ಚಿತ್ರದುರ್ಗ: ನಿಧಿ ಆಸೆ ಎಂಬುದು ಜನರಲ್ಲಿ ಇನ್ನು ಹೋಗಿಲ್ಲ. ಹೂತಿಟ್ಟಿರುವ ನಿಧಿ ಸಿಕ್ಕರೆ ಶ್ರೀಮಂತರಾಗಿ ಬಿಡಬಹುದು ಎಂಬ ಬಯಕೆ. ನಿಧಿ ಕೈ ಸೇರಬೇಕು ಅಂದ್ರೆ ಅದಕ್ಕೆ ಶಾಂತಿಯಾಗಬೆರಕು. ಆ ಶಾಂತಿಗಾಗಿ ಮನುಷಗಯನನ್ನೇ ಬಲಿಕೊಡಬೇಕೆಂದುಕೊಂಡು ಬಿಟ್ಟಿದ್ದಾರೆ. ಈಗ ಅಂಥದ್ದೇ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಕೊಲೆ ಮಾಡುವುದಕ್ಕೆ ಪ್ರಚೋದನೆ ಕೊಟ್ಟದ್ದು, ಆಂಧ್ರದ ಕಲ್ಯಾಣದುರ್ಗ ತಾಲೂಕಿನ ಕುಂದರ್ಪಿ ಗ್ರಾಮದ ಆನಂದರೆಡ್ಡಿ. ನಿಧಿಯ ಆಸೆಗೆ ಆತನ ಮಾತು ಕೇಳಿದ್ದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೋಟೆಗುಡ್ಡದ ರಾಮಕೃಷ್ಣ. ಈ ಇಬ್ಬರ ದುರಾಸೆಗೆ ಪ್ರಾಣ ಕಳೆದುಕೊಂಡಿದ್ದು ಮಾತ್ರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೆಜೆ ಕಾಲೋನಿಯ ನಿವಾಸಿ ಪ್ರಭಾಕರ್.
ಮೃತ ಪ್ರಭಾಕರ್ ಪಾಪ ಪರಶುರಾಮಪುರದಲ್ಲಿ ಪಶ್ಚಿಮ ದಿಕ್ಕಿನಿಂದ ಬರುತ್ತಿದ್ದರು. ಅದನ್ನು ಗಮನಿಸಿದ್ದ ರಾಮಕೃಷ್ಣ, ತಮ್ಮ ಪರಮ ಗುರುಗಳು, ಆನಂದ ರೆಡ್ಡಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾನೆ. ಪಶ್ಚಿಮ ದಿಕ್ಕಿನಲ್ಲಿ ಬರುತ್ತಿರುವ ವ್ಯಕ್ತಿಯನ್ನ ಬಲಿ ಪಡೆದು, ಆ ರಕ್ತವನ್ನು ಮಾರಮ್ಮನಿಗೆ ಹಚ್ಚಿದರೆ ನಿಧಿ ಸಿಗುತ್ತೆ ಎಂಬುದು. ಹೀಗಾಗಿ ಪ್ರಭಾಕರನನ್ನು ಡ್ರಾಪ್ ಕೊಡುವ ನೆಪದಲ್ಲಿ ಕೂರಿಸಿಕೊಂಡು, ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದು ಎರಡು ದಿನವಾದ ಮೇಲೆ ಬೆಳಕಿಗೆ ಬಂದಿದೆ. ವಿಷಯ ಗೊತ್ತಾಗುತ್ತಿದ್ದಂತೆ SP ರಂಜಿತ ಕುಮಾರ್ ಹಾಗೂ ASP ಕುಮಾರಸ್ವಾಮಿ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನರಬಲಿಯಾಗಿ ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪರುಶುರಾಂಪುರ PI ಹನುಂತಪ್ಪ, PSI ಮಾರುತಿ ಅವರು ಆರೋಪಿ ಆನಂದರೆಡ್ಡಿ, ರಾಮಕೃಷ್ಣ ಅವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಆದರೆ ಈ ಇಬ್ವರ ನಿಧಿ ಆಸೆಗೆ ಅಲ್ಲೊಂದು ಕುಟುಂಬವೇ ದುಃಖದಲ್ಲಿ ಕೈ ತೊಳೆಯುವಂತೆ ಆಗಿದೆ.
ಚಿತ್ರದುರ್ಗ. ಫೆ.12: ದ್ವಿಚಕ್ರ ವಾಹನ ಸವಾರರು ಪ್ರತಿಯೊಬ್ಬರೂ ಕೂಡ ಜೀವ ರಕ್ಷಣೆ ಸಂಬಂಧ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ವಾಹನ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ಗ್ರಾಮೀಣ ಭಾಗದ ಜನರನ್ನೇ ಟಾರ್ಗೆಟ್ ಮಾಡುವ ಫೈನಾನ್ಸ್ ಕಂಪನಿಗಳು ಸಾಲ ಸೌಲಭ್ಯವನ್ನು…
ಕಾಲ ಈಗ ಅದೆಷ್ಟು ಬದಲಾಗಿದೆ ಅಲ್ವಾ. ಗ್ರಾಮೀಣ ಭಾಗದಲ್ಲಿ ಹೆಣ್ಣು ಎಂದರೆ ಮೂಗು ಮುರಿಯುತ್ತಿದ್ದರು. ಗಂಡು ಮಗುವೇ ಬೇಕು ಎನ್ನುತ್ತಿದ್ದರು.…
ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಇದನ್ನು ಕಂಡ ಚಿನ್ನಾಭರಣ ಪ್ರಿಯರು ಇಳಿಕೆಯಾಗುತ್ತೋ ಇಲ್ವೋ ಅಂತ…