Connect with us

Hi, what are you looking for?

ಪ್ರಮುಖ ಸುದ್ದಿ

ಮತ್ತೊಮ್ಮೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದೇಗೆ ಕೆ.ಪಿ.ಅರವಿಂದ್….!

ಬಿಗ್ ಮನೆಯಲ್ಲಿ ಪ್ರತಿ ಬಾರಿಯಂತೆ ಈ ಬಾರಿ ಕೂಡ ವಾರದ ಕಥೆ ಸುದೀಪನ ಜೊತೆ ಎಪಿಸೋಡ್ ನಲ್ಲಿ ಕಿಚ್ಚನ ಮೆಚ್ಚಿಗೆಯ ಚಪ್ಪಾಳೆ ಒಬ್ಬ ಕಂಟೆಸ್ಟೆಂಟ್ ಗೆ ಸಿಗುತ್ತಿದೆ. ಟಾಸ್ಕ್ ಸೇರಿದಂತೆ ಅವರ ಎಂಟರ್ ಟ್ರೈನ್ ಮಾಡೋದು, ಆ ಸ್ಪರ್ಧಿಯಿಂದ ಮನೆಯ ವಾತಾರಣ ಹೇಗಿತ್ತು..? ಅವರ ತೆಗೆದುಕೊಂಡು ನಿರ್ಧಾರ.. ಹೀಗೆ ಎಲ್ಲವನ್ನೂ ಆಧಾರವಾಗಿ ಇಟ್ಟುಕೊಂಡು ಆ ಒಂದು ವಾರದ ಮನೆಯಲ್ಲಿ ಅವರು ಹೇಗಿದ್ದರು ಎಂಬುದನ್ನ ಜಡ್ಜ್ ಮಾಡಿ ಕಿಚ್ಚನ ಚಪ್ಪಾಳೆ ನೀಡಲಾಗುತ್ತದೆ. ಅದರಂತೆ ಈ ವಾರ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನು ಕೆ.ಪಿ.ಅರವಿಂದ್ ಪಡೆದುಕೊಂಡಿದ್ದಾರೆ.

ಒಂದು ದಿನ ಚೆನ್ನಾಗಿ ಆಟವಾಡಿದ್ರೆ ಅದನ್ನು ಅನಿರೀಕ್ಷಿತ ಎನ್ನುತ್ತಾರೆ. ಪದೇ ಪದೇ ಚೆನ್ನಾಗಿ ಆಡುವವರನ್ನು ಒಳ್ಳೆಯ ಆಟಗಾರ ಎನ್ನುತ್ತೇವೆ. ಎಲ್ಲ ತರ ಆಟವಾಡುವವರನ್ನು ಆಲ್ ರೌಂಡರ್ ಎಂದು ಕರೆಯುತ್ತೇವೆ. ಸೋಲುವ ಸಂದರ್ಭದಲ್ಲಿಯೂ ಸಹ ಆಟವನ್ನು ಬಿಟ್ಟು ಕೊಡದೇ ಇರುವವರಿಗೆ ಛಲ ಇರುವವರು ಎನ್ನುತ್ತೇವೆ. ಬರ್ತಾ ಬರ್ತಾ ಆಲ್ ರೌಂಡರ್ ಆಟವಾಡ್ತಾ, ತಪ್ಪುಗಳನ್ನು ಸರಿ ಮಾಡಿಕೊಳ್ತಾ, ಒಳ್ಳೆದಾಗಿ ಆಟವಾಡ್ತಿರೋ ಈ ಆಟಗಾರನಿಗೆ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಎಂದು ಅರವಿಂದ್ ಆಟದ ವೈಖರಿ ಬಗ್ಗೆ ಹೊಗಳಿದ ಕಿಚ್ಚ ಚಪ್ಪಾಳೆ ತಟ್ಟಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದುಕೊಂಡು ಅರವಿಂದ್ ಖುಷಿಪಟ್ಟು, ಧನ್ಯವಾದ ತಿಳಿಸಿದ್ದಾರೆ.

 

ಬಳಿಕ ಸುದೀಪ್ ಈ ವಾರ ನನಗೆ ಕಾಣಿಸಿದ್ದು, ನಿಮ್ಮ ಶ್ರಮ, ಛಲ ಹಾಗೂ ಸ್ಥಿರತೆ. ಒಂದು ವಿಚಾರ ಏನು ಇಷ್ಟವಾಯ್ತು ಅಂದ್ರೆ ಇಷ್ಟು ಜನ ಆ್ಯಕ್ಟರ್ ನಡುವೆ ಒಬ್ಬ ನಾನ್ ಆ್ಯಕ್ಟರ್ ಆಗಿ ಏಜೆಂಟ್ ಆ್ಯಕ್ಟಿಂಗ್ ನ್ನು ಅದ್ಭುತವಾಗಿ ಮಾಡಿದ್ದೀರಾ ಎಂದು ಅರವಿಂದ್ ಬಗ್ಗೆ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಅರವಿಂದ್ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದುಕೊಳ್ತಿರುವುದು ಇದು ಎರಡನೇ ಬಾರಿ. ಮೂರನೇ ವಾರದಲ್ಲಿ ಒಮ್ಮೆ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ್ದ ಅರವಿಂದ್ ಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು.

ಈ ಹಿಂದೆ ಅಂದ್ರೆ ಮೊದಲ ವಾರ ಶಂಕರ್ ಅಶ್ವತ್ಥ್, ಎರಡನೇ ವಾರ ಶುಭಾ ಪೂಂಜಾ, ಮೂರನೇ ವಾರ ಕೆ.ಪಿ.ಅರವಿಂದ್, ನಾಲ್ಕನೇ ವಾರ ರಘು ಗೌಡ, ಐದನೇ ವಾರ ವೈಷ್ಣವಿ , ಇದೀಗ ಆರನೇ ವಾರ ಅರವಿಂದ್ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!