ಏಪ್ರಿಲ್ 1ರ ನಂತರ ಈರುಳ್ಳಿ ಬೆಲೆ ಜಾಸ್ತಿಯಾಗುವ ಸಾಧ್ಯತೆ ; ಕಾರಣವೇನು..? ಎಷ್ಟಾಗಲಿದೆ..?

ಸರ್ಕಾರ ಈರುಳ್ಳಿ ಮೇಲಿನ ರಫ್ತು ಸುಂಕವನ್ನ ಹಿಂಪಡೆದುಕೊಂಡಿದೆ. ಏಪ್ರಿಲ್ 1ರಿಂದ ಈರುಳ್ಳಿಯ ರಫ್ತಿ ಅನಿರ್ಬಂಧಿತವಾಗುತ್ತಿದೆ. ಈರುಳ್ಳಿ ಶೇಕಡ 20 ರಷ್ಟು ರಫ್ತು ಸುಂಕವನ್ನ ಹೊಂದಿದೆ. ಇದು ಈರುಳ್ಳಿ ಬೆಳೆಗಾರರಿಗೆ ಅನುಕೂಲವಾಗುವಂತದ್ದು. ಆದರೆ ಇದರಿಂದ ಈರುಳ್ಳಿಯ ಕೊರತೆ ಉಂಟಾಗಬಹುದು. ಇದರಿಂದ ಸಾಮಾನ್ಯವಾಗಿಯೇ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಸರ್ಕಾರ ಜನಸಾಮಾನ್ಯರಿಗೆ ಭರವಸೆಯನ್ನು ನೀಡಿದೆ. ಯಾವುದೇ ರೀತಿಯ ಬೆಲೆ ಏರಿಕೆ ಹೊಣೆಯಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದೆ. ಈರುಳ್ಳಿ ಮೇಲೆ ಶೇಕಡ 20 ರಷ್ಟಿದ್ದ ರಫ್ತು ಸುಂಕವನ್ನು ಏಪ್ರಿಲ್ 1 ರಿಂದ ಹಿಂಪಡೆಯಲು ನಿರ್ಧರಿಸುವುದಾಗಿ ಕಂದಾಯ ಇಲಾಖೆ ಮೊನ್ನೆಯಷ್ಟೇ ಅಧಿಸೂಚನೆಯನ್ನು ಹೊರಡಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯೊಂದಿಗೆ ಚರ್ಚೆ ನಡೆಸಿ ಕಂದಾಯ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.

ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೂ ಉತ್ತಮ ಬೆಲೆ ಸಿಗಬೇಕು ಎನ್ನುವುದು ಸರ್ಕಾರದ ಬದ್ಧತೆಯಾಗಿದೆ. ಈ ಬದ್ಧತೆಗೆ ಪೂರಕವಾಗಿಯೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ‌ ಎಂದು ಪ್ರಹ್ಲಾದ್ ಜೋಶಿ ನೇತೃತ್ವದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ಆರೇಳು ತಿಂಗಳಿನಿಂದ ಈರುಳ್ಳಿ ರಫ್ತಿಗೆ ನಿರ್ಬಂಧಗಳನ್ನ ಹಾಕಲಾಗಿದೆ. ಶೇಕಡ 20ರಷ್ಟು ಸುಂಕ ಇದ್ದರು, ಈರುಳ್ಳಿ ರಫ್ತಿನಲ್ಲಿ ಏರಿಕೆ ಆಗುತ್ತಲೆ ಇದೆ. 2024ರ ಸೆಪ್ಟೆಂಬರ್ ನಿಂದ ಈರುಳ್ಳಿ ರಫ್ತಿಗೆ ಶೇ.20ರಷ್ಟು ಇದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 1.17 ಮಿಲಿಯನ್ ಟನ್ ಈರುಳ್ಳಿ ರಫ್ತಾಗಿರುವುದು ತಿಳಿದು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 72 ಸಾವಿರ ಟನ್ ಈರುಳ್ಳಿ ರಫ್ತಾಗಿದೆ. 2025ರ‌ಜನವರಿ ತಿಂಗಳಲ್ಲಿ ರಫ್ತಾಗಿರುವ ಈರುಳ್ಳಿಯೂ 1,85,000 ಟನ್ ಆಗಿದೆ.

suddionenews

Recent Posts

ಯುರಿನ್ ಇನ್ಫೆಕ್ಷನ್ ಆಗಿದ್ಯಾ..? ಈ ಮನೆ ಮದ್ದನ್ನ ಟ್ರೈ ಮಾಡಿ

ಸಾಮಾನ್ಯವಾಗಿ ಸಾಕಷ್ಟು ಜನರಿಗೆ ಯುರಿನ್ ಇನ್ಫೆಕ್ಷನ್ ಸಮಸ್ಯೆ ಕಾಡುತ್ತದೆ. ಪಬ್ಲಿಕ್ ಟಾಯ್ಲೆಟ್ ಬಳಸಿದಾಗ ಅಥವಾ ಸ್ವಚ್ಚತೆ ಇಲ್ಲದ ವಾಶ್ ರೂಮ್…

2 hours ago

ಈ ರಾಶಿಯ ಇಂಜಿನಿಯರ್ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಯೋಗ

ಈ ರಾಶಿಯ ಇಂಜಿನಿಯರ್ ಪದವಿ ಪಡೆದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶ ಯೋಗ, ಗುರುವಾರದ ರಾಶಿ ಭವಿಷ್ಯ 27 ಮಾರ್ಚ್ 2025…

4 hours ago

ನಾಳೆಯಿಂದ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊಳಲ್ಕೆರೆ ಸಜ್ಜು

ಸುದ್ದಿಒನ್, ಹೊಳಲ್ಕೆರೆ, ಮಾರ್ಚ್. 26 : ಗಣಪತಿಯ ಧಾರ್ಮಿಕ ಸ್ಥಳವಾದ ಹೊಳಲ್ಕೆರೆಯಲ್ಲಿ ನಾಳೆಯಿಂದ ( ಗುರುವಾರ) ಎರಡು ದಿನಗಳ ಕಾಲ…

11 hours ago

ನಾಳೆ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ವಿಚಾರಣೆ

    ಚಿತ್ರದುರ್ಗ. ಮಾರ್ಚ್26 :  ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ…

11 hours ago

ನಾಗರಾಜ್ ಅವರಿಗೆ ಸಮಾಜ ಸೇವಾ ರತ್ನ ಮತ್ತು ಬಡವರ ಆಶಾಕಿರಣ ಪ್ರಶಸ್ತಿ ಪ್ರದಾನ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

12 hours ago

6 ವರ್ಷಗಳ ಕಾಲ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ..!

  ಸುದ್ದಿಒನ್, ಬೆಂಗಳೂರು, ಮಾರ್ಚ್. 26 :  ಬಿಜೆಪಿಯ ಶಿಸ್ತು ಸಮಿತಿ ಸಾಕಷ್ಟು ಬಾರೀ ಎಚ್ಚರಿಕೆಯನ್ನು ನೀಡಿದರು ಸಹ ಎಚ್ಚೆತ್ತುಕೊಳ್ಳದೆ…

14 hours ago