in

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಿರುದ್ಯೋಗಿಯಾಗ್ತಾರೆ : ಇದ್ದಕ್ಕಿದ್ದ ಹಾಗೇ ನಳೀನ್ ಕುಮಾರ್ ಕಟೀಲು ನುಡಿದ ಭವಿಷ್ಯದ ಅರ್ಥವೇನು..?

suddione whatsapp group join

ದಕ್ಷಿಣ ಕನ್ನಡ: ಮುಂದಿನ ಎರಡು ದಶಕಗಳ ಕಾಲ ದೇಶದಲ್ಲಿ ಬಿಜೆಪಿ ಮಾತ್ರ ಅಧಿಕಾರದಲ್ಲಿರುತ್ತೆ. ಇನ್ನು ಇಪ್ಪತ್ತು ವರ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಂಪೂರ್ಣವಾಗಿ ನಿರುದ್ಯೋಗಿಗಳಾಗ್ತಾರೆ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಅಧಿವೇಶನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಎತ್ತಿನಗಾಡಿಯಲ್ಲಿ ಬಂದಿದ್ದನ್ನು ವ್ಯಂಗ್ಯ ಮಾಡಿದ್ದು, ನಾವೂ ಅಧಿಕಾರದಲ್ಲಿದ್ದಿದ್ರಿಂದ ಎತ್ತುಗಳಾದ್ರು ಸಿಕ್ಕಿವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ರೆ ಎತ್ತುಗಳೆಲ್ಲಾ ಕಸಾಯಿಖಾನೆಯಲ್ಲಿರುತ್ತಿದ್ದವು ಎಂದಿದ್ದಾರೆ. ಎತ್ತಿನಗಾಡಿಯಲ್ಲಿ ಎತ್ತು ಹಿಡ್ಕೊಂಡಿದ್ದು ಸಿದ್ರಾಮಣ್ಣ, ಚಾಟಿ ಹಿಡ್ಕೊಂಡಿದ್ದು ಡಿಕೆಶಿ. ಡಿಕೆ ಶಿವಕುಮಾರ್ ಕೈನಲ್ಲಿ ಚಾಟಿ ಮಾತ್ರವಿದೆ. ಆದ್ರೆ ಸಿದ್ದರಾಮಯ್ಯ ಕೈನಲ್ಲಿ ಕಾಂಗ್ರೆಸ್ ಇದೆ ಎಂದು ವ್ಯಂಗ್ಯವಾಡಿದ್ದಾರೆ.

ಮುಂದೆಯೂ ಬಿಜೆಪಿ ಪಕ್ಷವೇ ಅಧಿಕಾರದಲ್ಲಿರುತ್ತೆ. ಹೀಗಾಗಿ ಅವರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ ಅಂತ ಉಳ್ಳಾಲದ ಮಂಜನಾಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ತಿರುಪತಿಯಲ್ಲಿ ಇನ್ಮುಂದೆ ಲಡ್ಡು ಜೊತೆಗೆ ಘಮಘಮಿಸೋ ಅಗರಬತ್ತಿಯೂ ಸಿಗುತ್ತೆ

ಜನರ ಭಾವನೆ ಕೆಡವಿದ್ದಾಯ್ತು..ಈಗ ದೇವಸ್ಥಾನ ಕೆಡವುತ್ತಿದ್ದಾರೆ : ಖಾದರ್ ಕಿಡಿ..!