
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಕೆನ್ನೆಡಲು ಗ್ರಾಮದಲ್ಲಿ ಅನಿತ್‍ಕುಮಾರ್ ಜಿ.ಎಸ್. ಅಭಿಮಾನಿಗಳ ಬಳಗದಿಂದ 5 ನೇ ಬಾರಿಗೆ ನಡೆದ ಗ್ರಾಮೀಣ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅನಿತ್ ಕಪ್‍ನ್ನು ಬಿಜೆಪಿ.ಯುವ ಮುಖಂಡ ಅನಿತ್‍ಕುಮಾರ್ ಜಿ.ಎಸ್. ಉದ್ಘಾಟಿಸಿದರು.

ಬ್ಯಾಂಟಿಂಗ್ ಮಾಡುವ ಮೂಲಕ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಅನಿತ್‍ಕುಮಾರ್ ಜಿ.ಎಸ್. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿರಲು ಸಹಕಾರಿಯಾಗಲಿದೆ. ಯಾವುದೆ ಕ್ರೀಡೆಯಲ್ಲಾಗಲಿ ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವದಿಂದ ಆಡಬೇಕು ಎಂದು ಕ್ರೀಡಾಪುಟುಗಳಿಗೆ ಕರೆ ನೀಡಿದರು.
ಕೆನ್ನಡಲು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಜಪ್ಪ, ಕಮಲಮ್ಮ, ಶ್ರೀಮತಿ ನೇತ್ರಮ್ಮ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

GIPHY App Key not set. Please check settings