Connect with us

Hi, what are you looking for?

ಪ್ರಮುಖ ಸುದ್ದಿ

ಒತ್ತಡ ನಿವಾರಣೆಗೆ ಸಂಗೀತ ಮದ್ದು; ಡಿ.ಓ.ಮುರಾರ್ಜಿ

ಮೊಳಕಾಲ್ಮೂರು : ಸಂಗೀತವು ಮನುಷ್ಯನಲ್ಲಿನ ಒತ್ತಡವನ್ನು ನಿವಾರಣೆ ಮಾಡುವ ಜತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಓ.ಮುರಾರ್ಜಿ ತಿಳಿಸಿದರು.

ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ಅಕ್ಷರ ಸಾಂಸ್ಕೃತಿಕ ವಿಕಾಸ ಸಂಸ್ಥೆ, ಮೊಳಕಾಲ್ಮೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಒತ್ತಡದ ಜೀವನದಲ್ಲಿ ಬದುಕುತ್ತಿದ್ದೇವೆ ಒತ್ತಡ ಮುಕ್ತ ಜೀವನಕ್ಕಾಗಿ ಸಾಹಿತ್ಯ ಸಂಗೀತ ನೃತ್ಯದಂತಹ ಅಭಿರುಚಿ ಹೊಂದಿದ್ದರೆ ಎಂತಹ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬಹುದು ಎಂದರು.

ಉಪನ್ಯಾಸಕ ಡಾ.ತಿಮ್ಮಣ್ಣ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕøತಿ ಉಳಿವಿಗೆ ಪ್ರತಿಯೊಬ್ಬರೂ ಕೆಲಸ ಮಾಡಬೇಕಿದೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಂಗೀತ ಸಂಭ್ರಮದ ಮೂಲಕ ಕಾರ್ಯೋನ್ಮುಖವಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.

ಪಿಡಿಒ ದೇವೇಂದ್ರಪ್ಪ ಮಾತನಾಡಿ, ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆ ಅಳಿವಿನಂಚಿಗೆ ಸಾಗುತ್ತಿದೆ ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗಿ ಮಾತೃಭಾಷೆಯನ್ನು ಮರೆಯಬಾರದು ಎಂದರು.

ಕಲಾವಿದರಾದ ಕೆ.ಓ.ಶಿವಣ್ಣ ತುಮಕೂರ್ಲಹಳ್ಳಿ, ಕೋನಸಾಗರ ಶಿವು, ಭಟ್ರಹಳ್ಳಿ ಧನಂಜಯ, ಎಂ.ನುಂಕೇಶ್, ರಾಜು ದೇವಸಮುದ್ರ ಸಂಗೀತ ಸಂಭ್ರಮ ನಡೆಸಿಕೊಟ್ಟರು.

ಗ್ರಾ.ಪಂ ಸದಸ್ಯರಾದ ಆಟೋ ತಿಪ್ಪೇಸ್ವಾಮಿ, ನಿಂಗಪ್ಪ, ಕುಬೇರಪ್ಪ, ಶಿಕ್ಷಕರಾದ ಈಶ್ವರಪ್ಪ, ತಿಪ್ಪೇಸ್ವಾಮಿ, ಬಿಜಿಕೆರೆ ಮಂಜಣ್ಣ ಮುಖಂಡರಾದ ಮೊಗಲಹಳ್ಳಿ ತಿಪ್ಪೇಸ್ವಾಮಿ, ಕೊಂಡ್ಲಹಳ್ಳಿ ಮಲ್ಲೇಶ್, ಪುರುಷೋತ್ತಮ, ಅರುಣ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಸುದ್ದಿಒನ್,ಬಳ್ಳಾರಿ, (ಜೂ.15) : ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‍ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ನಿಂದ 339 ಜನ ಗುಣಮುಖರಾಗಿದ್ದು ದಿನದಿಂದ ದಿನಕ್ಕೆ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ....

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದವರಿಗೆ ಎಷ್ಟು ಮೊತ್ತ ಸಿಗಬಹುದು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಯಾವಾಗಲೂ ಕಾಡುವಂತ ಪ್ರಶ್ನೆ. ಆ ಪ್ರಶ್ನೆಗೆ ಇಂದು ಐಸಿಸಿ ಉತ್ತರಿಸಿದೆ. ಟೆಸ್ಟ್ ಚಾಂಪಿಯನ್ ಶಿಪ್...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಮೋದಿ ನೇತೃತ್ವದ ಅಧಿಕಾರದಲ್ಲಿ ಬಡವರು, ದೀನ ದಲಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

error: Content is protected !!