Connect with us

Hi, what are you looking for?

ಪ್ರಮುಖ ಸುದ್ದಿ

ಆಟದಲ್ಲಿ ಯಾವಾಗಲೂ ಸೋಲಿಸುತ್ತಾನೆ ಅನ್ನೋ ಕಾರಣಕ್ಕೆ ಸ್ನೇಹಿತನನ್ನೇ ಕೊಂದ ಬಾಲಕ

ಮಂಗಳೂರು: ಇತ್ತೀಚೆಗೆ ಪರಿಚಿತವಾಗಿರುವ ಆನ್ ಲೈನ್  ಗೇಮ್ ಗಳು ಮಕ್ಕಳ ಭವಿಷ್ಯವನ್ನೆ ಹಾಳು ಮಾಡುತ್ತಿವೆ. ಪಬ್ ಜೀ ಅಂತ ಗೇಮ್ ಅದೆಷ್ಟೋ ಮಕ್ಕಳ ಜೀವ ಬಲಿ ಪಡೆದರೆ, ಇನ್ನಷ್ಟು ಮಕ್ಕಳನ್ನ ಡಿಪ್ರೆಶನ್ ಗೆ ಹೋಗೋ ಥರ ಮಾಡಿದೆ. ಇದೀಗ ಅದೇ ಥರದ ಗೇಮ್ ವೊಂದು ಕೊಲೆಯಲ್ಲಿ ಅಂತ್ಯವಾಗಿದೆ.

ಆಕೀಫ್ ಎಂಬ 12 ವರ್ಷದ ಬಾಲಕ ಫ್ರಿ ಫೈಯರ್ ಆಟ ಆಡೋದಕ್ಕೆ ‌ನಿನ್ನೆ ರಾತ್ರಿ ಮೊಬೈಲ್ ತೆಗೆದುಕೊಂಡು ಹೋಗಿದ್ದನಂತೆ. ಆದ್ರೆ ತಡರಾತ್ರಿಯಾದರೂ ಮನೆಗೆ ಹಿಂತಿರುಗಿಲ್ಲ. ಆನಂತರ ಆಕೀಫ್ ಮನೆಯವರು ಬಾಲಕನನ್ನ ಹುಡುಕಿಕೊಂಡು ಹೋಗಿದ್ದಾರೆ, ಆಗಲೂ ಬಾಲಕನ ಸುಳಿವು ಸಿಕ್ಕಿಲ್ಲ. ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಶಾಲೆಯ ಮೈದಾನದ ಒಂದು ಮೂಲೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತ ಬಾಲಕನ ತಲೆಗೆ ಪೆಟ್ಟಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಇನ್ನೊಬ್ಬ ಬಾಲಕನ ಜೊತೆ ಫ್ರೀಫೈಯರ್ ಗೇಮ್ ಆಡೋದಕ್ಕೆ ಮೊಬೈಲ್ ತೆಗೆದುಕೊಂಡು ಹೋಗಿದ್ದ ಎಂದು ಮೃತ ಬಾಲಕನ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಉಳ್ಳಾಲ ಪೊಲೀಸರು ಆ ಬಾಲಕನ ವಿಚಾರಣೆ ನಡೆಸಿದಾಗ ನಿಜಾಂಶ ಹೊರ ಬಂದಿದೆ. ಹಿಂದಿನ ದಿನ ಇಬ್ಬರು ಆಟವಾಡುತ್ತಿದ್ದಾಗ ಆಕೀಫ್ ಪ್ರತಿಸಲ ಆ ಬಾಲಕನನ್ನ ಸೋಲಿಸುತ್ತಿದ್ದನಂತೆ. ಆಗ ಇಬ್ಬರ ನಡುವೆ ಜಗಳ ನಡೆದಿತ್ತಂತೆ. ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು : ಪ್ರೇಮ ಕುರುಡು ಅನ್ನೋದು ಜಗತ್ ಇರುವವರೆಗೂ ನಿಜವಾಗುತ್ತಲೇ ಇರುತ್ತದೆ. ಅದಕ್ಕೆ ಹೊಸ ಸೇರ್ಪಡೆ ರೈಲು ವಿವಾಹ. ಈಗಾಗಲೇ ಮದುವೆಯಾಗಿರುವ ಮಹಿಳೆಯೊಂದಿಗೆ ಪ್ರೇಮಾಂಕುರವಾದ ಯುವಕ ಚಲಿಸುವ ರೈಲಿನಲ್ಲಿ ವಿವಾಹಿತೆಯನ್ನು ಮದುವೆಯಾಗಿದ್ದಾನೆ. ಅಶು...

ಪ್ರಮುಖ ಸುದ್ದಿ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಳ್ಳಿ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಷಿತಾ(19), ಪುನೀತ್ (21), ಆತ್ಮಹತ್ಯೆಗೆ ಶರಾಣದ ದಂಪತಿ. ಈ ಜೋಡಿ ಸುಮಾರು 6...

ಪ್ರಮುಖ ಸುದ್ದಿ

ಬೆಂಗಳೂರು: ತೌಕ್ತೆ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬಿದ್ದಿದೆ. ದಕ್ಕಿಣ ಕನ್ನಡ, ಕರಾವಳಿ ಭಾಗದಲ್ಲಿ ಹೆಚ್ಚಾಗಿದೆ. ಹೀಗಾಗಿ ಆ ಕಡೆಗೆ ಇನ್ನಷ್ಟು ರಕ್ಷಣಾ ಸಲಕರಣೆಗಳನ್ನ ಕಳುಹಿಸಲು ಗೃಹ ಇಲಾಖೆ ಮುಂದಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್...

ಪ್ರಮುಖ ಸುದ್ದಿ

ಮಂಗಳೂರು, (ಮೇ.10) : ಮಾಜಿ ಎಂಎಲ್‍ಸಿ ಐವನ್ ಡಿಸೋಜ ಮಾಡಿದ ಎಡವಟ್ಟಿಗೆ ಮಂಗಳೂರು ನಗರ ಪೊಲೀಸರು ಹೈರಾಣಾಗಿ ಕೊನೆಗೆ ಬೆಳ್ಳಂಬೆಳಗ್ಗೆಯೇ 180ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಲಾಕ್‍ಡೌನ್‍ಗೆ ಮಂಗಳೂರು ಜನತೆ ಉತ್ತಮವಾಗಿ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಮೇ.02) : ಕೋವಿಡ್ ಎರಡನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ವೇಳೆ ನಿಯಮ ಉಲ್ಲಂಘಿಸಿದವರ ಮೇಲೆ ಚಿತ್ರದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 1ರಂದು ಸರ್ಕಾರದ...

ಪ್ರಮುಖ ಸುದ್ದಿ

ಹಿರಿಯೂರು, (ಮೇ.02) : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಬಿ.ಆರ್.ಸಿ ಕಚೇರಿಯ ಬಳಿ ಶುಕ್ರವಾರ ರಾತ್ರಿ ನಡೆದ ಕೊಲೆ ಪ್ರಕರಣವನ್ನು ಹಿರಿಯೂರು ನಗರ ಠಾಣೆ ಪೊಲೀಸರು 24 ತಾಸಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ....

ಪ್ರಮುಖ ಸುದ್ದಿ

ಬೆಂಗಳೂರು: ಕೊರೊನಾ ಎರಡನೆ ಅಲೆ ತಡೆಯೋಕೆ ಲಾಕ್ಡೌನ್ ಒಂದೆ ಪರಿಹಾರವೆಂದು ರಾಜ್ಯ ಸರ್ಕಾರ ಸದ್ಯ 14 ದಿನಗಳ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಲ್ಲಿದ್ದುಕೊಂಡು ಏನ್ ಮಾಡೋದು ಅಂತ ಬೆಂಗಳೂರು...

ಪ್ರಮುಖ ಸುದ್ದಿ

ಚಿತ್ರದುರ್ಗ, ಸುದ್ದಿಒನ್ : ಯುಗಾದಿ ಹಬ್ಬದ ಕಾರಣಕ್ಕೆ ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. ನಿರಂತರವಾಗಿ ಸೋಮವಾರ, ಮಂಗಳವಾರ ಇಸ್ಪೀಟ್ ಅಡ್ಡಗಳ ಮೇಲೆ ದಾಳಿ ನಡೆಸಿದ ಪೊಲಿಸರು 52 ಪ್ರಕರಣಗಳಲ್ಲಿ...

ಪ್ರಮುಖ ಸುದ್ದಿ

ಹಾಸನ: ಆ ಇಬ್ಬರು ಹುಡುಗಿಯರು ಮಾಸ್ಟರ್ ಡಿಗ್ರಿ ಓದಿದ್ದವರು..ಸ್ವಂತ ಸಂಬಂಧಿಕರೇ ಆಗಿದ್ದವರು. ಆದ್ರೆ ತಮ್ಮನನ್ನು ಮದುವೆಯಾಗೋದಕ್ಕೆ ಒಪ್ಪಲಿಲ್ಲ ಅಂತ ಅಕ್ಕ ತಂಗಿಯರಿಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಜಾವು...

error: Content is protected !!