Connect with us

Hi, what are you looking for?

ಪ್ರಮುಖ ಸುದ್ದಿ

ನಮ್ಮೂರು ನನ್ನ ಸಾಹಿತಿ ಮಾಲಿಕೆ : ಬೆಳಗೆರೆ ಸೀತಾರಾಮಶಾಸ್ತ್ರಿ (ಕ್ಷೀರ ಸಾಗರ)

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಬೆಳಗೆರೆ ಸೀತಾರಾಮಶಾಸ್ತ್ರಿ (ಕ್ಷೀರ ಸಾಗರ)

ಅವರು 1906 ರ ಏಪ್ರಿಲ್ 30 ರಂದು ಜನಿಸಿದರು. ತಾಯಿ ಅನ್ನಪೂರ್ಣಮ್ಮ, ತಂದೆ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು. ಬೆಳಗೆರೆ ವಂಶದಲ್ಲಿ ಹುಟ್ಟಿದ ಇವರ ಸಹೋದರ ಬೆಳಗೆರೆ ಕೃಷ್ಣಶಾಸ್ತ್ರಿ, ತಂಗಿಯರಾದ ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ ಎಲ್ಲರದೂ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ. ಇದು ತಂದೆಯಿಂದ ಬಂದ ಬಳುವಳಿ. ತಂದೆ ಚಂದ್ರಶೇಖರ ಶಾಸ್ತ್ರಿಗಳು ಜಾನಪದ ಗೀತೆ, ಲಾವಣಿಗಳ ಅದ್ವಿತೀಯ ಹಾಡುಗಾರರಾಗಿದ್ದರು.

ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗ, ಇಂಟರ್ ಮೀಡಿಯೇಟ್ ಓದಿದ್ದು ಮೈಸೂರಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ ಪದವಿ, ಕಲ್ಕತ್ತಾ ವಿಶ್ವ ವಿದ್ಯಾನಿಲಯದ ಎಂ.ಎ ಪದವಿಯನ್ನು ಪಡೆದರು.
ಕೈತುಂಬಾ ಸಂಬಳ ತರುವ ಹಲವಾರು ಹುದ್ದೆಗಳಿಗೆ ಆಹ್ವಾನ ಬಂದರೂ ಆರಿಸಿಕೊಂಡಿದ್ದು ಮಾತ್ರ ಅಧ್ಯಾಪಕ ವೃತ್ತಿ. ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಗಣಿತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ 1928 ರಲ್ಲಿ ಸೇರಿ 34 ವರ್ಷಗಳ ಸೇವೆಯ ನಂತರ 1962 ರಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು.

ಕ್ಷೀರಸಾಗರರ ನಾಟಕಗಳು ಕೃತಿಗೆ 1968ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ, ದೇವರಾಜ ಬಹದ್ದೂರ್ ದತ್ತಿ ನಿಧಿಯ ಬಹುಮಾನ ಪಡೆದಿದ್ದಾರೆ.
ಬಿ.ಸೀತಾರಾಮ ಶಾಸ್ತ್ರಿಗಳು ಕ್ಷೀರಸಾಗರ ಎಂಬ ಕಾವ್ಯನಾಮದಿಂದ ಬಹುಸಂಖ್ಯೆಯಲ್ಲಿ ನಾಟಕಗಳನ್ನು ರಚಿಸಿ ನಾಟಕಕಾರರೆಂದೇ ಖ್ಯಾತರಾಗಿದ್ದಾರೆ.

ಈ ನಾಟಕಗಳು ಆ ಶತಮಾನದ ಪೂರ್ವಾರ್ಧದಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದಲೂ, ಅಧ್ಯಾಪಕರುಗಳಿಂದಲೂ ಅಭಿನಯಿಸಲ್ಪಡುತ್ತಿದ್ದವು. ಕ್ಷೀರಸಾಗರ ನಾಟಕಗಳು ಎಂಬ ಹೆಸರಿನಿಂದ ಎರಡು ಭಾಗಗಳಲ್ಲಿ ಪ್ರಕಟವಾಗಿವೆ. ಋಷಿಮೋಹಿನಿ, ನಿಶ್ಚಿತಾರ್ಥ, ಕಾಶಿಯಾತ್ರೆ, ಲಕ್ಕೀ ಲಕ್ಷ್ಮಣನ್, ದೀಪಾವಳಿ, ನಿತ್ಯನಾಟಕದ ಮೊದಲ ಸಂಪುಟ, ಎರಡನೇ ಸಂಪುಟದಲ್ಲಿ ಕಲಹ ಕುತೂಹಲ, ಅರ್ಧನಾರಿ, ಪಾಟೀಪಾದ, ಅರ್ಧಾಂಗಿ, ರುಪಾಯಿಗಿಡ, ಪರಪಾಟು, ಚೋರ, ಚಪ್ಪಾಳೆ ವೈದ್ಯ, ನಮ್ಮೂರಿನ ಪಶ್ಚಿಮಕ್ಕೆ, ಬೆಸ್ಟ್ ಆಫ್ ತ್ರೀ (ಗಣಿತಶಾಸ್ತ್ರದ ನಾಟಕಗಳು) ಪ್ರಕಟಿತ. ಶಾಮಣ್ಣನ ಸಾಹಸ, ಲಾಯರ್ ಪ್ರಯಾಣ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಋಷಿಮೋಹಿನಿ ನಾಟಕವು 1967 ರಲ್ಲಿ ಎಸ್.ಎಸ್.ಎಲ್.ಸಿ ತರಗತಿಯ ಐಚ್ಛಿಕ ವಿಷಯವಾಗಿ ಆಯ್ಕೆ. ಬೆಸ್ಟ್ ಆಫ್ ತ್ರೀ ನಾಟಕವು ಬಾಂಬೆ ವಿಶ್ವವಿದ್ಯಾಲಯದ 1970-72 ನೇ ಸಾಲಿನ ಇಂಟರ್ ಮೀಡಿಯೇಟ್ ತರಗತಿಯ ಪಠ್ಯಪುಸ್ತಕ. ಒಡೆದಕನ್ನಡಿ (ಕಾದಂಬರಿ), ವೀಳ್ಯ (ಕಥಾ ಸಂಕಲನ), ನಗರದ ಶ್ರೀರಂಗ ಕೊನೆ ದಿವಸ, ನೆಪೋಲಿಯನ್ ಬೋನಪಾರ್ಟೆ (ಜೀವನಚರಿತ್ರೆ) ಈ ಪುಸ್ತಕವು 1941ರಲ್ಲಿ ಇಂಟರ್ ಮೀಡಿಯೇಟ್ ತರಗತಿಯ ಪಠ್ಯಪುಸ್ತಕವಾಗಿತ್ತು. ರಾಧೆ (ಕವಿತಾ ಸಂಕಲನ) ಹೀಗೆ ಇತರ ಪ್ರಕಾರಗಳಲ್ಲಿಯೂ ಸಾಹಿತ್ಯಕೃಷಿ ಮಾಡಿದ್ದಾರೆ.

ಹಲವಾರು ದತ್ತಿ ನಿಧಿ ಸ್ಥಾಪಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ಶ್ರೇಣಿಯ ಪದವಿ ಪಡೆದವರಿಗೆ ಪ್ರಶಸ್ತಿ, ಮೈಸೂರು ವಿ.ವಿ.ದಲ್ಲಿ ಭಾಷಾಶಾಸ್ತ್ರದಲ್ಲಿ, ಎಂ.ಎ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದವರಿಗೆ ಕ್ಷೀರಸಾಗರ ಪ್ರಶಸ್ತಿ, ಬೆಳಗೆರೆಯಲ್ಲಿ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಶಾರದಾ ಮಂದಿರ ಕಟ್ಟಡ ನಿರ್ಮಾಣ. ಬೆಳಗೆರೆಯಲ್ಲಿ ಇವರ ಹೆಸರಿನಲ್ಲಿ ಹೈಸ್ಕೂಲು. ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ. ಸೀತಾರಾಮಶಾಸ್ತ್ರಿಯವರ ಹೆಸರಿನ ಚಳ್ಳಕೆರೆ ಕಾಲೇಜಿನಲ್ಲಿ ಪರ್ಯಾಯ ಪಾರಿತೋಷಕ ಮುಂತಾದವು. ಕೆಲವರು ಪ್ರಶಸ್ತಿಗಳಿಗಾಗಿ ಹಪಹಪಿಸಿದರೆ ಇವರು ಇತರರಿಗೆ ಪ್ರಶಸ್ತಿ ಕೊಡುವುದರಲ್ಲಿ ಸಂತಸದಿಂದ ದಾನಿಗಳಾಗಿ ತೋರಿದ ಔದಾರ್ಯವಾಗಿದೆ.

ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಶಾಸ್ತ್ರಿಗಳು ಅಂತರಾಂಶ, ಕಲನವಿನ್ಯಾಸ (1963), ಸಂಖ್ಯೋದ್ಯಾನ ಮುಂತಾದ ಗಣಿತಶಾಸ್ತ್ರದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ನಾಟಕ ನಿರ್ದೇಶನ ಅವರ ಹವ್ಯಾಸಗಳಲ್ಲಿ ಸೇರಿತ್ತು. 1977ರ ಫೆಬ್ರವರಿ 21 ರಂದು ಬೆಂಗಳೂರಿನಲ್ಲಿ ಮೃತರಾದರು.

ಲೇಖನ: ಕೆ.ಪಿ.ಎಮ್.ಗಣೇಶಯ್ಯ, ರಂಗನಿರ್ದೇಶಕರು, ಚಿತ್ರದುರ್ಗ

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಮೋದಿ ನೇತೃತ್ವದ ಅಧಿಕಾರದಲ್ಲಿ ಬಡವರು, ದೀನ ದಲಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್‍ನಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಅಗತ್ಯ ವಸ್ತುಗಳ ಬೆಲೆ ಏರಿಸಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಪೆಟ್ರೋಲಿಯಂ ಪ್ರಾಡಕ್ಟ್‌ಗಳನ್ನು ವ್ಯಾಟ್ ಅಡಿಗೆ ತಂದು ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದ...

error: Content is protected !!