ಚಾಮರಾಜನಗರ: 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಕುಮಾರಸ್ವಾಮಿ ಅವರನ್ನು ಮತ್ತೆ ಸಿಎಂ ಮಾಡಬೇಕು ಎಂಬುದು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರ ಅಸೆಯಾಗಿದೆ. ಅದಕ್ಕೆಂದೆ ಸಾಕಷ್ಟು ಶ್ರಮವಹಿಸಿ ಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ನಿಖಿಲ್, ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ.
“ಸಿನಿಮಾ ನನಗೆ ಪ್ಯಾಷನ್. ಚಿತ್ರರಂಗ ಶೋಕಿಯ ಕ್ಷೇತ್ರವಲ್ಲ. ಒಂದು ಸಿನಿಮಾ ಮಾಡಬೇಕು ಅಂದ್ರೆ ಬಹಳಷ್ಟು ಶ್ರಮವಿರುತ್ತದೆ. ನಾನು ಇದುವರೆಗೂ ನಟಿಸಿದ್ದ ಸಿನಿಮಾಗಳಲ್ಲಿ ಲಾಂಗು – ಮಚ್ಚು ಹಿಡಿದಿಲ್ಲ. ಮುಂದೆಯೂ ಹಿಡಿಯುವುದಿಲ್ಲ. ರಾಜ್‍ಕುಮಾರ್, ವಿಷ್ಣು ದಾದಾ ಅವರು ನಮಗೆ ಆದರ್ಶವಾಗಿದ್ದಾರೆ. ನನ್ನನ್ನು ಬಹಳ ಜನ ಸಿನಿಮಾದಿಂದಾನೇ ಗುರುತಿಸುತ್ತಾರೆ. ಆದರೆ ಬಹಳ ಜನ ಸಿನಿಮಾದ ಬಗ್ಗೆ ತಪ್ಪು ಭಾವನೆ ಹೊಂದಿದ್ದಾರೆ.
ಒಂದು ಸಿನಿಮಾದ ಹಿಂದೆ 200 ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ನನಗೆ ಸಿನಿಮಾ ಕನಸು ಬಂದಿದ್ದೆ ಕುಮಾರಸ್ವಾಮಿ ಅವರಿಂದ. ನಮ್ಮ ತಂದೆ ರಾಜಕಾರಣಕ್ಕೆ ಬರುವುದಕ್ಕೂ ಮುನ್ನ ಸಿನಿಮಾ ವಿತರಕರಾಗಿದ್ದರು. ಬಾಲ್ಯದಿಂದ ಅವರನ್ನು ನಾನು ನೋಡುತ್ತಾ ಬಂದ ಕಾರಣದಿಂದಾನೇ ನಾನು ಸಿನಿಮಾಗೆ ಬರಲು ಆಸಕ್ತಿ ಮೂಡಿತು ಎಂದಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…