Connect with us

Hi, what are you looking for?

ಪ್ರಮುಖ ಸುದ್ದಿ

516 ಕ್ಕಿಂತ ಹೆಚ್ಚಿನ ಆಪರೇಷನ್ ಮಾಡಿಸಿಕೊಂಡ ವ್ಯಕ್ತಿಯ ಗಿನ್ನೆಸ್ ದಾಖಲೆ

ಬರ್ಲಿನ್ : ತನ್ನ ದೇಹದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ ಓರ್ವ ವ್ಯಕ್ತಿ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾನೆ.
ಜರ್ಮನಿಯ ರೋಲ್ ಬುಚ್ಹೋಲ್ಜ್ ಎಂಬ ಹೆಸರಿನ ವ್ಯಕ್ತಿ ದೇಹದಲ್ಲಿ ಸುಮಾರು 516 ಕ್ಕಿಂತ ಹೆಚ್ಚಿನ ಮಾರ್ಪಾಡುಗಳು ಮಾಡಿಸಿಕೊಂಡು ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.

ದೇಹದ ರೂಪಾಂತರ ಇನ್ನೂ ಮುಗಿದಿಲ್ಲ ಎಂದು ಹೇಳುವ ಮೂಲಕ ರೋಲ್ಸ್ ಎಲ್ಲರನ್ನು ಅಚ್ಚರಿಗೊಳಿಸಿದರು. 2010 ರಲ್ಲಿ 453 ಆಪರೇಷನ್‌ಗಳು, ಟ್ಯಾಟೂಗಳು ಮತ್ತು ಇಂಪ್ಲಾಂಟ್‌ಗಳಿಗೆ ಒಳಗಾದ ವ್ಯಕ್ತಿ ಅತಿ ಹೆಚ್ಚು ಹೊಲಿಗೆಗಳನ್ನು ಹೊಂದಿರುವುದು ಕಂಡುಬಂದಿದೆ.
ಐದು ವರ್ಷಗಳ ನಂತರ, ಹಲವಾರು ಬದಲಾವಣೆಗಳಿಗೆ ಒಳಗಾದ ರೋಲ್ಸ್, ಹಣೆಯ ಮೇಲೆ ಎರಡು ಕೊಂಬುಗಳನ್ನು ಹೊಂದಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದರು.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನವರು ಆತನ
ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ಇದೀಗ ವೈರಲ್ ಆಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ರೋಲ್ಫ್ ಜರ್ಮನಿಯ ಟೆಲಿಕಾಂ ಕಂಪನಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರು ತಮ್ಮ 40 ನೇ ವಯಸ್ಸಿನಲ್ಲಿ ತಮ್ಮ ಮೊದಲ ಹಚ್ಚೆ ಮತ್ತು ಆಪರೇಷನ್ ಮಾಡಿಸಿಕೊಂಡು ಅವರ ದೇಹದ ಮಾರ್ಪಾಡುಗಳನ್ನು ಪ್ರಾರಂಭಿಸಿದರು.
ಅಂದಿನಿಂದ ರೋಲ್ಸ್ ಕಳೆದ 20 ವರ್ಷಗಳಲ್ಲಿ ತುಟಿಗಳು, ಹುಬ್ಬುಗಳು, ಮೂಗು ಮತ್ತು ಹಣೆಯ ಮೇಲೆ ಎರಡು ಸಣ್ಣ ಕೊಂಬುಗಳೊಂದಿಗೆ ಅನೇಕ ಬದಲಾವಣೆಗಳನ್ನು ಮಾಡಿಸಿಕೊಂಡಿದ್ದಾರೆ.
ಇದರೊಂದಿಗೆ ಸಂಪೂರ್ಣವಾಗಿ ಗುರುತಿಸಲಾರದಷ್ಟು ಬದಲಾಗಿದ್ದಾರೆ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನವರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

error: Content is protected !!