ಬೆಂಗಳೂರು: ಎಲ್ಲೆಡೆ ಸದ್ಯ ಚರ್ಚೆಯಾಗುತ್ತಿರುವುದು ಹೇಮಾ ಕಮಿಟಿ ವಿಚಾರ. ಕೇರಳದ ಚಿತ್ರರಂಗದಲ್ಲಿ ಹೇಮಾ ಕಮಿಟಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ದೊಡ್ಡ ದೊಡ್ಡವರ ತಲೆ ದಂಡವೇ ನಡೆದು ಹೋಗುತ್ತಿದೆ. ಅಲ್ಲಿನ ವರದಿಯ ಪರಿಣಾಮ ಎಲ್ಲೆಡೆ ಜೋರಾಗಿದೆ. ನಮ್ಮ ಚಿತ್ರರಂಗದಲ್ಲೂ ಸಮಿತಿಯೊಂದು ಬೇಕು ಎಂದು ತೆಲುಗು, ಕನ್ನಡ ಇಂಡಸ್ಟ್ರಿ ಕೂಡ ಬೇಡಿಕೆ ಇಟ್ಟಿದೆ.
ಈಗಾಗಲೇ ಫೈರ್ ಎಂಬ ಕನ್ನಡ ಸಂಸ್ಥೆ ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದರ ನಡುವೆ ಇಂಥದ್ದೊಂದು ಸಮಿತಿ ರಾಜಕಾರಣಕ್ಕೂ ಅವಶ್ಯಕತೆ ಇದೆ ಎಂಬ ಕೂಗು ಕೇಳಿ ಬರುತ್ತಿದೆ. ರಾಜಕಾರಣದಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ಇದೆ ಎಂಬ ಆರೋಪ ಕೇಳಿ ಬಂದಿದೆ. ಬರೀ ಸಿನಿಮಾರಂಗವಲ್ಲ ರಾಜಕೀಯದಲ್ಲೂ ಮೀಟೂ ಅಲೆಯ ಬಿಸಿ ತಾಗಿದೆ.
ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಸಿ.ಮಂಜುಳಾ ಸಮಿತಿಗೆ ಆಗ್ರಹಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಾತ್ರವಲ್ಲ, ರಾಜಕೀಯ ಪಕ್ಷಗಳಲ್ಲೂ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು. ರಾಜಕೀಯಕ್ಕೆ ಬರುವ ಮಹಿಳೆಯರು ಲೈಂಗಿಕ ಶೋಷಣೆಗೆ ಒಳಗಾದರೆ, ಯಾವುದೇ ಮುಲಾಜಿಲ್ಲದೆ ಬಹಿರಂಗವಾಗಿ ವಿರೋಧಿಸಬೇಕು. ರಾಜಕೀಯ ಪಕ್ಷಗಳು ಬೆಳೆಯುತ್ತಾ ಹೋದಂತೆ, ರಾಜಕೀಯ ಪಕ್ಷಗಳಿಗೆ ಬರುವ ಜನಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಆಗ ಎಲ್ಲಾ ರೀತಿಯ ಜನರು ಬರುತ್ತಾರೆ. ಆಗ ಶೋಷಣೆಯಾದರೆ ಮಹಿಳೆಯರು ಪ್ರತಿರೋಧ ಒಡ್ಡಬೇಕು. ಇಲ್ಲವಾದರೆ ತಮಗೆ ತಾವೇ ಮೋಸ ಮಾಡಿಕೊಂಡಂತೆ ಆಗುತ್ತದೆ ಎಂದಿದ್ದಾರೆ. ಈ ಮೂಲಕ ರಾಜಕೀಯ ರಂಗಕ್ಕೂ ಸಮಿತಿ ರಚಿಸಲು ಒತ್ತಾಯ ಕೇಳಿ ಬಂದಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…