ಇತ್ತೀಚೆಗೆ ನಾಯಿ ಪ್ರೇಮಿಗಳು ಹೆಚ್ಚಾಗಿದ್ದಾರೆ. ನಾಯಿಯನ್ನು ಸ್ವಂತ ಮಗುವಿನಂತೆ ಸಾಕುತ್ತಾರೆ. ಅದಕ್ಕೆ ಕೊಂಚ ನೋವಾದರೂ ಮಾಲೀಕರಿಗೆ ನೋವಾಯಿತೇನೋ ಎಂಬಂತೆ ಫೀಲ್ ಮಾಡುತ್ತಾರೆ. ಅದೇ ಪ್ರೀತಿ ಇಲ್ಲೊಬ್ಬ ವೃದ್ಧ ಪ್ರಾಣವನ್ನು ಲೆಕ್ಕಿಸದೇ ಮೊಸಳೆ ಬಾಯಿಗೆ ಕೈ ಹಾಕಿದ್ದಾರೆ.
ಹೌದು, ಮೊಸಳೆಯನ್ನು ಕಂಡು ಭಯ ಪಡದೆ, ತನ್ನ ಪ್ರಾಣವನ್ನು ಲೆಕ್ಕಿಸದೇ ಈ ವೃದ್ಧ ಮೊಸಳೆಯಿಮದ ತನ್ನ ನಾಯಿಮರಿಯನ್ನು ರಕ್ಷಿಸಿದ್ದಾರೆ. ಅಮೆರಿಕಾದ ರಿಚರ್ಡ್ ವಿಲ್ಬ್ಯಾಂಕ್ಸ್ ಎನ್ನುವವರೇ ಈ ಸಾಹಸ ಮಾಡಿದ ವ್ಯಕ್ತಿ.
https://fb.watch/1XfDJIbe2s/
ರಿಚರ್ಡ್ ಅವರ ಮನೆಯ ಹಿಂದೆ ಒಂದು ಕೊಳ ಇದೆ. ಆ ಕೊಳದಲ್ಲಿ ಮೊಸಳೆ ವಾಸ ಮಾಡುತ್ತಿದೆ. ಈ ಮೊಸಳೆ ರಿಚರ್ಡ್ ಅವರು ಸಾಕಿದ ನಾಯಿಯನ್ನೇ ತಿನ್ನಲು ಯತ್ನಿಸಿತ್ತು. ಮೂರು ತಿಂಗಳ ನಾಯಿಯನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಇದನ್ನು ಗಮನಿಸಿದ ರಿಚರ್ಡ್ ಸುಮ್ಮನೆ ಕುರಲಿಲ್ಲ. ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮೊಸಳೆಯ ಜೊತೆ ಯುದ್ಧ ಮಾಡಿದ್ದಾರೆ.
ಕೊಳದ ನೀರಿಗೆ ಜಿಗಿದ ರಿಚರ್ಡ್ತನ್ನ ನಾಯಿಯನ್ನ ಕಾಪಾಡಲು ಮುಂದಾಗಿದ್ದಾರೆ. ಮೊಸಳೆ ನಾಯಿಮರಿಯನ್ನ ತನ್ನ ಚೂಪಾದ ಹಲ್ಲುಗಳಿಂದ ಬಿಗಿಯಾಗಿ ಹಿಡಿದುಕೊಂಡಿತ್ತು. ಹೀಗಾಗಿ ರಿಚರ್ಡ್ ಮರಿಯನ್ನ ಬಿಡಿಸಲು ಮೊಸಳೆಯನ್ನ ಅಲುಗಾಡಿಸಿದ್ರೂ ಪ್ರಯೋಜನವಾಗಲಿಲ್ಲ. ಬಳಿಕ ಅವರು ಮೊಸಳೆಯ ಬಾಯನ್ನ ಅಗಲಿಸಿದ್ರು. ನಾಯಿ ತಕ್ಷಣ ಅಲ್ಲಿಂದ ಓಡಿ ಹೋಯಿತು. ಘಟನೆ ಬಗ್ಗೆ ಮಾತನಾಡಿರೋ ರಿಚರ್ಡ್, ನಾವು ಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ವಿ. ಆಗ ಮೊಸಳೆ, ನೀರಿನಿಂದ ಮಿಸೈಲ್ನಂತೆ ಬಂತು. ಮೊಸಳೆಗಳು ಅಷ್ಟು ವೇಗವಾಗಿ ಚಲಿಸುತ್ತವೆ ಅಂತ ನನಗೆ ಗೊತ್ತೇ ಇರಲಿಲ್ಲ. ಅಷ್ಟು ಕ್ವಿಕ್ ಆಗಿತ್ತು ಎಂದಿದ್ದಾರೆ.
ಈ ದೃಶ್ಯ ನೋಡಿದವರ ಮೈ ಝುಮ್ ಎನ್ನುವಂತೆ ಮಾಡಿದೆ. ರಿಚರ್ಡ್ ಸಾಹಸ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
