Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲರಿಗೂ ಸಮಾನವಾದ ಅವಕಾಶವಿರುವ ಸಮ ಸಮಾಜವೇ ನೇತಾಜಿಯ ಕನಸಾಗಿತ್ತು : ಡಾ ಜಿ.ಎನ್. ಮಲ್ಲಿಕಾರ್ಜುನಪ್ಪ

Facebook
Twitter
Telegram
WhatsApp

ಚಿತ್ರದುರ್ಗ, (ಜ.23) : “ಯುವಕರಿಗೆ ಒಳ್ಳೆಯ ಬದುಕನ್ನು ಕೊಡುವುದು, ಜನತೆಗೆ ಒಳ್ಳೆಯ ಭವಿಷ್ಯವನ್ನು ರೂಪಿಸುವುದಕ್ಕಾಗಿಯೇ ಸೈನ್ಯ ಕಟ್ಟಿ, ಸಮವಸ್ತ್ರ ಧರಿಸಿ ಹೋರಾಡಿದವರು ನೇತಾಜಿ” ಎಂದು ನಿವೃತ್ತ ಪ್ರಾಚಾರ್ಯರು ಹಾಗೂ ಪ್ರಗತಿಪರ ಚಿಂತಕರಾದ ಡಾ ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ಚಿತ್ರದುರ್ಗದಲ್ಲಿ ಇಂದು ಎಐಡಿವೈಓ ಸಂಘಟನೆಯು ಸಂಘಟಿಸಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್‌ರ 125ನೇ ಜನ್ಮ ವಾರ್ಷಿಕದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

“ಮಹಾನ್ ವ್ಯಕ್ತಿಯೊಬ್ಬನ ಜೀವನವನ್ನು ಅರಿಯುವುದು ಮತ್ತೋರ್ವ ವ್ಯಕ್ತಿಗೆ ಶಿಕ್ಷಣವಾಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳ ಮೂಲಕ ನೇತಾಜಿಯವರ ಜೀವನ-ಆದರ್ಶಗಳನ್ನು ಯುವ ಜನತೆಗೆ ಪರಿಚಯ ಮಾಡಿಕೊಡುವಲ್ಲಿ ಎಐಡಿವೈಓ ಸಂಘಟನೆಯ ಈ ಪ್ರಯತ್ನ ಅಭಿನಂದನೀಯ” ಎಂದರು.

ನೇತಾಜಿಯವರ ಜೀವನ ಹೋರಾಟದ ಬಗ್ಗೆ ವಿವರವಾಗಿ ಮಾತನಾಡಿದ ಅವರು, “ಅನ್ಯಾಯ ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳುವುದು ದೊಡ್ಡ ಅಪರಾಧ ಎಂದು ನಂಬಿದ ನೇತಾಜಿಯವರು, ವ್ಯಕ್ತಿಯೊಬ್ಬನ ಅವಕಾಶವನ್ನು ಕಿತ್ತುಕೊಳ್ಳುವುದು ಸಹ ಅನ್ಯಾಯವಾಗುತ್ತದೆ. ಎಲ್ಲರಿಗೂ ಸಮಾನವಾದ ಅವಕಾಶವಿರುವ ಸಮ ಸಮಾಜವೇ ನೇತಾಜಿಯ ಕನಸಾಗಿತ್ತು.

ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶವಾಸಿಗಳ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ. ಶಿಕ್ಷಣ ಉದ್ಯೋಗ ಆರೋಗ್ಯ ಬಡವರ ಪಾಲಿಗೆ ಇಲ್ಲವಾಗಿದೆ. ನೇತಾಜಿಯವರ ಕನಸಿನ ಭಾರತ ಕನಸಾಗಿಯೇ ಉಳಿದಿದೆ. ಅದನ್ನು ನನಸು ಮಾಡುವ ಹೋರಾಟಕ್ಕೆ ನೀವೆಲ್ಲರೂ ಕಿಡಿಗಳಾಗಿ ಹೊರಹೊಮ್ಮಬೇಕು” ಎಂದು ಆಶಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿವೈಓನ ರಾಜ್ಯ ಕಾರ್ಯದರ್ಶಿ, ಸಿದ್ದಲಿಂಗ ಬಾಗೇವಾಡಿ ಅವರು “ರಾಜಕೀಯದಲ್ಲಿ ಧರ್ಮವನ್ನು ಬೆರೆಸಬಾರದು. ಧರ್ಮವು ವ್ಯಕ್ತಿಯೊಬ್ಬನ ವೈಯಕ್ತಿಕ ವಿಷಯವಾಗಿರಬೇಕು ಎಂದು ನಂಬಿದವರು ನೇತಾಜಿ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ಸಾಮಾಜಿಕ ಜೀವನದಿಂದ ದೂರವಿಡಬೇಕು ಎಂಬುದು ಅವರ ಎಚ್ಚರಿಕೆಯ ಕರೆಯಾಗಿತ್ತು. ಅವರ ವಿಚಾರಧಾರೆಗಳು ವೈಜ್ಞಾನಿಕವಾಗಿದ್ದವು.

ಧರ್ಮ ನಿರಪೇಕ್ಷವಾಗಿದ್ದವು ಮತ್ತು ಜನಪರವಾಗಿದ್ದವು. ಆದರೆ ಅಂದಿನ ದಿನಗಳಲ್ಲಿ ಯಾವ ಶಕ್ತಿಗಳು ನೇತಾಜಿಯವರ ಹೋರಾಟಕ್ಕೆ ಬೆಂಬಲ ಕೊಡಲಿಲ್ಲವೋ, ಅಂಥವರು ಇಂದು ಅವರ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿವೆ. ನಾವು ಯುವಕರು ಇಂತಹ ಆಡಂಬರಕ್ಕೆ ಮರುಳಾಗದೆ ನೇತಾಜಿಯವರ ನೈಜ ಉತ್ತರಾಧಿಕಾರಿಗಳಾಗಿ, ಅವರ ಹೋರಾಟದ ಮಾರ್ಗವನ್ನು ಅನುಸರಿಸಿ ಇಂದು ನಮ್ಮ ಕಣ್ಣೆದುರು ನಡೆಯುತ್ತಿರುವ ಅನ್ಯಾಯ,  ಭ್ರಷ್ಟಾಚಾರ, ನಿರುದ್ಯೋಗಗಳ ವಿರುದ್ಧ ಹೋರಾಡಬೇಕು” ಎಂದು ಕರೆ ನೀಡಿದರು.

ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರಾದ ರವಿಕುಮಾರ್ ಮಾತನಾಡಿ “ಇಂದು ದೇಶದ ಅಭಿವೃದ್ಧಿಯ ಬಗ್ಗೆ ಉದ್ಧಾನುದ್ಧ ಭಾಷಣ ಮಾಡುವ ರಾಜಕೀಯ ನಾಯಕರು ಕಾರ್ಮಿಕರನ್ನು ಪುಡಿಗಾಸಿಗೆ ದುಡಿಸಿಕೊಂಡು ಸಮಾನತೆ ಎಂಬ ಪದಕ್ಕೆ ಅವಮಾನ ಮಾಡುತ್ತಿದ್ದಾರೆ. ತಮಗೆ ಲಾಭವಿರುವ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಂಡು ಜನತೆಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೈ ಬಿಡುವ ಪರಿಪಾಠ ಸರ್ವೇಸಾಮಾನ್ಯವಾಗಿದೆ.

ದೇಶದ ಬಜೆಟ್‌ನ ಮೊತ್ತಕ್ಕಿಂತಲೂ ಅಧಿಕ ಆಸ್ತಿಯುಳ್ಳ ದೊಡ್ಡ ಬಂಡವಾಳಗಾರರು ಮತ್ತು ಬಿಲ್ಡರ್ಸ್ಗಳನ್ನು ಮಾತ್ರ ಬೆಳೆಸುತ್ತಿರುವ ಇಂದಿನ ವ್ಯವಸ್ಥೆಯನ್ನು ಮೂಲಭೂತವಾಗಿ ಬದಲಾಯಿಸಿ, ನೇತಾಜಿಯ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿಯನ್ನು ಇಂದಿನ ಯುವ ಜನತೆ ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಈ ಸಂಘಟನೆಯ ಪ್ರಯತ್ನಗಳನ್ನು ಬೆಂಬಲಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಗಾಯನ ತಂಡದಿಂದ ಹೋರಾಟದ ಗೀತೆಗಳನ್ನು ಹಾಡಲಾಯಿತು.

ನೇತಾಜಿಯವರ ಜೀವನ-ಆದರ್ಶಕೆ ಸಂಬಂಧಪಟ್ಟ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಹಾಗೂ ಪುಸ್ತಕ ಮಾರಾಟ ಹಮ್ಮಿಕೊಳ್ಳಲಾಗಿತ್ತು. ಕೊನೆಯಲ್ಲಿ ನೇತಾಜಿ ಜನ್ಮ ವಾರ್ಷಿಕದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಗರದ ವಿವಿಧ ಕಾಲೇಜುಗಳ ಪ್ರತಿನಿಧಿಗಳು, ಸಂಘಟನೆಯ ಬೆಂಬಲಿಗರು ಮತ್ತು ನಾಗರಿಕರು ಪಾಲ್ಗೊಂಡಿದ್ದರು. ಎಐಡಿವೈಓ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ನಿಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿನಯ್, ಸದಸ್ಯರಾದ ಪ್ರಸನ್ನ, ಜಗದೀಶ್, ಮುತ್ತುರಾಜ್, ಸುರೇಶ್, ಮಂಜುನಾಥ ದಿನೇಶ್, ಆನಂದ, ರೂಪ, ಅರ್ಪಿತ, ನಿರ್ಮಲ ಮೊದಲಾದವರು ಕಾರ್ಯಕ್ರಮದ ನೇತೃತ್ವವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!