in ,

ಮೂರನೇ ಬಾರಿಯೂ ಮುಂದೂಡಿಕೆಯಾಗುತ್ತಾ ನೀಟ್ ಪರೀಕ್ಷೆ..!?

suddione whatsapp group join

ಬೆಂಗಳೂರು: ಕೊರೊನಾ ಭಯದ ಕಾರಣಕ್ಕೆ ನಡೆಯಬೇಕಿದ್ದ ಪರೀಕ್ಷೆಗಳೆಲ್ಲಾ ಮುಂದೂಡಿಕೆಯಾಗುತ್ತಲೆ ಇವೆ. ಅದರಲ್ಲಿ ನೀಟ್ ಪರೀಕ್ಷೆ ಕೂಡ ಒಂದು. ಎರಡಹ ಬಾರಿಯೂ ಕೊರೊನಾ ಕಾರಣದಿಂದ ಪರೀಕ್ಷೆ ಮುಂದೂಡಿಕೆಯಾಗಿದೆ. ಈ ಬಾರಿಯೂ ಪರೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಯಾಕಂದ್ರೆ ಇದೇ ತಿಂಗಳ 12ರಂದು ನಡೆಯಬೇಕಿದ್ದ ಪರೀಕ್ಷೆಯನ್ನ ಮುಂದೂಡಿಕೆ ಮಾಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಅವರಿಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮನವಿ ಮಾಡಿದ್ದಾರೆ.

16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯೋದಕ್ಕೆ ಈ ಬಾರಿ ನೋಂದಣಿ‌ ಮಾಡಿಕೊಂಡಿದ್ದಾರೆ. ಈಗಾಗಲೇ ಆಗಸ್ಟ್ 1 ರಂದು ಪರೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಆ ಬಳಿಕ ಕೊರೊನಾ ಎರಡನೇ ಅಲೆ ಭಯದಿಂದಾಗಿ ಪರೀಕ್ಷೆ ಮುಂದೂಡಲಾಗಿತ್ತು. ಇದೇ ತಿಂಗಳ 12 ರಂದು‌ ಮತ್ತೆ ಪರೀಕ್ಷೆ ನಿಗಧಿ ಮಾಡಲಾಗಿತ್ತು. ಇದೋಗ ವಿದ್ಯಾರ್ಥಿ ಸಂಘಟನೆಗಳು ಮನವಿ ಮಾಡಿರೋದ್ರಿಂದ ಈ ಬಾರಿಯೂ ಪರೀಕ್ಷೆ ಮುಂದೂಡಬಹುದು ಎನ್ನಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

74ರ ವಸಂತಕ್ಕೆ ಕಾಲಿಟ್ಟ ನಟ ಅನಂತ್ ನಾಗ್ ಗೆ ಶುಭಾಶಯಗಳ ಸುರಿಮಳೆ

ಎಸ್.ನಿಜಲಿಂಗಪ್ಪ ಮನೆಯ ಮುಂಭಾಗದಿಂದ ಸ್ಮಾರಕದವರೆಗೆ ಓಟ ಫಿಟ್ ಇಂಡಿಯಾ ಪ್ರೀಡಂ ರನ್