Connect with us

Hi, what are you looking for?

ಪ್ರಮುಖ ಸುದ್ದಿ

ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ರಾಜೀನಾಮೆಗೆ ಕೌಂಟ್ ಡೌನ್ ?

ಬೆಂಗಳೂರು : ಆಪರೇಷನ್ ಕಮಲಕ್ಕೆ ಶತಾಯಗತಾಯ ಶ್ರಮಿಸಿದ ಬಳಗದ ಮತ್ತೊಂದು ವಿಕೆಟ್‌ ಪತನಕ್ಕೆ ಕೌಂಟ್ ಡೌನ್ ಶುರುವಾಗಿದೆ.

ಸಚಿವ ಸಂಪುಟದ ವಿಸ್ತರಣೆ ಕಸರತ್ತಿನ‌ ನಡುವೆಯೇ ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಲೆಕ್ಕಾಚಾರ ಹಾಕಿದೆ. ಈ ಗೊಂದಲದಲ್ಲೇ ಘಟಾಘಟಿಗಳು ಸಿಎಂ ಕಚೇರಿಯಿಂದ ಗೇಟ್ ಪಾಸ್ ಪಡೆದುಕೊಳ್ಳುತ್ತಿದ್ದಾರೆ.

ಮಾಜಿ ಪತ್ರಕರ್ತರಾದ ಎಂ.ಬಿ.ಮರಮಕಲ್, ಮಹದೇವ ಪ್ರಕಾಶ್, ವಾರ್ತಾ ಇಲಾಖೆಯ ಮೂಲಕ ಸಿಎಂ ಸಾಮಾಜಿಕ ಜಾಲ ತಾಣ ನಿರ್ವಹಣೆ ಮಾಡುತ್ತಿದ್ದ ಜಿ ಎನ್ ಮೋಹನ್ ಸಿಎಂ ಕಚೇರಿಯಿಂದ ಹೊರ ನಡೆದಿದ್ದಾರೆ. ಈಗ ಇದೇ ಹಾದಿಯಲ್ಲಿದ್ದಾರೆ ಆಪರೇಷನ್ ಕಮಲ ಸೂತ್ರಧಾರಿ ಮತ್ತು ದಶಕಗಳ ಕಾಲ ಯಡಿಯೂರಪ್ಪನವರ ಮಾನಸಪುತ್ರನೆಂದೇ ಗುರುತಿಸಿಕೊಂಡಿದ್ದ ಎನ್.ಆರ್.ಸಂತೋಷ್.

ಆಪರೇಷನ್ ಕಮಲದ ವೇಳೆ ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದೊಯ್ದು ಅವರನ್ನು ತಿಂಗಳುಗಟ್ಟಲೆ ಅಲ್ಲಿ ಇಟ್ಟು ನಿರ್ವಹಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು. ಈ ಕಾರಣಕ್ಕೆ ತೀವ್ರ ವಿರೋಧದ ನಡುವೆಯೂ ಸಿಎಂ ಬಿಎಸ್ ವೈ ಸಂತೋಷ್ ಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದರು.

ಬಿಎಸ್ ವೈ ಸಿಎಂ ಆಗಲು ಹಗಲಿರುಳು ಶ್ರಮಿಸಿದರೇ ಈಗ ಹೊರ ನಡೆಯುತ್ತಿದ್ದಾರೆಯೇ ಅಥವಾ ಖುದ್ದು ಸಿಎಂ ಮುಂದೆ ನಿಂತು ಇವರನ್ನು ಹೊರ ಕಳುಹಿಸುತ್ತಿದ್ದಾರೆಯೇ ಎಂಬುದೇ ಪ್ರಶ್ನೆ ಯಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಖಂಡಿತ ನನಗೆ ಸಚಿವನಾಗಬೇಕೆಂಬ ಭ್ರಮೆ ಇಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ ಮಾಜಿ ಸಚಿವ, ಬಿಎಸ್‍ವೈ ಆಪ್ತ ಶಾಸಕ ಎಸ್.ಎ.ರಾಮದಾಸ್ ಜಾಮೀನು ಸಿಕ್ಕರೂ ನಟಿ ರಾಗಿಣಿಗೆ ಸಿಗುತ್ತಿಲ್ಲ ಬಿಡುಗಡೆ ಭಾಗ್ಯ: ಶ್ಯೂರಿಟಿ ಕೊಡಲು ಮುಂದೆ...

ಪ್ರಮುಖ ಸುದ್ದಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಹೊಸ ವರ್ಷಕ್ಕೆ ಪಕ್ಷ ಘೋಷಿಸುವುದಾಗಿಯೂ ತಿಳಿಸಿದ್ದರು. ಆದರೆ ಇದೀಗ ಅವ್ರು ರಾಜಕೀಯದಿಂದ ಹಿಂದೆ ಸರಿದು ಮಹತ್ವದ ಘೋಷಣೆ ಮಾಡಿದ್ದಾರೆ....

ಪ್ರಮುಖ ಸುದ್ದಿ

ಬೆಂಗಳೂರು: ಕೇಂದ್ರದ ಪ್ರಭಾವಿ ರಾಜಕಾರಣಿಗಳ ಜತೆ ತೆಗೆಸಿಕೊಂಡಿರುವ ಪೋಟೋ ತೋರಿಸಿ ಜನರಿಗೆ ಟೋಪಿ ಹಾಕುತ್ತಿದ್ದ ಕಿಲಾಡಿ ರಾಜ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಟ...

ಪ್ರಮುಖ ಸುದ್ದಿ

ದಾವಣಗೆರೆ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 7(2)ರಂತೆ ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ...

ಪ್ರಮುಖ ಸುದ್ದಿ

ಚೆನ್ನೈ :ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯ ಎಂಟ್ರಿಗೆ ದಿನಗಣನೆ ಶುರುವಾಗಿದೆ. ತಮ್ಮ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದೇನೆ. ಈ ಕುರಿತು ಡಿಸೆಂಬರ್ 31ರಂದು ಪ್ರಮುಖ ಘೋಷಣೆ ಮಾಡಲಿದ್ದೇನೆ ಎಂದು ಟ್ವೀಟ್...

ಪ್ರಮುಖ ಸುದ್ದಿ

ದಾವಣಗೆರೆ :ಅಮೆರಿಕದಂತೆ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ವಿಪ್ಲವ (ಕ್ರಾಂತಿ, ಆಂದೋಲನ) ಆಗಲಿದೆ ಎಂದು ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸೋಮವಾರ ಮಾತನಾಡಿ, ಕೆಲ ದಿನಗಳ ಹಿಂದೆ...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸ್ಪಷ್ಟವಾಗಿ ರಾಜಕೀಯ ಉದ್ಧೇಶದಿಂದ ಕೂಡಿದೆ ಎಂದು ಹಿರಿಯ ವಿದ್ವಾಂಸ ಪ್ರೊ ಕೆ ಮರುಳಸಿದ್ಧಪ್ಪ ಅವರು...

ಪ್ರಮುಖ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿಗೆ ಮಾಧ್ಯಮ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಹದೇವ ಪ್ರಕಾಶ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ನಂತ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾಗಿ ಹಿರಿಯ...

ಪ್ರಮುಖ ಸುದ್ದಿ

ಪಾಟ್ನಾ :: ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿರುವ ಕಾರಣ ಅಲ್ಲಿನ ಹಿರಿಯ ಮುಖಂಡರು ರಾಜೀನಾಮೆಗೆ ಮುಂದಾಗಿದ್ದಾರೆ. ಬಿಹಾರ ಎಐಸಿಸಿ ಉಸ್ತುವಾರಿ ಶಕ್ತಿಸಿನ್ಹಾ ಗೊಹಿಲ್ ಮತ್ತಿತರ ಮುಖಂಡರು ತಮ್ಮ...

error: Content is protected !!