ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ :  ಡಿ. ಸುಧಾಕರ್

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ :  ಡಿ. ಸುಧಾಕರ್

ಚಿತ್ರದುರ್ಗ ಅ. 03 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರಾಷ್ಟ್ರದ 02 ನೇ ಅತ್ಯುತ್ತಮ ಡಿ.ಸಿ.ಸಿ. ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರೂ ಆಗಿರುವ ಡಿ. ಸುಧಾಕರ್ ಅವರು ಹೇಳಿದರು.

ಚಿತ್ರದುರ್ಗದ ಡಿ.ಸಿ.ಸಿ. ಬ್ಯಾಂಕ್‍ನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಚಿವರು, ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ 351 ಡಿ.ಸಿ.ಸಿ. ಬ್ಯಾಂಕುಗಳ ಪೈಕಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 02 ನೇ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಯನ್ನು ಚಿತ್ರದುರ್ಗದ ಡಿ.ಸಿ.ಸಿ. ಬ್ಯಾಂಕ್ ಪಡೆದುಕೊಂಡಿದೆ.

ನ್ಯಾಷನಲ್ ಫೆಡರೇಷನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ ಲಿ. (ಎನ್.ಎ.ಎಫ್.ಎಸ್.ಸಿ.ಒ.ಬಿ) ಮುಂಬೈ ಅವರ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ಕೊಡಮಾಡುವ ಅತ್ಯುತ್ತಮ ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೊದಲ ಸ್ಥಾನವನ್ನು ತೆಲಂಗಾಣದ ಕರೀಂನಗರ ಡಿಸಿಸಿ ಬ್ಯಾಂಕ್ ಹಾಗೂ ಮೂರನೆ ಸ್ಥಾನವನ್ನು ರಾಜಸ್ಥಾನದ ಜೈಪುರ ಡಿಸಿಸಿ ಬ್ಯಾಂಕ್ ಪಡೆದುಕೊಂಡಿದೆ.  ಇದು 2021-22 ನೇ ಸಾಲಿನ ಪ್ರಶಸ್ತಿಯಾಗಿದೆ.  ಕಳೆದ ಸೆ. 26 ರಂದು ರಾಜಸ್ಥಾನ ರಾಜ್ಯದ ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಮತ್ತು ಪಾರಿತೋಷಕ ನೀಡಿ ಸನ್ಮಾನಿಸಲಾಗಿದೆ.

ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಬಿ.ಮಂಜುನಾಥ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‍ಉಲ್ಲಾ ಷರೀಫ್ ಪ್ರಶಸ್ತಿ ಮತ್ತು ಪಾರಿತೋಷಕವನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ರಾಜಸ್ಥಾನ ರಾಜ್ಯದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೇಯಾ, ಓಂಈSಅಔಃ ನ ಅಧ್ಯಕ್ಷ ಕೊಂಡೂರು ರವೀಂದ್ರ ರಾವ್, ಉಪಾಧ್ಯಕ್ಷ ಉಲ್ಲಾಸ್ ದೇಸಾಯಿ, ಸಿಇಒ ಭೀಮಾ ಸುಬ್ರಮಣ್ಯಂ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮತ್ತು ಸಿಇಒ ಸಿ.ಎನ್. ದೇವರಾಜ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ಸಾಧನೆ ಕುರಿತು ಮಾಹಿತಿ ನೀಡಿದ ಸಚಿವರು, ಕಳೆದ 67 ವರ್ಷಗಳಿಂದ ರೈತಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ ನೀಡುತ್ತಾ ಬಂದಿದ್ದು, ಸಾಲ ಹಂಚಿಕೆ, ವಸೂಲಾತಿ ಮತ್ತು ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಾಧಿಸುತ್ತಾ ಬಂದಿದೆ. ಬ್ಯಾಂಕ್ ರೈತ ಸ್ನೇಹಿ ಮತ್ತು ಗ್ರಾಮೀಣಾಭಿವೃದ್ದಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದ್ದು ಬ್ಯಾಂಕ್ ಪ್ರತಿ ವರ್ಷ ಎಲ್ಲಾ ವ್ಯವಹಾರಗಳಲ್ಲಿ ಅಂದರೆ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಷೇರು ಸಂಗ್ರಹಣೆ, ಹೂಡಿಕೆಗಳು, ಸಾಲ ವಸೂಲಾತಿ, ಹೊಸ ರೈತರಿಗೆ ಸಾಲ ವಿತರಣೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿರುವುದನ್ನು ಆಧರಿಸಿ ಚಿತ್ರದುರ್ಗದ ಬ್ಯಾಂಕ್‍ಗೆ ಪ್ರಶಸ್ತಿ ಸಂದಿದೆ ಎಂದರು.

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್ ಅವರು, ಪ್ರ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತಭಾಂದವರಿಗೆ ಬೆಳೆ ಸಾಲ ಮತ್ತು ವ್ಯವಸಾಯ ಅಭಿವೃದ್ಧಿಗೆ ಮಧ್ಯಮಾವಧಿ ಸಾಲ ಹಾಗೂ ವ್ಯವಸಾಯೇತರ ಸಾಲಗಳಾದ ಗೃಹ ನಿರ್ಮಾಣ/ಖರೀದಿ ಸಾಲ, ಚಿನ್ನಾಭರಣ ಸಾಲ, ವಾಹನ ಸಾಲ, ಮೀರಳತೆ ಸಾಲ, ನೌಕರ ವರ್ಗಕ್ಕೆ ಸಂಬಳಾಧಾರಿತ ಸಾಲ, ಸ್ಥಿರಾಸ್ತಿ ಆಧಾರದ ಮೇಲೆ ಸಾಲ, ಸ್ವಸಹಾಯ ಸಂಘಗಳಿಗೆ (ಎಸ್.ಹೆಚ್.ಜಿ) ಸಾಲ ನೀಡುವ ಮೂಲಕ ಎಲ್ಲಾ ವರ್ಗದ ಸಹಕಾರಿ ಬಂಧುಗಳ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ನೆರವು ಕಲ್ಪಿಸಿದೆ. ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಚಿತ್ರದುರ್ಗ ಜಿಲ್ಲಾ ಮಟ್ಟದ ಬ್ಯಾಂಕಾಗಿದ್ದು, 14 ಶಾಖೆಗಳನ್ನು ಹೊಂದಿದ್ದು, ಚಿತ್ರದುರ್ಗದಲ್ಲಿ ಕೇಂದ್ರ ಕಛೇರಿ ಹೊಂದಿರುತ್ತದೆ.  ಕಳೆದ 67 ವರ್ಷಗಳಿಂದ ರೈತಬಾಂಧವರ ಅವಶ್ಯಕತೆಗೆ ಅನುಗುಣವಾಗಿ ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ ನೀಡುತ್ತಾ ಬಂದಿದ್ದು, ಸಾಲ ಹಂಚಿಕೆ, ವಸೂಲಾತಿ ಮತ್ತು ಠೇವಣಿ ಸಂಗ್ರಹಣೆ, ಸ್ವಸಹಾಯ ಗುಂಪುಗಳ ರಚನೆ ಹಾಗೂ ಸಾಲ ಜೋಡಣೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಾಧಿಸುತ್ತಾ ಬಂದಿದೆ.

ಕಳೆದ ಮಾರ್ಚ್ ಅಂತ್ಯದವರೆಗೆ ಬ್ಯಾಂಕಿನಲ್ಲಿ 415 ಸಹಕಾರ ಸಂಘಗಳು ಸದಸ್ಯತ್ವನ್ನು ಪಡೆದಿರುತ್ತಾರೆ. ಡಿ.ಸುಧಾಕರ್‍ರವರು 2004 ರಿಂದ ಬ್ಯಾಂಕಿನ ನಿರ್ದೇಶಕರಾಗಿ ಮತ್ತು 3 ಬಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ  ನಾಯಕತ್ವ  ಮತ್ತು  ಅಧ್ಯಕ್ಷತೆಯ ಮಾರ್ಗದರ್ಶನದಲ್ಲಿ ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಹಾಗೂ ಶಾಸಕರಾದ ಟಿ.ರಘುಮೂರ್ತಿ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಬೆಂಬಲ ಮತ್ತು ಸಹಕಾರದೊಂದಿಗೆ ಬ್ಯಾಂಕ್ ರೈತ ಸ್ನೇಹಿ ಮತ್ತು ಗ್ರಾಮೀಣಾಭಿವೃದ್ದಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದ್ದು ಬ್ಯಾಂಕ್ ಪ್ರತಿ ವರ್ಷ ಎಲ್ಲಾ ವ್ಯವಹಾರಗಳಲ್ಲಿ ಅಂದರೆ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಷೇರು ಸಂಗ್ರಹಣೆ, ಹೂಡಿಕೆಗಳು, ಸಾಲ ವಸೂಲಾತಿ, ಹೊಸ ರೈತರಿಗೆ ಸಾಲ ವಿತರಣೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ. ಠೇವಣಿ ರೂ.509.19 ಕೋಟಿ ಸಂಗ್ರಹಣೆಯಾಗಿರುತ್ತದೆ.

2023-24ನೇ ಸಾಲಿಗೆ  ಜಿಲ್ಲೆಯ 66000 ರೈತರಿಗೆ ರೂ.500 ಕೋಟಿ ಅಲ್ಪಾವಧಿ ಕೃಷಿ ಬೆಳೆ ಸಾಲ ವಿತರಿಸಲು ಹಾಗೂ 1140 ರೈತರಿಗೆ ರೂ.74.50 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ. 2022-23 ನೇ ಸಾಲಿನಲ್ಲಿ 500 ಸ್ವಸಹಾಯ ಸಂಘಗಳಿಗೆ ರೂ.10 ಕೋಟಿ ಸಾಲ ವಿತರಿಸಲು ಗುರಿ ಹಾಕಿಕೊಳ್ಳಲಾಗಿದೆ.

ಜಿಲ್ಲೆಯ 8 ಗ್ರಾಮಗಳಲ್ಲಿ 8 ಹೊಸ ಶಾಖೆಗಳನ್ನು ತೆರಯಲು ಆರ್.ಬಿ.ಐ ನಿಂದ ಅನುಮತಿ ಪಡೆಯಲಾಗಿದೆ. ರಾಮಗಿರಿ, ಹೊರಕೆದೇವಪುರ, ಮಾಡದಕೆರೆ, ಹೊಸದುರ್ಗ ರೋಡ್, ದರ್ಮಪುರ, ಐಮಂಗಲ, ತಳಕು ಮತ್ತು  ಸಾಸಲಹಳ್ಳಿಗಳಲ್ಲಿ ಬ್ಯಾಂಕಿನ ಹೊಸ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಂಡಿರುತ್ತದೆ.  2022-23ನೇ ಸಾಲಿಗೆ ಬ್ಯಾಂಕ್ ರೂ.7.28 ಕೋಟಿ ನಿವ್ವಳ ಲಾಭಗಳಿಸಿರುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಶಾಸಕರಾದ ರಘುಮೂರ್ತಿ, ನಿರ್ದೇಶಕರಾದ ಟಿ. ಮಹಾಂತೇಶ್, ಎಸ್.ಆರ್. ಗಿರೀಶ್, ನಿಶಾನಿ ಜಯಣ್ಣ, ರಘುರಾಂ ರೆಡ್ಡಿ, ಶಶಿಧರ್ ಹಾಗೂ ದ್ಯಾಮಣ್ಣ ಉಪಸ್ಥಿತರಿದ್ದರು.

suddionenews

Recent Posts

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

43 minutes ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

2 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

11 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

11 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

11 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

11 hours ago