Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆಯನ್ನು ಮಾಡುವಂತಿಲ್ಲ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

Facebook
Twitter
Telegram
WhatsApp

ಚಿತ್ರದುರ್ಗ, (ಸೆಪ್ಟೆಂಬರ್. 07) : ಕೋವಿಡ್ 19 ಮೂರನೇ ಅಲೆ ಹಿನ್ನೆಲೆಯಲ್ಲಿ ಈ ಬಾರಿ ಗಣೇಶೋತ್ಸವವನ್ನು ಸರಳವಾಗಿ, ತಮ್ಮ ಮನೆ, ಅಥವಾ ಸರ್ಕಾರಿ, ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು.

ಸರಳ ಗಣೇಶೋತ್ಸವ ಆಚರಿಸುವಂತೆ  ಸರ್ಕಾರ ಪರಿಷ್ಕೃತ ಮಾರ್ಗಸೂಚಿ  ಬಿಡುಗಡೆಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿ ಹಾಗೂ ಮನೆಯಲ್ಲಿ ಎರಡು ಅಡಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಗರಿಷ್ಠ 5 ದಿನಗಳಿಗಿಂತ ಹೆಚ್ಚಿನ ದಿನ ಆಚರಿಸುವಂತಿಲ್ಲ ಎಂದರು.
ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಮೆರವಣಿಗೆಯನ್ನು ಮಾಡುವಂತಿಲ್ಲ ಎಂದುಳ ಹೇಳಿದರು.

ಗಣೇಶ ಮೂರ್ತಿ ವಿಸರ್ಜನೆಗೆ ಜಿಲ್ಲೆಯಲ್ಲಿ 31 ಸ್ಥಳಗಳ ಗುರುತು :

ಚಂದ್ರವಳ್ಳಿ ಕೆರೆ ಬಳಿ ಇರುವ ಬಾವಿ. ಗುಮಾಸ್ತರ ಕಾಲೋನಿ 3ನೇ ಕ್ರಾಸ್ ಬಳಿ ತೊಟ್ಟಿ. ರಾಂದಾಸ್ ಕಾಂಪೌಂಡ್ ನೀರಿನ ಟ್ಯಾಂಕ್ ಹತ್ತಿರ ಆವರಣದಲ್ಲಿರುವ ತೊಟ್ಟಿ. ತುರುವನೂರು ರಸ್ತೆ ತಿಪ್ಪೇಸ್ವಾಮಿ ಮಠದ ಬಳಿ ಆವರಣದಲ್ಲಿರುವ ತೊಟ್ಟಿ. ಜೆ,ಜೆ. ಹಟ್ಟಿ ಆವರಣದಲ್ಲಿರುವ ತೊಟ್ಟಿ. ಏಕನಾಥೇಶ್ವರಿ ಪಾದಗೂಡಿ ಬಳಿ ಆವರಣದಲ್ಲಿರುವ ತೊಟ್ಟಿ. ಚನ್ನಕೇಶವ ದೇವಸ್ಥಾನ ಹಿಂಭಾಗದ ಕೆಳಗೋಟೆ ಆವರಣದಲ್ಲಿರುವ ತೊಟ್ಟಿ. ಬಿ.ಎಲ್. ಗೌಡ ಲೇಔಟ್ ಆವರಣದಲ್ಲಿರುವ ತೊಟ್ಟಿ. ಆಫಿಯಾ ಆಸ್ಪತ್ರೆ ಮರದ ಹತ್ತಿರ ತೊಟ್ಟಿ. ಸ್ಟೇಡಿಯಂ ಮುಂಭಾಗ ಆವರಣದಲ್ಲಿರುವ ತೊಟ್ಟಿ. ರಾಜ್‍ಕುಮಾರ್ ಪಾರ್ಕ್ ಐಯುಡಿಪಿ ಲೇಔಟ್ 4ನೇ ಕ್ರಾಸ್ ಹತ್ತಿರದಲ್ಲಿರುವ ತೊಟ್ಟಿ. ಮಹಾವೀರ್ ನಗರದ ಪಾರ್ಕ್ ಬಳಿ ಆವರಣದಲ್ಲಿರುವ ತೊಟ್ಟಿ.

ಚಳ್ಳಕೆರೆ ನಗರಸಭೆ:  ಐ.ಬಿ. ಆವರಣದಲ್ಲಿರುವ ತೊಟ್ಟಿ. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಮುಂಭಾಗದ ಆವರಣದಲ್ಲಿರುವ ತೊಟ್ಟಿ. ವಾಲ್ಮೀಕಿ ನಗರದ ಪಂಪ್‍ಹೌಸ್ ಆವರಣದಲ್ಲಿರುವ ತೊಟ್ಟಿ, ಹಳೆಯ ನಗರಸಭೆ ಕಾರ್ಯಾಲಯದ ಆವರಣದಲ್ಲಿರುವ ತೊಟ್ಟಿ.

ಹಿರಿಯೂರು ನಗರಸಭೆ: ನೆಹರು ಮೈದಾನದಲ್ಲಿರುವ ಆವರಣದಲ್ಲಿರುವ ಎರಡು ತೊಟ್ಟಿ. ಟ್ರಾಕ್ಟರ್ ಮೂಲಕ ಸಂಚಾರಿ ವಾಹನ. ಮೀನುಗಾರಿಕೆ ಇಲಾಖೆ ಆವರಣದಲ್ಲಿರುವ ತೊಟ್ಟಿ.

ಹೊಸದುರ್ಗ ಪುರಸಭೆ: ಮೀನುಗಾರಿಕೆ ಇಲಾಖೆ ಆವರಣದಲ್ಲಿರುವ ತೊಟ್ಟಿ. ಲೋಕೋಪಯೋಗಿ ಆವರಣದಲ್ಲಿರುವ ಸಿಮೆಂಟ್ ತೊಟ್ಟಿ. ಮಧ್ಯಾಂತರ ನೀರು ಸರಬರಾಜು ಘಟಕದ ಮುಂಭಾದಲ್ಲಿರುವ ನೀರಿನ ತೊಟ್ಟಿ. ಸಂಚಾರಿ ವಾಹನ-1.

ಹೊಳಲ್ಕೆರೆ ಪುರಸಭೆ: ಹೊಳಲ್ಕೆರೆ ಪಟ್ಟಣದ ಎನ್‍ಇಎಸ್ ಕಾಲೋನಿ ತಾಲ್ಲೂಕು ಪಂಚಾಯಿತಿ ಕಚೇರಿ ಹಿಂಭಾದ ಮೀನು ಸಾಗಾಣಿಕೆ ತೊಟ್ಟಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಆವರಣದಲ್ಲಿರುವ ತೊಟ್ಟಿ. ಹರೇಹಳ್ಳಿ ಪರಪ್ಪ ಮಠದ ಪಕ್ಕದ ಆವರಣದಲ್ಲಿರುವ ತೊಟ್ಟಿ.

ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ: ಕೋಟೆ ಬಡಾವಣೆ ಆವರಣದಲ್ಲಿರುವ ತೊಟ್ಟಿ.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ: ಮಾದಯ್ಯನ ಹಟ್ಟಿ ಸಮೀಪ ಹತ್ತಿರ ಇರುವ ತೊಟ್ಟಿ. ಮಹಲಿಂಗಪ್ಪನವರ ತೋಟದ ಹತ್ತಿರ ಇರುವ ತೊಟ್ಟಿ. ಕೋಲಮ್ಮನಹಳ್ಳಿ ರಸ್ತೆಯ ಶುದ್ಧ ನೀರಿನ ಘಟಕದಲ್ಲಿರುವ ಸಮೀಪ ಆವರಣದಲ್ಲಿರುವ ತೊಟ್ಟಿ.

ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ

ಚಿತ್ರದುರ್ಗ ನಗರಸಭೆ 12,
ಚಳ್ಳಕೆರೆ ನಗರಸಭೆ 4,
ಹಿರಿಯೂರು ನಗರಸಭೆ 4,
ಹೊಸದುರ್ಗ ಪುರಸಭೆ 4,
ಹೊಳಲ್ಕೆರೆ ಪುರಸಭೆ 3,
ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ 1, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ 3 ಸ್ಥಳಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 31 ಸ್ಥಳಗಳನ್ನು ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಗುರುತಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ ಮಾಹಿತಿ ನೀಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರು ಮುಸ್ಲಿಂ ಹೆಸರು ಹೇಳಬೇಡಿ : ಸಿ ಎಂ ಇಬ್ರಾಹಿಂ

  ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಯಾದ ಮೇಲೆ ಸಿ ಎಂ ಇಬ್ರಾಹಿಂ ಇದೀಗ ಕಾಣಿಸಿಕೊಂಡಿದ್ದು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರು ಸಹ ಮುಸ್ಲಿಂ ಹೆಸರು ಹೇಳಬೇಡಿ. ನಮ್ಮ ಪಾಡಿಗೆ ನಮಗೆ ಇರುವುದಕ್ಕೆ ಬಿಡಿ

ಗೋವಿಂದ ಕಾರಜೋಳರನ್ನು ಬೆಂಬಲಿಸಿ :  ಮಾಜಿ ಶಾಸಕ ರಾಮಯ್ಯ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ದೇಶದ ಭವಿಷ್ಯದ ಬಗ್ಗೆ ದೂರದೃಷ್ಟಿಯಿಟ್ಟುಕೊಂಡಿರುವ ನರೇಂದ್ರಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಬೇಕಾಗಿರುವುದರಿಂದ ಈ

ರಂಗಭೂಮಿ ಕಲೆಯಿಂದ ಯಾವ ಕಲೆಗಳೂ ಹೊರತಾಗಿಲ್ಲ : ಎಸ್.ಸಂದೀಪ್

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.24  : ರಂಗಭೂಮಿ ಕಲೆಯಿಂದ ಯಾವ ಕಲೆಗಳೂ ಹೊರತಾಗಿಲ್ಲ. ಸಂಗೀತ, ನಾಟಕ, ನೃತ್ಯ ಮುಂತಾದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ರಂಗಭೂಮಿ ಹಾಸುಹೊಕ್ಕಾಗಿದೆ. ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಪ್ರತಿಯೊಂದೂ ಅಂಶಗಳನ್ನು ಕಲಿಯಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ

error: Content is protected !!