ವೈರಲ್ ಆದ ಕೊರೊನಾ ಸರ್ಟಿಫಿಕೇಟ್ ಗಳಲ್ಲಿ ದೊಡ್ಡ ದೊಡ್ಡವರ ಹೆಸರು : ಮುಖ್ಯ ವೈದ್ಯಾಧಿಕಾರಿಯಿಂದ ತನಿಖೆಗೆ ಆದೇಶ..!

ಉತ್ತರ ಪ್ರದೇಶ: ಸೋಷಿಯಲ್ ಮೀಡಿಯಾದಲ್ಲಿ ಕೋವಿಡ್ ಸರ್ಟಿಫಿಕೇಟ್ ಗಳು ವೈರಲ್ ಆಗುತ್ತಿವೆ. ಅದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಓಂ ಬಿರ್ಲಾ, ನಿತಿನ್ ಗಡ್ಕರಿ ಸೇರಿದಂತೆ ಹಲವರ ಹೆಸರಿನಲ್ಲಿ. ಆದ್ರೆ ಇವು ನಕಲಿ ಸರ್ಟಿಫಿಕೇಟ್ ಅನ್ನೋದು ಕನ್ಫರ್ಮ್ ಆಗಿದೆ. ಯಾಕಂದ್ರೆ ಅದರಲ್ಲಿ ಅಮಿತ್ ಶಾ ವಯಸ್ಸು 33, ಓಂ ಬಿರ್ಲಾ ವಯಸ್ಸು 26 ಅಂತೆಲ್ಲಾ ಇದೆ.

ಈ ಸರ್ಟಿಫಿಕೇಟ್ ಗಳು ವೈರಲ್ ಆಗುತ್ತಿದ್ದಂತೆ ಏನೋ ಪಿತೂರಿ ನಡೆಯುತ್ತಿದೆ ಅನ್ನೋದು ಅಧಿಕಾರಿಗಳಿಗೆ ತಿಳಿದು ಬಂದಿದೆ. ಇಟವಾ ಜಿಲ್ಲೆಯ ತಖಾ ತಹಸಿಲ್ ನಲ್ಲಿರುವ ಆರೀಗ್ಯ ಕೇಂದ್ರದ ಅಧಿಕಾರಿಗಳು ಕೂಡ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾವೂ ಈ ಥರದ ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ ಎಂದು. ಹೀಗಾಗಿ ತನಿಖೆಗೆ ಒತ್ತಾಯಿಸಲಾಗಿದೆ.

ಇವರೆಲ್ಲ ಡಿಸೆಂಬರ್​ 12ರಂದು ಇಟಾವಾದ ಆರೋಗ್ಯ ಕೇಂದ್ರದಲ್ಲಿ ಮೊದಲ ಡೋಸ್ ಕೊವಿಡ್ 19 ಲಸಿಕೆ ಪಡೆದಿದ್ದಾರೆ. 2022ರ ಮಾರ್ಚ್​ 15ರಿಂದ ಏಪ್ರಿಲ್​ 3ರೊಳಗೆ ಎರಡನೇ ಡೋಸ್ ತೆಗೆದುಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ. ನಮ್ಮ ಐಡಿಯನ್ನು ಹ್ಯಾಕ್ ಮಾಡಿ ಈ ರೀತಿ ಮಾಡಿದ್ದಾರೆ. ಆ ಐಡಿಗಳನ್ನ ಬ್ಲಾಕ್ ಮಾಡೋದಕ್ಕೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *