in ,

ಕೊಳಗೇರಿಗಳಲ್ಲಿ ವಾಸಿಸುವವರನ್ನು ತೆರವುಗೊಳಿಸುವ ಹಕ್ಕು ಯಾರಿಗೂ ಇರುವುದಿಲ್ಲ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

suddione whatsapp group join

ಚಿತ್ರದುರ್ಗ, (ಏ19) : ಘೋಷಿತ ಕೊಳಚೆ ಪ್ರದೇಶವೆಂದು ಸರ್ಕಾರ ಘೋಷಿಸಿದ ಮೇಲೆ ಕೊಳಗೇರಿಗಳಲ್ಲಿ ವಾಸಿಸುವವರನ್ನು ತೆರವುಗೊಳಿಸುವ ಹಕ್ಕು ಯಾರಿಗೂ ಇರುವುದಿಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿ ಭೋವಿ ಕಾಲೋನಿ ಹಾಗೂ ಸಂಪಿಗೆ ಸಿದ್ದೇಶ್ವರ ಶಾಲೆ ಹಿಂಭಾಗ ಕೊಳಚೆ ಪ್ರದೇಶಗಳಲ್ಲಿ ಮಂಗಳವಾರ 292 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು ಕೇಂದ್ರ ಮತ್ತು ರಾಜ್ಯ ಸರ್ಕಾರ 1650 ಮನೆಗಳನ್ನು ನೀಡಿದೆ.

ಅದರಂತೆ ಸೌಲಭ್ಯಗಳನ್ನು ನೀಡಿದ್ದೇವೆ. ಕೇಂದ್ರದಿಂದ 3.50 ಲಕ್ಷ ರೂ.ಗಳನ್ನು ನೀಡಲಾಗುವುದು. ಇನ್ನು ಫಲಾನುಭವಿಗಳು ಸಾಧ್ಯವಾದರೆ ಕೈಯಿಂದ ಹಣ ಹಾಕಿ ಗುಣಮಟ್ಟದ ಮನೆಗಳನ್ನು ಕಟ್ಟಿಕೊಳ್ಳಬಹುದು. ಎಸ್ಸಿ, ಎಸ್ಟಿ ಜನಾಂಗ 75 ಸಾವಿರ ರೂ. ಹಾಗೂ ಸಾಮಾನ್ಯ ವರ್ಗದವರು ಒಂದು ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಜಮಾ ಮಾಡಬೇಕು. ಇದಕ್ಕೆ ಖಾತೆ ಇರಬೇಕೆಂಬ ನಿಯಮವಿಲ್ಲ. ಹತ್ತೊಂಬತ್ತು ಸ್ಲಂಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಕೆಲವು ಕೊಳಗೇರಿಗಳಲ್ಲಿ ಸ್ಥಳ ಕಡಿಮೆಯಿದ್ದು, ಹೆಚ್ಚು ಮನೆಗಳನ್ನು ಕಟ್ಟಬೇಕಾದಂತ ಸಂದರ್ಭ ಬಂದಾಗ ಒಂದರ ಮೇಲೊಂದು ಮನೆಗಳನ್ನು ನಿರ್ಮಿಸಲಾಗುವುದು. ಒಟ್ಟಾರೆ ಕೊಳಗೇರಿಗಳಲ್ಲಿನ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುವುದು ಸರ್ಕಾರದ ಜವಾಬ್ದಾರಿ.

ಹದಿನಾರರಿಂದ ಹದಿನೆಂಟು ಸಾವಿರ ಅರ್ಜಿಗಳು ಮನೆಗಾಗಿ ಬಂದಿವೆ. ಇದರಲ್ಲಿ ಏಳರಿಂದ ಎಂಟು ಸಾವಿರ ಅರ್ಜಿದಾರರು ಮನೆಗಳನ್ನು ತೆಗೆದುಕೊಂಡಿದ್ದಾರೆ. ಆದರೂ ಮತ್ತೆ ಅರ್ಜಿಗಳನ್ನು ಸಲ್ಲಿಸಿದ್ದಾರೆಂದು ಗೊತ್ತಾಗಿದೆ. ಮನೆಗಳಿಗೆ ಬೇಡಿಕೆ ಜಾಸ್ತಿಯಿದ್ದು, ಎಲ್ಲಿಯೂ ಜಾಗ ಸಿಗುತ್ತಿಲ್ಲ.

ಲೈಂಗಿಕ ಅಲ್ಪಸಂಖ್ಯಾತರಿಗೂ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಕವಾಡಿಗರಹಟ್ಟಿ, ಕಾಮನಬಾವಿ ಬಡಾವಣೆಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ತಿಂಗಳು ರಾಜ್ಯದ ಮುಖ್ಯಮಂತ್ರಿಯಿಂದ ಒಂದುವರೆಯಿಂದ ಎರಡು ಸಾವಿರ ಕೋಟಿ ರೂ.ಗಳ ಯೋಜನೆ ಉದ್ಘಾಟನೆಗೊಳ್ಳಲಿದೆ. ಇಡೀ ರಾಜ್ಯದಲ್ಲಿಯೇ ಚಿತ್ರದುರ್ಗ ನಗರದ ಫಲಾನುಭವಿಗಳು ಸರ್ಕಾರಕ್ಕೆ ಹಣ ಸಂದಾಯ ಮಾಡಿರುವುದರಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆಂದು ಶಾಸಕರು ಮೆಚ್ಚಿಗೆ ವ್ಯಕ್ತಪಡಿಸಿದರು.

ನಗರೋತ್ಥಾನ ಯೋಜನೆಯಡಿ ಚಿತ್ರದುರ್ಗಕ್ಕೆ ರಾಜ್ಯದ ಮುಖ್ಯಮಂತ್ರಿ ನಲವತ್ತು ಕೋಟಿ ರೂ.ಗಳನ್ನು ನೀಡಿದ್ದಾರೆ. ಇದರಲ್ಲಿ ರಸ್ತೆ, ಉದ್ಯಾನವನ ನಿರ್ಮಾಣ, ದೀಪಗಳ ಅಳವಡಿಕೆಗೆ ಬಳಸಲಾಗುವುದು. ನಗರದ ಅನೇಕ ಭಾಗಗಳಲ್ಲಿ ಮನೆಗಳಿಲ್ಲದೆ ಸಮಸ್ಯೆಯಲ್ಲಿರುವವರು ಸಾಕಷ್ಟಿದ್ದಾರೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಯಾವುದೆ ಜಾತಿ ಜನಾಂಗ ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ನಗರಕ್ಕೆ ಈಗಾಗಲೆ ಐದುನೂರು ಲೈಟ್‍ಗಳು ಬಂದಿದೆ ಎಂದು ತಿಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಡಿ.ಮಲ್ಲಿಕಾರ್ಜುನ್ ಮನೆಗಳ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಅನುರಾದ ರವಿಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಶ್ರೀನಿವಾಸ್, ನಗರಸಭೆ ಸದಸ್ಯರುಗಳಾದ ಹರೀಶ್, ಸುರೇಶ್, ಫಕೃದ್ದಿನ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೀರೇಶ್, ಕಿರಣ್, ವೇದಮೂರ್ತಿ, ವೆಂಕಟೇಶ್, ಪರಮೇಶ್, ರವಿಕುಮಾರ್ ನಾಗರಾಜ್, ಇಂಜಿನಿಯರ್‍ಗಳಾದ ನಾರಾಯಣರೆಡ್ಡಿ, ವೀರೇಶ್, ಚಂದ್ರಶೇಖರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಸಾರಿಗೆ ಪ್ರಾಧಿಕಾರದ ಅನುಮತಿ ಕಡ್ಡಾಯ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ

ಏ.20 ರಂದು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ