Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಸ ಉದ್ಯೋಗ ನೀತಿ : ಕೇವಲ ಬಂಡವಾಳಶಾಹಿಗಳ ಬೆಳವಣಿಗೆ, ಉದ್ಯೋಗಾಕಾಂಕ್ಷಿಗಳಿಗೆ ಸುಳ್ಳು ಭರವಸೆ : ಎಐಡಿವೈಓ ಖಂಡನೆ

Facebook
Twitter
Telegram
WhatsApp

ಬೆಂಗಳೂರು : ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಉದ್ಯೋಗಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡುವ ಬದಲು, ಕರ್ನಾಟಕ ರಾಜ್ಯ ಸರ್ಕಾರವು ಉದ್ಯೋಗಾಂಕ್ಷಿ ಯುವಜನರನ್ನು ಮರಳುಗೊಳಿಸಲು ಹೊಸ ಉದ್ಯೋಗ ನೀತಿಯನ್ನು ಜಾರಿಗೊಳಿಸುತ್ತಿದೆ.

ಸರ್ಕಾರ ಹೊಸ ಉದ್ಯೋಗ ನೀತಿಯ ಮೂಲಕ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ಸಿಗುತ್ತವೆ ಎಂಬ ಬಣ್ಣದ ಮಾತನ್ನು ಆಡುತ್ತಿದೆ. ಈ ನೀತಿಯಲ್ಲಿ 1 ಕೋಟಿ ಬಂಡವಾಳ ಹೂಡುವ ಉದ್ದಿಮೆದಾರರು ಕನಿಷ್ಠ ಒಂದು ಉದ್ಯೋಗ ಸೃಷ್ಟಿ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಈ ಮೊದಲು 10 ಕೋಟಿ ಬಂಡವಾಳ ಹೂಡಿಕೆಗೆ ಕೇವಲ 7 ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು,  ಈಗ 10 ಉದ್ಯೋಗಗಳು ಸೃಷ್ಟಿಯಾಗುತ್ತವೆ, ಇದು ಹಿಂದಿಗಿಂತ ಪ್ರತಿಶತ 25ರಷ್ಟು ಅಧಿಕವಾಗುತ್ತದೆ ಎಂದು ಹೇಳಲಾಗಿದೆ. ಈ ಹೊಸ ಉದ್ಯೋಗ ನೀತಿಯಿಂದ ಸುಮಾರು 7.5 ಲಕ್ಷ ಉದ್ಯೋಗಗಳು ಹೊಸದಾಗಿ ಸೃಷ್ಟಿಯಾಗುತ್ತವೆ ಎಂದೂ ರಾಜ್ಯ ಸರ್ಕಾರ ಹೇಳಿದೆ. ಇದೂ ಕೂಡ ಕೇಂದ್ರ ಸರ್ಕಾರದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಹುಸಿ ಭರವಸೆಯಂತೆಯೇ!

ಏಕೆಂದರೆ ಮುಂದಿನ ಮೂರು ವರ್ಷಕ್ಕೆ 7.5ಲಕ್ಷ ಉದ್ಯೋಗ ‌ಸೃಷ್ಟಿ‌ಯಾಗಬೇಕೆಂದರೆ ಸುಮಾರು 7.5ಲಕ್ಷ ಕೋಟಿ ಬಂಡವಾಳ ಹೂಡಿಕೆ‌ಯಾಗಬೇಕು. ಈ ಹಿಂದೆ ನಡೆದ ಹೂಡಿಕೆದಾರರ ಸಮಾವೇಶಗಳಲ್ಲಿ ಕೂಡ ಲಕ್ಷಾಂತರ ಹುದ್ದೆಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದ್ದ ಭರವಸೆಗಳು ಸುಳ್ಳಾಗಿವೆ. ನಿರೀಕ್ಷಿತ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯೂ ಆಗಿಲ್ಲ, ಉದ್ಯೋಗಗಳೂ ಸೃಷ್ಟಿಯಾಗಲಿಲ್ಲ. ಬದಲಿಗೆ ಇದರ ಹೆಸರಿನಲ್ಲಿ ಹೂಡಿಕೆದಾರ ಬಂಡವಾಳಗಾರರಿಗೆ ಪುಕ್ಕಟ್ಟೆಯಾಗಿ ಭೂಮಿ, ವಿದ್ಯುತ್, ನೀರು ನೀಡಿ ಜೊತೆಗೆ ತೆರಿಗೆ ವಿನಾಯಿತಿಯನ್ನೂ ಕೊಟ್ಟು ಬಂಡವಾಳಶಾಹಿಗಳು ಬೆಳೆಯಲು ಅವಕಾಶ ಮಾಡಲಾಗಿದೆ. ಈಗ ತಂದಿರುವ ಉದ್ಯೋಗ ನೀತಿಯೂ ಕೂಡ ಬಂಡವಾಳಶಾಹಿಗಳ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ.

ಸರಕಾರಕ್ಕೆ ನಿಜವಾಗಿಯೂ ನಿರುದ್ಯೋಗಿ ಯುವಕರ ಕುರಿತು ಕಾಳಜಿ ಇದ್ದರೆ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 3 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ಅದಕ್ಕಾಗಿ ಒಂದು ಸಮಗ್ರವಾದ ರಚನಾತ್ಮಕವಾದ ಉದ್ಯೋಗ ನೀತಿಯನ್ನು ಅವಶ್ಯಕವಾಗಿ ತರಬೇಕಿತ್ತು. ಬದಲಿಗೆ ರಾಜ್ಯ ಸರ್ಕಾರ ಹೊಸ ಉದ್ಯೋಗ ನೀತಿಯ ಹೆಸರಿನಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಪೂರಕವಾದ ನೀತಿಯನ್ನು ಜಾರಿಗೊಳಿಸುತ್ತಾ ಯುವಜನರ ದಿಕ್ಕುತಪ್ಪಿಸುತ್ತಿದೆ.

ಆದ್ದರಿಂದ ಎಐಡಿವೈಓ ಕರ್ನಾಟಕ ರಾಜ್ಯ ಸಮಿತಿಯು ಈ ಹೊಸ ಉದ್ಯೋಗ ನೀತಿಯನ್ನು ಖಂಡಿಸುತ್ತದೆ. ಈಗಾಗಲೇ ಸರ್ಕಾರದ ಶಿಕ್ಷಣ, ಆರೋಗ್ಯ ಇನ್ನಿತರ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿಮಾಡಬೇಕೆಂದು ಆಗ್ರಹಿಸುತ್ತದೆ. ರಾಜ್ಯದ ಯುವಜನತೆ ಈ ಕುಟಿಲ ನೀತಿಯನ್ನು ಹಿಮ್ಮೆಟ್ಟಿಸಲು  ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದ್ವಾರಕೀಶ್ ಗಾಡ್ ಫಾದರ್ ಆಗಿದ್ದರು ಚಿತ್ರದುರ್ಗದ ಜಾಫರ್ ಶರೀಫ್ : ಜಾಫರ್ ನಿಧನದ ದಿನ ದ್ವಾರಕೀಶ್ ಏನ್ ಹೇಳಿದ್ರು ಗೊತ್ತಾ..?

ಚಿತ್ರದುರ್ಗ: ಇಂದು ದ್ವಾರಕೀಶ್ ಅವರು ಇಲ್ಲ.. ಜಾಫರ್ ಶರೀಫ್ ಅವರು ಇಲ್ಲ. ಆದರೆ ಅವರಿಬ್ಬರ ಬಾಂಧವ್ಯ ಗಟ್ಟಿಯಾಗಿತ್ತು. ಆತ್ಮೀಯತೆ ಹೆಚ್ಚಾಗಿತ್ತು. ಅಣ್ಣ ತಮ್ಮಂದಿರಂತೆ ಸಂಬಂಧ ಹೊಂದಿದ್ದವರು. ವಯೋಸಹಜ ಕಾಯಿಲೆಯಿಂದ ಇಂದು ದ್ವಾರಕೀಶ್ ನಿಧನ ಹೊಂದಿದ್ದಾರೆ.

50 ಸಾವಿರ ಗಡಿದಾಟಿದ ಅಡಿಕೆ ಧಾರಣೆ : ರೈತರ ಮೊಗದಲ್ಲಿ ಸಂತಸ

ದಾವಣಗೆರೆ: ಅಡಿಕೆ ದರ ದಿನೇ ದಿನೇ ಏರಿಕೆ ಇಳಿಕೆಯಾಗುತ್ತಲೆ ಇದೆ. ಕಳೆದ ಕೆಲವು ತಿಂಗಳಿನಿಂದ ಒಂದೇ ರೀತಿಯಿದ್ದ ಅಡಿಕೆ ಬೆಲೆ ಕಂಡು ರೈತರು ನಿರಾಸೆಗೊಂಡಿದ್ದರು. ಆದರೆ ಇದೀಗಕ್ವಿಂಟಾಲ್ ಅಡಿಕೆ ಬೆಲೆ 50 ಸಾವಿರ ಗಡಿ

ವಾಣಿಜ್ಯ ಉದ್ದೇಶಕ್ಕಾಗಿ ಕೊಳವೆಬಾವಿ ನೀರು ಮಾರಾಟ ನಿಷೇಧ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ

ಚಿತ್ರದುರ್ಗ. ಏ.16:    ಚಿತ್ರದುರ್ಗ ಜಿಲ್ಲೆಯಲ್ಲಿ ತೀವ್ರತರನಾದ ಬರಗಾಲ ಆವರಿಸಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಕೊಳವೆಬಾವಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ

error: Content is protected !!