Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೌರ ಕಾರ್ಮಿಕರು ವಿವಿಧ ರೀತಿಯ ಸೌಲಭ್ಯವನ್ನು ಪಡೆಯಬೇಕು : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಜ.07) : ನಿಮ್ಮ ಸಮಸ್ಯೆಗಳ ಬಗ್ಗೆ ಮುಂದಿನ ದಿನದಲ್ಲಿ ಸಂಬಂಧಪಟ್ಟವರ ಜೊತೆಯಲ್ಲಿ ಸಭೆಯನ್ನು ಕರೆದು ಚರ್ಚೆ ಮಾಡಿ ಅವುಗಳನ್ನು ಪರಿಹಾರ ಮಾಡುವ ಬಗ್ಗೆ ಶ್ರಮಿಸುವುದಾಗಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದ್ದಾರೆ.

ನಗರದಲ್ಲಿ ಚಿತ್ರದುರ್ಗ ಜಿಲ್ಲಾ ಪೌರ ಕಾರ್ಮಿಕರ ಸಂಘದ ಉದ್ಘಾಟನೆ ಹಾಗೂ ನಿವೃತ ಪೌರ ಕಾರ್ಮಿಕರ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಸರ್ಕಾರ ನಿಮಗೆ ಎಲ್ಲಾ ರೀತೀಯಾದ ಸೌಲಭ್ಯವನ್ನು ನೀಡಿದೆ. ಆದರೆ ಅದನ್ನು ಪಡೆಯುವಲ್ಲಿ ಸಂಘಟನೆ ಹಿಂದೆ ಬಿದ್ದಿದೆ. ಪದಾಧಿಕಾರಿಗಳು ಇದರ ಬಗ್ಗೆ ಆಸಕ್ತಿಯನ್ನು ವಹಿಸಿ ಪೌರ ಕಾರ್ಮಿಕರಿಗೆ ಕಾಲ ಕಾಲಕ್ಕೆ ದೂರಕಬೇಕಾದ ಸೌಲಭ್ಯಗಳನ್ನು ಕೂಡಿಸುವಲ್ಲಿ ಮುಂದಾಗಬೇಕಿದೆ ಎಂದು ಕಿವಿ ಮಾತು ಹೇಳಿದರು.

ಪೌರ ಕಾರ್ಮಿಕರು ಶ್ರಮ ಜೀವಿಗಳಾಗಿದ್ದಾರೆ. ಇವರ ಕೆಲಸವನ್ನು ಯಾರು ಮಾಡುವುದಿಲ್ಲ, ಇವರ ಕೆಲಸಕ್ಕೆ ಉತ್ತಮವಾದ ವೇತನವನ್ನು ನೀಡಬೇಕಿದೆ.

ಚಿತ್ರದುರ್ಗ ನಗರದಲ್ಲಿ ಪೌರ ಕಾರ್ಮಿಕರಿಗೆ ಮನೆಯನ್ನು ಈಗಾಗಲೇ ಸಾಕಷ್ಟು ಜನರಿಗೆ ನೀಡಲಾಗಿದೆ. ಇನ್ನೂ ಹಲವಾರು ಜನರಿಗೆ ನೀಡಬೇಕಿದೆ ಇದಕ್ಕಾಗಿ ಭೂಮಿಯ ಅಗತ್ಯ ಇದೆ. ನಿಮಗೆ ಭೂಮಿಯನ್ನು ಖರೀದಿ ಮಾಡಲು ಅವಕಾಶ ಇದೆ. ನಗರದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಎಲ್ಲಿಯಾದರೂ ಭೂಮಿ ಸಿಕ್ಕರೆ ಖರೀದಿ ಮಾಡಿ ಮನೆಯನ್ನು ನಿರ್ಮಾಣ ಮಾಡಿಕೊಡುವುದು ನನ್ನ ಜವಾಬ್ದಾರಿ ಎಂದು ಶಾಸಕ ತಿಪ್ಪಾರೆಡ್ಡಿ ಭರವಸೆ ನೀಡಿದರು.

ಸಂಘದ ಪದಾಧಿಕಾರಿಗಳು ನಮ್ಮ ಸದಸ್ಯರಿಗೆ ಮನೆ ಬೇಕು ಎಂದು ಕೇಳಿ ಅದನ್ನು ಮರೆಯಬಾರದು ಪದೇ ಪದೇ ಇದರ ಬಗ್ಗೆ ನನ್ನ ಗಮನಕ್ಕೆ ತರುವ ಕಾರ್ಯವಾಗಬೇಕು. ಈಗ ಕೇಳಿ ಮತ್ತೊಮ್ಮೆ ಮುಂದಿನ ಸಮಾರಂಭದಲ್ಲಿ ಜ್ಞಾಪಕ ಮಾಡಬಾರದು ಎಂದು ಸಂಘಟಕರನ್ನು ಎಚ್ಚರಿಸಿದ ಶಾಸಕರು, ಚಿತ್ರದುರ್ಗದಲ್ಲಿ ಈಗಾಗಲೇ ಮನೆಗಾಗಿ 15000 ಅರ್ಜಿಗಳು ಬಂದಿದ್ದು ಅದರಲ್ಲಿ ಸುಮಾರು 7 ರಿಂದ 8 ಸಾವಿರ ಅರ್ಜಿಗಳು ಬೋಗಸ್ ಆಗಿವೆ.

ಉಳಿದವರಲ್ಲಿ ಅರಿಸಿ ಎಲ್ಲಾ ಜನಾಂಗದರಿಗೆ ಬರುವಂತೆ ಮನೆಯನ್ನು ಹಂಚಬೇಕಿದೆ ಇದ್ದಲ್ಲದೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಅದರೆ ಟೆಂಡರ್ ದಾರ ಮನೆಗಳನ್ನು ನಿರ್ಮಾಣ ಮಾಡಲು ಮೀನಾ ಮೇಷ ಮಾಡುತ್ತಿದ್ದಾನೆ. ಅವನು ಮನೆ ನಿರ್ಮಾಣಕ್ಕೆ ಮುಂದಾಗದಿದ್ದರೆ ಹೊಸದಾಗಿ ಟೆಂಡರ್ ಕರೆಯುವಂತೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಸರ್ಕಾರ ಪೌರ ಕಾರ್ಮಿಕರಿಗಾಗಿ ವಿವಿಧ ರೀತಿಯ ಸೌಲಭ್ಯವನ್ನು ನೀಡಿದೆ ಆದರೆ ಅವುಗಳನ್ನು ಪಡೆಯುವಲ್ಲಿ ಸಂಘಟಕರು ಮುಂದಾಗಿಲ್ಲ. ಇದರ ಬಗ್ಗೆ ನಾನು ಮತ್ತು ಜಿಲ್ಲಾಧಿಕಾರಿಗಳು ಸೇರಿ ಸಭೆಯನ್ನು ನಡೆಸುವುದರ ಮೂಲಕ ನಿಮಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿ ಕೂಡಿಸುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು. ನಿಮ್ಮ ಸಂಘಟನೆ ಇನ್ನೂ ಬಲವಾಗಬೇಕಿದೆ. ಪೌರ ಕಾರ್ಮಿಕರು ಕರೋನಾ ಸಮಯದಲ್ಲಿ ಉತ್ತಮ ರೀತಿಯಾಗಿ ಕೆಲಸವನ್ನು ಮಾಡಿದ್ದಾರೆ. ಬೇರೆ ಎಲ್ಲದಕ್ಕಿಂತ ನಿಮ್ಮ ಸೇವೆ ಅತಿ ಅಮೂಲ್ಯವಾಗಿದೆ ಎಂದರು.

ರಾಜ್ಯ ಪೌರ ಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಮಾತನಾಡಿ, ಸರ್ಕಾರ ಇಂತಿಷಟು ಜನತೆ ಇಂತಿಷ್ಟು ಪೌರ ಕಾರ್ಮೀಕರಿ ಇರಬೇಕಂದು ಕಾನೂನು ಇದೆ ಆದರೆ ಅಷ್ಟು ಪ್ರಮಾಣದಲ್ಲಿ ನಮ್ಮಲ್ಲಿ ಪೌರ ಕಾರ್ಮೀಕರು ಇಲ್ಲ ಇಲ್ಲಿ ಪೌರ ಕಾರ್ಮಿಕರ ಕೂರತೆ ಇದೆ ಇದೇ ರೀತಿ ಲಾರಿಗೆ ಕಸವನ್ನು ತುಂಬುವವರು ಸಂಖ್ಯೆಯೂ ಸಹಾ ಕಡಿಮೆ ಇದೆ. ಸರ್ಕಾರದಿಂದ ನಿಮಗಾಗಿ ವಿವಿಧ ರೀತಿಯ ಸೌಲಭ್ಯವನ್ನು ಕೂಡಿಸಲಾಗಿದೆ ಆದನ್ನು ಪಡೆಯುವಲ್ಲಿ ನಿಮ್ಮ ಪದಾಧಿಕಾರಿಗಳು ಹಿಂದೆ ಬಿದಿದ್ದಾರೆ ಎಂದರು.

ಪೌರ ಕಾರ್ಮಿಕರಿಗೆ ಸಕಾಲಕ್ಕೆ ಸರಿಯಾಗಿ ವೇತನ ನೀಡಬೇಕೆಂದು ಕಾನೂನು ಇದ್ದರು ಸಹಾ ಅದು ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ, ಇದೇ ರೀತಿ ಕಾರ್ಮೀರಿಕೆ ಗೌಜ್,ಮಾಸ್ಕ್,ಕಾಲಿಗೆ ಷೂ ಸೇರಿದಂತೆ ಇತರೆ ರಕ್ಷಕ ವಸ್ತುಗಳನ್ನು ನೀಡಬೇಕಿದೆ ಆದರೆ ಹಲವೆಡೆ ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ ಪ್ರತಿ ತಿಂಗಳು ಆರೋಗ್ಯದ ಬಗ್ಗೆ ತಪಾಸಣೆಯನ್ನು ನಡೆಸಬೇಕು ಇದನ್ನು ಡಿ.ಎಚ್.ಓ ಪರಶೀಲೆನ ಮಾಡಬೇಕೆಂದು ಇದೆ ಆದರೆ ಇದು ನಡೆಯುತ್ತಿಲ್ಲ ಎಂದು ಮಂಜುನಾಥ್ ತಿಳಿಸಿ ಇದರ ಬಗ್ಗೆ ಸಂಘಟಕರು ಎಚ್ಚತ್ತೆ ಕೂಳ್ಳಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ಉಪಾಧ್ಯಕ್ಷರಾದ ಶ್ರೀಮತಿ ಅನುರಾಧ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ತಾಲ್ಲೂಕು ಅಧ್ಯಕ್ಷ ಶ್ರೀಮತಿ ರೇಣುಕಾ, ಉಪಾಧ್ಯಕ್ಷರಾದ ಜಗದೀಶ್, ಸಹಾ ಕಾರ್ಯದರ್ಶೀ ಮಂಜಣ್ಣ ಸೇರಿದಂತೆ ನಗರಸಭಾ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷೆಯನ್ನು ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ದುರುಗೇಶ್ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ರಾಜಣ್ಣ ಪ್ರಸ್ತಾವಿಕ ಮಾತನಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ವಿನೋದ ಅಸೂಟಿ, ಸಚಿವ ಸಂತೋಷ ಲಾಡ್ ಮತ್ತು ಸಲೀಂ ಅಹಮದ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಏ.19 : ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಕರ್ನಾಟಕ ಸರಕಾರದ ಸಚಿವರಾದ ಸಂತೋಷ

ಗೋವಿಂದ ಕಾರಜೋಳರವರನ್ನು ಅತಿ ಹೆಚ್ಚು ಮತಗಳ ಅಂತರಿಂದ ಗೆಲ್ಲಿಸುವುದು ನಮ್ಮ ಗುರಿ :  ಬಿ.ಕಾಂತರಾಜ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಏ.19 :  ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಅತಿ ಹೆಚ್ಚು ಮತಗಳ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ : ಪ್ರಭಂಜನ ಆರೋಪ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಏ.19 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯ

error: Content is protected !!