
ಒಡಿಶಾ: ಇಂಥ ಎಷ್ಟೋ ಉದಾಹರಣೆಗಳನ್ನು ಕಣ್ಣ ಮುಂದೆ ನಡೆದಿದೆ, ಕಿವಿಯಲ್ಲಿ ಕೇಳಿದ್ದೇವೆ. ಯಾವುದನ್ನು ಅತಿಯಾಗಿ ಪ್ರೀತಿಸುತ್ತಾರೋ ಅದರಿಂದಾನೆ ಅವರ ನಿಧನವಾಗಿರುವುದು ದುರಂತ. ಇದೀಗ ಅಂಥದ್ದೆ ಕೆಟ್ಟ ಸುದ್ದಿಯೊಂದು ವರದಿಯಾಗಿದೆ. ಒಡಿಶಾದ ಆರೋಗ್ಯ ಸಚಿವ ನಬ ಕಿಶೋರ್ ಗುಂಡೇಟಿಗೆ ಬಲಿಯಾಗಿದ್ದಾರೆ.

ನಬ ಕಿಶೋರ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದ್ದು, ನಬ ಕಿಶೋರ್ ಅವರ ಅತ್ಯಾಪ್ತರು, ಹಿತೈಶಿಗಳು, ಬೆಂಬಲಿಗರು, ಗಣ್ಯರು ಕಂಬನಿ ಮಿಡಿದಿದ್ದಾರೆ. ಇನ್ನು ನಬ ಕಿಶೋರ್ ಗನ್ ಗಳ ಮೇಲೆ ಅತಿಯಾದ ಮೋಹವಿತ್ತು. ಅವರ ಬಳಿ ರಿವಾಲ್ವರ್, ರೈಫಲ್, ಡಬಲ್ ಬ್ಯಾರೆಲ್ ಹೀಗೆ ಅನೇಕ ಗನ್ ಗಳು ಇದ್ದವು. ಆದ್ರೆ ಆ ಗನ್ ಗಳನ್ನು ರಕ್ಷಣೆಗೋಸ್ಕರ ಇಟ್ಟುಕೊಂಡಿರಲಿಲ್ಲ. ಅವುಗಳ ಮೇಲಿನ ಪ್ಯಾಷನ್ ಗಾಗಿ ಇಟ್ಟುಕೊಂಡಿದ್ದರು.
ಇನ್ನು ಕಾರುಗಳ ಕ್ರೇಜ್ ಕೂಡ ಹೊಂದಿದ್ದರು. ಕಾರು ಕ್ರೇಜ್ ಎಷ್ಟಿತ್ತು ಎಂದರೆ 15 ಕೋಟಿ ಬೆಲೆ ಬಾಳುವ 145 ಕಾರುಗಳು ಅವರ ಬಳಿ ಇದ್ದವು. ಅದು ಡಿಸೈನ್ ಡಿಸೈನ್ ಕಾರುಗಳು. ಮೈನಿಂಗ್ ಉದ್ಯಮಿ, ಫುಲ್ ಟೈಮ್ ರಾಜಕಾರಣಿಯಾಗಿದ್ದ ನಬ ಕಿಶೋರ್ ಕೊಡುಗೈ ದಾನಿಯಾಗಿದ್ದರು. ಮಹಾರಾಷ್ಟ್ರದ ಕೆಲವು ದೇವಸ್ಥಾನಗಳಿಗೆ ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು.

GIPHY App Key not set. Please check settings