ವಾಷಿಂಗ್ಟನ್: ಇತ್ತೀಚೆಗೆ ಸಾಮಾಜಿಕ ಜಾಲತಾಣ ಉಪಯೋಗಿಸದೆ ಇರುವವರೇ ಇಲ್ಲ. ಒಂದು ವೇಳೆ ತಿನ್ನೋ ಊಟ ಬಿಡ್ತಾರೆ ವಿನಃ ಸೋಷಿಯಲ್ ಮೀಡೊಯಾ ಬಿಡಲ್ಲ. ಅಷ್ಟು ಅಡಿಕ್ಟ್ ಆಗಿದ್ದಾರೆ. ಇಲ್ಲೊಂದು ಫ್ಯಾಮಿಲಿಯಲ್ಲಿ ಸೊಸೆಗೆ ಫೇಸ್ ಬುಕ್ ಮುಳುವಾಗಿದೆ.
ಫೇಸ್ ಬುಕ್ ನಲ್ಲಿ ಸೊಸೆ, ಅತ್ತೆ, ಮಾವ ಎಲ್ಲರು ಫ್ರೆಂಡ್ಸ್ ಆಗಿದ್ದರಂತೆ. ಆದ್ರೆ ಆ ಸೊಸೆ ಅತ್ತೆ ಮಾವನ ಜೊತೆಯಲ್ಲಿರಲಿಲ್ಲ ಬದಲಿಗೆ ಗಂಡ ಮಕ್ಕಳ ಜೊತೆ ಬೇರೆಡೆ ವಾಸವಿದ್ದರು. ಆಗಾಗ ಫ್ರೆಂಡ್ಸ್ ಜೊತೆ, ಫ್ಯಾಮಿಲಿ ಜೊತೆ ಟ್ರಿಪ್ ಹೋಗುತ್ತಿದ್ದ ಮಹಿಳೆ ತಮ್ಮ ಫೋಟೋಗಳನ್ನು ಫೇಸ್ ಬುಕ್ ಹಾಕುತ್ತಿದ್ದಳಂತೆ.
ಅವಳ ಮತ್ತು ಮಗ, ಮಕ್ಕಳ ಜೊತೆಗಿನ ಫೋಟೋಗೆ ಅತ್ತೆ ಮಾವ ಪಾಸಿಟಿವ್ ಕಮೆಂಟ್ ಮಾಡುತ್ತಿದ್ದರಂತೆ. ಆದ್ರೆ ಫ್ರೆಂಡ್ಸ್ ಜೊತೆ ಎಲ್ಲಾದರೂ ಹೋಗಿದ್ರೆ ಆ ಫೋಟೋ ಮನಸ್ಸಿಗೆ ನೋವಾಗುವಂತ ಕಮೆಂಟ್ ಗಳನ್ನೇ ಹಾಕುತ್ತಿದ್ದರಂತೆ. ಇದೇ ಅತಿಯಾದಾಗ ಸೊಸೆ, ಅತ್ತೆ ಮಾವನನ್ನು ಅನ್ ಫ್ರೆಂಡ್ ಮಾಡಿದ್ದಾಳೆ.
ಅನ್ ಫ್ರೆಂಡ್ ಮಾಡಿದ ಪರಿಣಾಮ ಅತ್ತೆ, ಸೊಸೆ, ಮಾವನ ನಡುವೆ ಭಾರಿ ಗಲಾಟೆಯೇ ನಡೆದಿದೆ. ಒಂದು ವೇಳೆ ಮತ್ತೆ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಂಡಿಲ್ಲ ಅಂದ್ರೆ ನಮ್ಮ ಮನೆಗೆ ನೀನು ಬರಲೇ ಬೇಡ ಎಂದಿದ್ದಾರಂತೆ ಅತ್ತೆ ಮಾವ.
