ಬೆಂಗಳೂರು; ರಿಯಾಲಿಟಿ ಶೋನಲ್ಲಿ ಫೇಮಸ್ ಆಗಿದ್ದ ರಜತ್ ಹಾಗೂ ವಿನಯ್ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಲು ಹೋಗಿ ತಗಲಾಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಪೊಲೀಸರ ವಶದಲ್ಲಿಯೇ ಇದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಇಬ್ಬರು ಪೊಲೀಸರಿಗೆ ಯಾಮಾರಿಸಿದ್ದಾರೆ. ರಿಯಲ್ ಮಚ್ಚನ್ನ ಕೊಡದೆ ಯಾಮಾರಿಸಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಪ್ರತಿಕ್ರಿಯೆ ನೀಡಿದ್ದು, ರೀಲ್ಸ್ ಮಾಡಿದ್ದ ಒರಿಜಿನಲ್ ಮಚ್ಚನ್ನು ಈವರೆಗೂ ಹ್ಯಾಂಡವರ್ ಮಾಡಿಲ್ಲ. ಅಸಲಿ ಮಚ್ಚಿಗೂ, ಫೈಬರ್ ಮಚ್ಚಿಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ಈವರೆಗೂ ಅಸಲಿ ಮಚ್ಚಿನ ಬಗ್ಗೆ ಮಾಹಿತಿ ನೀಡಿಲ್ಲ. ಪೊಲೀಸರ ದಿಕ್ಕನ್ನ ತಪ್ಪಿಸುವ ಪ್ರಯತ್ನವನ್ನು ಇಬ್ಬರು ಆರೋಪಿಗಳು ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಸಹ ಪ್ರಕರಣ ದಾಖಲಿಸಲಾಗಿದೆ. ಸಂಜೆ ವೇಳೆಗೆ ಕಸ್ಟಡಿಗೆ ಬೇಕಾ..? ಬೇಡ್ವಾ ಅಂತ ತನಿಖಾಧಿಕಾರಿಗಳು ತೀರ್ಮಾನ ಮಾಡ್ತಾರೆ ಎಂಬ ಮಾಹಿತಿ ನೀಡಿದ್ದಾರೆ.
ವಿನಯ್ ಹಾಗೂ ರಜತ್ ಇಬ್ಬರು ಕೂಡ ಪೊಲೀಸರ ವಶದಲ್ಲಿಯೇ ಇದ್ದಾರೆ. ರೀಲ್ಸ್ ಮಾಡಿದ ಮಚ್ಚನ್ನೇ ಪೊಲೀಸರ ವಶಕ್ಕೆ ನೀಡಿದ್ದರೆ ಸಂಕಷ್ಟದಿಂದ ಪಾರಾಗುವ ಸಾಧ್ಯತೆ ಇತ್ತು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರ ಪರಿಣಾಮ ಸ್ಟೇಷನ್ ನಲ್ಲಿ ಕೂರುವ ಪರಿಸ್ಥಿತಿ ಬಂದಿದೆ. ತನಿಖೆ ನಡೆಯುತ್ತಿದ್ದು, ಇಷ್ಟು ದಿನಗಳಾದರೂ ಒರಿಜಿನಲ್ ಮಚ್ಚು ಸಿಗದೆ ಇರುವುದೇ ಆಶ್ಚರ್ಯವಾಗಿದೆ. ಶೂಟ್ ಮಾಡಿದ ಮೇಲೆ ಆ ಮಚ್ಚನ್ನ ಏನು ಮಾಡಿದರು ಎಂಬ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಈಗ ಒರಿಜಿನಲ್ ಮಚ್ಚು ಕೊಟ್ಟರು ಅದು ಕೂಡ ಅಪರಾಧವಾಗಲಿದೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದು ನಿಜವಾಗುತ್ತದೆ.
ಸುದ್ದಿಒನ್, ಮೊಳಕಾಲ್ಮೂರು, ಏಪ್ರಿಲ್. 01 : ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ…
ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು, ಈ ರಾಶಿಯವರು ಯಾವುದೇ ಕಾರಣಕ್ಕೂ ಉದ್ಯೋಗದ ಸ್ಥಳ ಬದಲಾಯಿಸಬಾರದು,…
ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಯುಗಾದಿ ಹಬ್ಬವನ್ನು ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಸಂಭ್ರಮದಿಂದ ಆಚರಿಸಲಾಯಿತು.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಮಾರ್ಚ್…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಗೋನೂರು ಸಮೀಪವಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿಶೇಷವಾದ…