ಮೈಸೂರು : ಭಾನುವಾರ ತಡರಾತ್ರಿ ಮೈಸೂರಿನಲ್ಲಿ ಜೋಡಿ ಕೊಲೆಯಾಗಿದ್ದು, ನಾಗರೀಕರು ಬೆಚ್ಚಿದ್ದಾರೆ.
ಕೊಲೆಯದವರನ್ನು ಗೌರಿ ಶಂಕರನಗರ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಎಂದು ಗುರುತಿಸಲಾಗಿದೆ. ಎಲೆ ತೋಟದ ಬಳಿ ನಿನ್ನೆ ರಾತ್ರಿ ಚಾಮುಂಡಿ ಬೆಟ್ಟದ ಪಾದದ ಬಳಿಯ ಜಾಗದ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ನೇಹಿತರೆಲ್ಲ ಮಾಂಸದೂಟ ಮಾಡಿದ ಬಳಿಕ ಶುರುವಾದ ಮಾತುಕತೆ ಜಗಳಕ್ಕೆ ತಿರುಗಿದೆ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೆಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ.


