ಚೆನ್ನೈ: ಬ್ರಿಟನ್ ನಲ್ಲಿ ನಿದ್ದೆಗೆಡಿಸಿರುವ ಹೊಸ ಕರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಬ್ರಿಟನ್ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದಂಥ ವ್ಯಕ್ತಿಗೆ ಈ ಹೊಸ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಬ್ರಿಟನ್ನಲ್ಲಿ ಈ ಹೊಸ ಕೋವಿಡ್ ಸೋಂಕು ಮಿತಿಮೀರಿದೆ. ಈ ಸೋಂಕು ಬೇರೆ ದೇಶಗಳಿಗೆ ಹರಡದಂತೆ ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ವಹಿಸಿವೆ. ಈಗಾಗಲೇ ಬ್ರಿಟನ್ ವಿಮಾನ ಹಾರಾಟವನ್ನು ಭಾರತ ರದ್ದು ಮಾಡಿದೆ.
ಆದರೂ ಈ ನಡುವೆಯೇ ಚೆನ್ನೈ ಮೂಲದ ವ್ಯಕ್ತಿ ಬ್ರಿಟನ್ ಪ್ರವಾಸದಲ್ಲಿದ್ದರು. ಇದೇ ಸಂದರ್ಭದಲ್ಲಿ ಬ್ರಿಟನ್ನಲ್ಲಿ ಈ ಹೊಸ ಕರೊನಾ ಸೋಂಕು ಕಾಣಿಸಿಕೊಂಡಿದೆ. ಲಂಡನ್ ನಿಂದ ತಮ್ಮ ಊರಿಗೆ ಬಂದ ಈ ವ್ಯಕ್ತಿಯಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದೆ. ಹೊಸ ಸೋಂಕಿನ ಪತ್ತೆಯನ್ನೂ ವಿಮಾನ ನಿಲ್ದಾಣಗಳಲ್ಲಿ ಮಾಡಲಾಗುತ್ತಿದೆ.
ಬ್ರಿಟನ್ನಿಂದ ಬರುವ ಪ್ರಯಾಣಿಕರಿಗೆ ಆರ್ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಿ ಈ ಸೋಂಕು ತಗುಲಿದೆಯೇ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಚೆನ್ನೈ ವ್ಯಕ್ತಿಗೆ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಹೊಸ ಕರೊನಾ ಆತಂಕ ಸೃಷ್ಟಿಸಲು ಶುರು ಮಾಡಿದಂತಾಗಿದೆ.
ವಿದೇಶ ಪ್ರಯಾಣ ಮಾಡಿದವರಿಂದಲೇ ಕೊರೊನಾ ವೈರಸ್ ಹರಡಿತ್ತು. ಇದೀಗ ಹೊಸ ವೈರಸ್ ಕೂಡ ಅದೆ ರೀತಿ ಹರಡುವ ಸಾಧ್ಯತೆ ಹೆಚ್ಚಾಗಿದೆ.
