
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.18) : ಸಾನಿಯ ಈಗ 5ನೇ ಬಾರಿ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕರ್ನಾಟಕ ರಾಜ್ಯ ತಂಡದ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಚಿತ್ರದುರ್ಗ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆ(ರಿ),ಯ ಕಾರ್ಯಾಧ್ಯಕ್ಷರಾದ ಕೆ.ಹೆಚ್.ಶಿವರಾಮು ತಿಳಿಸಿದ್ದಾರೆ.
20 ವರ್ಷದೊಳಗಿನ ರಾಷ್ಟ್ರಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾವಳಿಗೆ ಬಾಲಕ / ಬಾಲಕಿಯರ ವಿಭಾಗದಲ್ಲಿ ನಾಲ್ಕು ಜನ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ವೆಸ್ಟ್ರನ್ ಹಿಲ್ಸ್ ಕಾಲೇಜಿನ ವಿದ್ಯಾರ್ಥಿನಿ ಸಾನಿಯಾ ಹಾಗೂ ಎಸ್.ಜೆ.ಎಂ ಮಹಿಳಾ ಕಾಲೇಜಿನ ವಿದ್ಯಾರ್ಥಿ ಆರ್.ರಂಜಿತಾ, ಬಾಲಕಿಯರ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿಷ್ಣು.ಎನ್.ವಿ ಹಾಗೂ ಸಾವಂತ್ ಹಿಮಗಿರಿ ಆಯ್ಕೆಯಾಗಿದ್ದಾರೆ.
ಬಾಲಕಿಯರ 45ನೇ ರಾಷ್ಟ್ರೀಯ ಹ್ಯಾಂಡ್‍ಬಾಲ್ ಪಂದ್ಯಾವಳಿಗಳು ಉತ್ತರ ಪ್ರದೇಶ ಬರೇಲಿಯಲ್ಲಿ ಮಾ.22 ರಿಂದ 26 ರವರೆಗೆ ಹಾಗೂ ಬಾಲಕರ ರಾಷ್ಟ್ರೀಯ ಹ್ಯಾಂಡ್‍ಬಾಲ್ ಪಂದ್ಯಾವಳಿಗಳು, ರಾಜಸ್ತಾನದ ಬನ್ಸ್‍ವಾರದಲ್ಲಿ ಮಾ. 27 ರಿಂದ 31 ರವರೆಗೆ ನಡೆಯಲಿದೆ.
ಈ ಎಲ್ಲಾ ಕ್ರೀಡಾಪಟುಗಳಿಗೆ ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಸಂಸ್ಥೆಯ ಕಾರ್ಯದರ್ಶಿ ಡಾ|| ಎನ್.ಡಿ.ಗೌಡ, ಖಜಾಂಚಿ ಸಿ.ಎಸ್.ಪ್ರೇಮಾನಂದ ತರಬೇತುದಾರರಾದ ಕಾರ್ತಿಕ್ ಶುಭ ಕೋರಿರುತ್ತಾರೆ.
GIPHY App Key not set. Please check settings