Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಿಣಾಮವಿಲ್ಲದ ಪೂಜೆ ಮಾಡಿದರೆ ಪ್ರಯೋಜನವಿಲ್ಲ : ಡಾ.ಶಿವಮೂರ್ತಿ ಮುರುಘಾ ಶರಣರು

Facebook
Twitter
Telegram
WhatsApp

ಚಿತ್ರದುರ್ಗ, (ಅ.13) : ಶ್ರೀಮಠದ ಅನುಭವ ಮಂಟಪದ ಆವರಣದಲ್ಲಿ ಬಸವತತ್ತ್ವ ಧ್ವಜಾರೋಹಣವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು,  ರಾವಂದೂರು ಶ್ರೀ ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು, ಕೆ.ಪಿ.ಟಿ.ಸಿ.ಎಲ್. ನಿವೃತ್ತ ನಿರ್ದೇಶಕರಾದ ಶ್ರೀ ಕೆ.ವಿ.ಶಿವಕುಮಾರ್, ಕೆ.ಪಿ.ಸಿ.ಸಿ.ಕಾರ್ಯದರ್ಶಿ ಶ್ರೀ ರಾಜಶೇಖರ ಮೆಣಸಿನಕಾಯಿ, ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ-2021ರ ಗೌರವಾಧ್ಯಕ್ಷರಾದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಶರಣ ಸಂಸ್ಕøತಿ ಉತ್ಸವ-2021ರ ಕಾರ್ಯಾಧ್ಯಕ್ಷರಾದ ಶ್ರೀ ಕೆ ಎಸ್ ನವೀನ್, ಎಸ್.ಎನ್, ಹರಗುರುಚರಮೂರ್ತಿಗಳು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಶ್ರೀ ಹಾಲಪ್ಪನಾಯಕ ನಿರೂಪಿಸಿದರು.

ಸಹಜ ಶಿವಯೋಗ ವರದಿ  :
ಹಳೆಯ ಸಂಪ್ರದಾಯಗಳಿಗೆ ಸತ್‍ಸಂಪ್ರದಾಯದ ಸ್ಪರ್ಶ ನೀಡುವುದು ಮುರುಘಾಮಠದ ಆಶಯವಾಗಿದೆಯೆಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಗಳು ಶರಣ ಸಂಸ್ಕೃತಿ ಉತ್ಸವ-2021ರ ಅಂಗವಾಗಿ ದಿನಾಂಕ:13.10.2021 ರಂದು  ಶ್ರೀಮಠದ ಅನುಭವ ಮಂಟಪದಲ್ಲಿ ಅಯೋಜಿಸಿದ್ದ ಸಹಜ ಶಿವಯೋಗ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಹೊಸ ಮನೆ ಕಟ್ಟಿದಂತಹ ಸಂದರ್ಭದಲ್ಲಿ ಪ್ರವೇಶ ಮಾಡುತ್ತಾರೆ.

ಪ್ರವೇಶಗಳಲ್ಲಿ ಹಲವಾರು ಪ್ರವೇಶಗಳಿವೆ.ಗೃಹ ಪ್ರವೇಶ, ಮಹಾನುಭವಿಗಳ ಶರಣ ಪ್ರವೇಶ, ಬಸವ ಪ್ರವೇಶ.  ಇದರಲ್ಲಿ ಆಧ್ಯಾತ್ಮ ಜೀವನದ ಪ್ರವೇಶವೇ ಸಹಜ ಶಿವಯೋಗವಾಗಿದೆ. ಪರಮಾತ್ಮ ಲೋಕವಾಗಿದೆ. ಸಹಜ ಶಿವಯೋಗ ವಿಸ್ತಾರವಾದ ಲೋಕವಾಗಿದೆ. ಅನೇಕ ಜನ ಲೌಕಿಕ ಜೀವನದ ಪ್ರವೇಶ ಪಡೆಯುತ್ತಾರೆ. ದೀಕ್ಷೆ ಬದ್ಧತೆಯ ಬದುಕಿಗೆ ದಾರಿದೀಪ. ಪ್ರಬುದ್ಧತತೆಗೆ ದೀಕ್ಷೆ. ಆಧ್ಯಾತ್ಮವಾದ ಬದುಕಿಗೆ ಸೈದ್ಧಾಂತಿಕವಾಗಿ ಪಡೆದುಕೊಳ್ಳಲಾಗದವರು ಸಹ ಪಡೆದುಕೊಳ್ಳಬಹುದಾದ ದೀಕ್ಷೆಯೇ ಸಹಜ ಶಿವಯೋಗ. ಪರಿಣಾಮವಿಲ್ಲದ ಪೂಜೆ ಮಾಡಿದರೆ ಪ್ರಯೋಜನವಿಲ್ಲ. ಪರಿಣಾಮವಿರುವ ಪೂಜೆ ಅಗತ್ಯ. ಸದ್ಭಾವನೆಯಿಂದ ಕೂಡಿದ ಸಹಜ ಶಿವಯೋಗ ಅತಿ ಅಗತ್ಯ. ಶಿವಯೋಗವನ್ನು ಏಕಾಂತದಲ್ಲಿ ಅಥವಾ ಸಾಮೂಹಿಕವಾಗಿ ಮಾಡಬಹುದು. ಮುರುಘಾ ಮಠ ಸಾಮೂಹಿಕ ಸಹಜ ಶಿವಯೋಗವನ್ನು ಏರ್ಪಡಿಸಿದೆ.

ಇದು ಶರಣರ ಏಕಾಂತ ಸಾಧನೆಗೆ ಅವಕಾಶ ನೀಡಿದೆ. ಇದೇ ರೀತಿಯ ವಾತಾವರಣ ನಿಮ್ಮ ನಿಮ್ಮ ಮನೆ-ಮನಗಳಲ್ಲಿ ಇರಬೇಕು. ಗೊಂದಲದ ವಾತಾವರಣದಲ್ಲಿ ಶಿವಯೋಗ ಮಾಡಬಾರದು. ಭಕ್ತಿಪ್ರಧಾನವಾದ ವಾತಾವರಣವಿರಬೇಕು. ಸಮರ್ಪಣ ಭಾವವಿರಬೇಕು. ನಿಸ್ವಾರ್ಥ ಸೇವೆಯು ಸಾಧನೆಗೆ ಅತಿ ಅವಶ್ಯಕ. ಸೇವೆಯಲ್ಲಿ ಸಂತೃಪ್ತಿ ಹೊಂದಬೇಕು ಇದಕ್ಕೆ ತ್ಯಾಗದ ಅವಶ್ಯಕತೆಯಿದೆ. ಬಸವಣ್ಣನವರನ್ನು ಕೆಲವರು ತಾತ್ವಿಕವಾಗಿ ಒಪ್ಪಿಕೊಂಡಿದ್ದರೆ, ಕೆಲವರು ಧಾರ್ಮಿಕವಾಗಿ ಒಪ್ಪಿಕೊಂಡಿದ್ದಾರೆ. ಧಾರ್ಮಿಕ ಪೂಜೆ ಆಚೆಗೆ ಸಾತ್ವಿಕವಾದ ಬಸವಣ್ಣನವರಿದ್ದಾರೆ. ಅವರನ್ನು ಸಹ ಹಲವರು ಒಪ್ಪಿಕೊಂಡಿದ್ದಾರೆ. ಮೌಢ್ಯ ನಿವಾರಣೆಯ ಜೊತೆಗೆ ಸಾಮಾಜಿಕ ಪರಿವರ್ತನೆಯಾಗಬೇಕು. ಶಿವಯೋಗವು ಅಭಿವೃದ್ಧಿಯ ಹಾದಿಯೆಡೆಗೆ ಪ್ರೇರಣೆ ನೀಡುತ್ತದೆ. ಶೀವಯೋಗವು ಅಭಿವೃದ್ಧಿಯ ಪಥ, ಪ್ರಗತಿಯ ಪಥ. ಅಂತರಂಗದ ಶೋಧನೆಯಾಗಬೇಕು. ಇದು ಸಾಧನೆಗೆ ಮಾರ್ಗ. ಮನುಷ್ಯರಲ್ಲಿ ಸತ್‍ಚಿಂತನೆಗಳು, ಸಮಾಜಮುಖಿ ಯೋಜನೆಗಳಿರಬೇಕು. ಇವುಗಳು ಅನುಭವ ಮಂಟಪವನ್ನು ಕಲ್ಯಾಣ ರಾಜ್ಯವನ್ನಾಗಿಸುತ್ತದೆ ಎಂದು ತಮ್ಮ ಆಶಯ ನುಡಿಗಳಲ್ಲಿ ತಿಳಿಸಿದರು.  ನಂತರ ಸಹಜ ಶಿವಯೋಗದ ವಿಧಾನಗಳನ್ನು ಪ್ರಾರಂಭಿಸಿ ಶರಣ ಭಕ್ತರೊಂದಿಗೆ ಶಿವಯೋಗವನ್ನು ನೆರವೇರಿಸಿಕೊಟ್ಟರು.

ಚಿಕ್ಕೋಡಿ ಶ್ರೀ ಚರಮೂರ್ತೇಶ್ವರ ಮಠದ ಶ್ರೀ ಸಂಪಾದನಾ ಸ್ವಾಮಿಗಳು ಮಾತನಾಡಿ, ಇತ್ತೀಚೆಗೆ ಎಲ್ಲೆಡೆ ಅನುಭವ ಮಂಟಪದ ಕಲ್ಪನೆಗಳನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಬಸವತತ್ತ್ವವೇ ಕಾರಣ. ಮುರುಘಾಮಠದಲ್ಲಿ ಸಾಮುಹಿಕ ಕಲ್ಯಾಣ ಕಾರ್ಯಕ್ರಮವು ಪ್ರತಿ ತಿಂಗಳು ನಡೆಯುತ್ತಿದೆ. ಜನ ಅವiವಾಸ್ಯೆ, ಹುಣ್ಣಿಮೆ ಯಾವುದನ್ನು ನೋಡದೇ ಸಾಮೂಹಿಕ ವಿವಾಹಗಳಲ್ಲಿ ಮದುವೆಗಳನ್ನು ಮಾಡುತ್ತಿದ್ದಾರೆ. ಜನ ಮೂಢನಂಬಿಕೆಗಳಿಂದ ಹೊರಬರಲು ಮುರುಘಾ ಶ್ರೀಗಳೇ ಮುಖ್ಯ ಕಾರಣ ಎಂದು ತಿಳಿಸಿದರು.

ರಾಯಚೂರು ಬಸವಕೇಂದ್ರದ ಶ್ರೀ ಸಿ.ಬಿ.ಪಾಟೀಲ್ ಮಾತನಾಡಿ, ನಾನು ಜೀವನದಲ್ಲಿ ವಿಧವೆಗೆ ಬಾಳು ಕೊಡುತ್ತೇನೆ ಎಂದು ಹೇಳಿದ್ದೆ. ಅದೇ ರೀತಿ ಶ್ರೀಗಳ ಆಶಯದಂತೆ ನಾನು ಇದೇ ಶ್ರೀಮಠದಲ್ಲಿ ವಿವಾಹವಾದೆ. 12ನೇ ಶತಮಾನದ ಬಸವಣ್ಣನವರ ಚಿಂತನೆಗಳು ಶ್ರೀಗಳ ಕಾಲದಲ್ಲಿ ಜಾರಿಗೆ ಬರುತ್ತಿವೆ. ಕ್ರಾಂತಿಗಾಗಿ ಹಾಗು ಶಾಂತಿಗಾಗಿ ಎಂಬಂತೆ ಶ್ರೀಗಳು ಕ್ರಾಂತಿಯೋಗಿಯಾಗಿದ್ದಾರೆ. ಬಸವತತ್ತ್ವ ಆಚರಣೆಯಿಂದ ಜನ ನೆಮ್ಮದಿಯನ್ನು ಕಾಣಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಯಡ್ರಾಮಿ ಶ್ರೀ ವಿರಕ್ತಮಠದ ಶ್ರೀ ಸಿದ್ಧಲಿಂಗಸ್ವಾಮಿಗಳು, ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ-2021ರ ಗೌರವಾಧ್ಯಕ್ಷರಾದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಧಾರವಾಡ ಬಸವಕೇಂದ್ರದ ಶ್ರೀ ಸಿದ್ಧರಾಮಣ್ಣ ನಡಕಟ್ಟಿ, ಶ್ರೀ ಮಹಾಜನ ಶೆಟ್ಟಿ, ಹರಗುರು ಚರಮೂರ್ತಿಗಳು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳು(ಕೇಂದ್ರ) ಮುಖ್ಯ ಇಂಜಿನಿಯರ್ ಶ್ರೀ ಬಿ.ಟಿ.ಕಾಂತರಾಜು, ಚಿತ್ರದುರ್ಗ ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಶ್ರೀ ಕೆ.ದುರುಗಪ್ಪ, ಚಿತ್ರದುರ್ಗ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶ್ರೀ. ಎನ್.ಸತೀಶ್‍ಬಾಬು ಇವರುಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ  ಪ್ರೊ.ಜಿ.ಬಿ.ಹಳ್ಯಾಳರವರಿಂದ ಶಿವಯೋಗ ಪ್ರಸ್ತಾವನೆ, ಜಮುರಾ ಕಲಾವಿದರು ಪ್ರಾರ್ಥಿಸಿ,  ನೇತ್ರಾವತಿ ಎಸ್.ಆರ್.ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಳನೀರು ? ನಿಂಬೆ ರಸ ? ಸುಡುವ ಬಿಸಿಲಿನಲ್ಲಿ ಯಾವ ಪಾನೀಯ ಉತ್ತಮ….!

ಸುದ್ದಿಒನ್ : ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಅನೇಕರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಕಾಲಕಾಲಕ್ಕೆ ಹೈಡ್ರೇಟಿಂಗ್(ನಿರ್ಜಲೀಕರಣ) ಪಾನೀಯವನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಹೈಡ್ರೇಟಿಂಗ್ ಪಾನೀಯಗಳ ವಿಷಯಕ್ಕೆ ಬಂದರೆ, ಜನರ ಮನಸ್ಸಿಗೆ ಮೊದಲು

Aadhaar Card Updates : ಆಧಾರ್ ಕಾರ್ಡ್ ನಲ್ಲಿ ಈ ವಿವರಗಳನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ..

ಸುದ್ದಿಒನ್ : ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಸಂಪರ್ಕವನ್ನು ಪಡೆಯಲು ಅಥವಾ ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಪ್ರಸ್ತುತ ಭಾರತೀಯ ಪೌರತ್ವಕ್ಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

error: Content is protected !!