ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳಗೇನು ಕಮ್ಮಿ ಇಲ್ಲ. ಅದೇ ರೀತಿ ಇದೀಗ ಮತ್ತೊಮ್ಮೆ ನೈಜ ಘಟನೆ ಆಧಾರಿತ ಪ್ರಯೋಗಾತ್ಮಕ ಸಿನಿಮಾವೊಂದು ತೆರೆಕಾಣಲು ಸಜ್ಜಾಗುತ್ತಿದೆ. ಸ್ಯಾಂಡಲ್ವುಡ್ ಕ್ರಿಯಾತ್ಮಕ ನಿರ್ದೇಶಕ ನೀನಾಸಂ ಮಂಜು ಮೂಕಹಕ್ಕಿ ನಂತರ ಕೈಗೆತ್ತಿಕೊಂಡಿರುವ ಚಿತ್ರ ‘ಕನ್ನೇರಿ’. ಇದೊಂದು ಮಹಿಳಾ ಪ್ರಧಾನ ಸಿನಿಮಾ ವಾಗಿದ್ದು , ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಜೊತೆಗೆ ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ.
![](https://suddione.com/content/uploads/2024/10/gifmaker_me-5-1.gif)
ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಸಿರುವ ‘ಕನ್ನೇರಿ’ ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರದ ಪ್ರಚಾರ ಆರಂಭಿಸಿದೆ. ಒಂದೊಳ್ಳೆ ಸಿನಿಮಾ ಮಾಡಲು ಹೊರಟಿರುವ ನೀನಾಸಂ ಮಂಜು ಅವರ ತಂಡದ ಜೊತೆ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೈಜೋಡಿಸಿದ್ದು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಇದೊಂದು ಬುಡಕಟ್ಟು ಜನಾಂಗದ ಜನರ ಹೋರಾಟದ ಕಥೆಯಾಗಿರುವುದರಿಂದ ಚಿತ್ರದಲ್ಲಿ ಬುಡಕಟ್ಟು ಜನಾಂಗದವರನ್ನು ಅನೇಕ ಪಾತ್ರದಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿ ಅರ್ಚನ ಮಧುಸೂದನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅರುಣ್ ಸಾಗರ್, ಅನಿತಾ ಭಟ್, ಕರಿಸುಬ್ಬು, ಎಂ.ಕೆ ಮಠ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
![](https://suddione.com/content/uploads/2025/01/shivasagar.webp)
ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಚಿತ್ರಕ್ಕೆ ಕೋಟಿಗಾನಹಳ್ಳಿ ರಾಮಯ್ಯ ಕಥೆ ಬರೆದಿದ್ದಾರೆ. ಗಣೇಶ್ ಹೆಗ್ಡೆ ಕ್ಯಾಮರಾ ಕಣ್ಣಲ್ಲಿ ಇಡೀ ಚಿತ್ರ ಸರೆಯಾಗಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನವಿದೆ. ಸದ್ಯ ಕನ್ನೇರಿ ಚಿತ್ರದ ಫಸ್ಟ್ ಲುಕ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಿನಿಪ್ರಿಯ ರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
![](https://suddione.com/content/uploads/2025/01/studio-11-2.webp)