ರದರ್ಶನ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಸಮುದಾಯದವರಿಗೆ ಅವಮಾನ ಮಾಡುವಂತ ಏಳು ದೃಶ್ಯಗಳಿದ್ದು, ಅದನ್ನು ಕೂಡಲೇ ತೆಗೆಯಬೇಕೆಂದು ತಿಳಿಸಿದ್ದಾರೆ. ಈ ಸಂಬಂಧ ಕಲಬುರಗಿ, ಧಾರವಾಡದಲ್ಲೂ ಬ್ರಾಹ್ಮಣ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್ ಎಮ್ ಸುರೇಶ್, ಈ ವಿವಾದದ ಬಗ್ಗೆ ಕೂಲಕುಂಷವಾಗಿ ಚರ್ಚೆ ಆಗಿದೆ. ಸಮಸ್ಯೆಗೆ ಸ್ಪಂದಿಸುವ ಕೆಲಸ ನಮ್ಮದು. ಈ ವಿವಾದಕ್ಕೆ ಸಂಬಂಧಪಟ್ಟಂತೆ ಕಮಿಟಿ ನೇಮಿಸಲಾಗುವುದು.
ವಾಣಿಜ್ಯ ಮಂಡಳಿ ಸಭೆಯ 5 ಜನ ಮತ್ತು ಬ್ರಾಹ್ಮಣ ಮಹಾ ಸಭಾಮಂಡಳಿಯ 5 ಜನ ಕಮಿಟಿಯಲ್ಲಿ ಇರ್ತಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಇವತ್ತು ಆಗಿಲ್ಲ. ರಾಜ್ಯದ ಎಲ್ಲಾ ಬ್ರಾಹ್ಮಣ ಸಂಘಗಳು ಬಂದು ದೂರು ನೀಡಿವೆ. ಚಿತ್ರದಲ್ಲಿನ ಆಕ್ಷೇಪ ದೃಶ್ಯಗಳನ್ನು ಕತ್ತರಿಸುವಂತೆ ಮನವಿ ಮಾಡಿದ್ದಾರೆ. ಇಂದು ಸಂಜೆ ನಿರ್ದೇಶಕ ರವಿ ಶ್ರೀವತ್ಸ ಹಾಗೂ ರೂಪ ಅಯ್ಯರ್ ಅವರು ಸಿನಿಮಾ ನೋಡಿ. ಮುಂದಿನ ತಿರ್ಮಾನ ಕೈಗೊಳ್ಳಲಾಗುತ್ತೆ. ನಾಳೆ ಮಧ್ಯಾಹ್ನ 1 ಗಂಟೆ ಶೋ ವರೆಗೂ ಕಾಲವಕಾಶ ಕೊಡಿ ಎಂದಿದ್ದಾರೆ.


