ಚಿತ್ರದುರ್ಗ : ಕಾಲೇಜಿನಲ್ಲಿ ಟಿವಿ, ಬ್ಯಾಟರಿ ಕಳವು ಮಾಡಿದ್ದ ಆರೋಪಿಯನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಘವೇಂದ್ರ ಎಂದು ಗುರುತಿಸಲಾಗಿದ್ದು, ಇತನಿಂದ 2 ಎಲ್.ಇ.ಡಿ ಟಿವಿ ಮತ್ತು 2 ಬ್ಯಾಟರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹೊಸದುರ್ಗ ತಾಲ್ಲೂಕು ಕಿಟ್ಟದಾಳ್ ಗ್ರಾಮದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬೀಗ ಮುರಿದು ಟಿವಿ, ಬ್ಯಾಟರಿ ಕಳವು ಮಾಡಿದ್ದರು. ಹಿರಿಯೂರು ತಾಲ್ಲೂಕಿನ ಕಂಪನಹಳ್ಳಿ ಗ್ರಾಮದಲ್ಲಿ ರಾಘವೇಂದ್ರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಶ್ರೀರಾಂಪುರ ಪೊಲೀಸ್ ಠಾಣೆ ಪಿ.ಎಸ್.ಐ ಟಿ.ಎಂ.ನಾಗರಾಜ, ಸಿಬ್ಬಂದಿಗಳಾದ ಕುಮಾರನಾಯ್ಕ, ಕುಮಾರ, ಜಾವೀದ್ ಪಾಷಾ, ಪ್ರಕಾಶ, ಯತೀಶ, ಮಧು, ನಟರಾಜ ತಂಡ ಕಾರ್ಯಾಚರಣೆ ನಡೆಸಿದೆ.


