ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26 : ಸಾಮಾಜಿಕ ನ್ಯಾಯಕ್ಕಾಗಿ ಸದಾ ಹೋರಾಟ ನಡೆಸುತ್ತಿರುವ ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿಯ ನಾಗರಾಜ್ ಟಿ. ಇವರಿಗೆ ಸಮಾಜ ಸೇವಾ ರತ್ನ ಮತ್ತು ಬಡವರ ಆಶಾಕಿರಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ಫಿಲಂ ಚೇಂಬರ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ನಾಗರಾಜ್ ಟಿ.ಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಎಂ.ಎಸ್.ರವೀಂದ್ರ ಕಾರ್ಮಿಕರ ಸಂರಕ್ಷಣಾ ವೇದಿಕೆ ಹಾಗೂ ನಿಸರ್ಗ ಚಾರಿಟಬಲ್ ಟ್ರಸ್ಟ್ ಮುಖಾಂತರ ಕಾರ್ಮಿಕರು, ದಲಿತರು, ರೈತರು, ಶೋಷಿತರ ಪರ ಹೋರಾಟದಲ್ಲಿ ತೊಡಗಿಕೊಂಡಿರುವ ನಾಗರಾಜ್ ಟಿ. ಉಚಿತ ಆರೋಗ್ಯ ತಪಾಸಣೆ, ಅನ್ನಸಂತರ್ಪಣೆ ಹಾಗೂ ವಿಕಲಚೇತನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದಕ್ಕೆ ಪ್ರಶಸ್ತಿ ಸಂದಿದೆ ಎಂದು ಗುಣಗಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಗರಾಜ್ ಟಿ. ನನ್ನ ಹೋರಾಟಕ್ಕೆ ಇನ್ನು ಹೆಚ್ಚಿನ ಬಲ ಬಂದಂತಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸಿದ್ದಗಂಗಾಮಠದ ಡಾ.ಶಿವಕುಮಾರ ಮಹಾಸ್ವಾಮಿಗಳೆ ನನ್ನ ಹೋರಾಟಕ್ಕೆ ಪ್ರೇರಣೆ ಎಂದು ಹೇಳಿದರು.
ಹಿರಿಯ ನಟ ಮೈಕೋ ನಾಗರಾಜ್, ಲೋಕಾಯುಕ್ತ ಡಿ.ವೈ.ಎಸ್ಪಿ. ರಾಜೇಶ್, ನಟಿ ಮಹಾಲಕ್ಷ್ಮಿ, ಭಾವನ, ನಾಗೇಂದ್ರಸ್ವಾಮಿ, ರಂಗಭೂಮಿ ಕಲಾವಿದರು ವೇದಿಕೆಯಲ್ಲಿದ್ದರು.
ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ ಇದೆ.…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಬ್ಯಾಂಕ್ ಕಾಲೋನಿ ವಾಸಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೈತ್ತ ಶಿಕ್ಷಕ…
ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ…
ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು, ಭಾನುವಾರದ ರಾಶಿ ಭವಿಷ್ಯ…
ಬೆಂಗಳೂರು; ಒಂದನೇ ತರಗತಿಗೆ ಸೇರಿಸ ಬಯಸುವ ಮಕ್ಕಳನ್ನು ಶಾಲೆಗೆ ಸೇರಿಸುವ ಗೊಂದಲ ಸಾಕಷ್ಟು ಇದೆ. ಆರು ವರ್ಷ ಆಗಿರಲೇಬೇಕು ಎಂಬ…
ಬೆಂಗಳೂರು; ಶಾಸಕ ಬಸನಗೌಡ ಪಾಟೀಲ್ ಅವರು ಫೈಯರ್ ಬ್ರಾಂಡ್ ಅಂತಾನೇ ಹೆಸರು ಪಡೆದಿರುವವರು. ಬಿಜೆಪಿಯಲ್ಲಿಯೇ ಇದ್ದುಕೊಂಡು ಬಿಜೆಪಿ ನಾಯಕರ ವಿರುದ್ಧವೇ…