ಅಟಾರ್ನಿ ಜನರಲ್ ಆಗಿ ಎರಡನೇ ಬಾರಿ ಆಯ್ಕೆಯಾದ ರೋಹಟಗಿ

ನವದೆಹಲಿ: ಹಿರಿಯ ವಕೀಲ ಮುಕುಲ್ ರೋಹಟಗಿಯನ್ನು ಭಾರತದ ಹದಿನಾಲ್ಕನೆಯ ಅಟಾರ್ನಿ ಜನರಲ್ ಆಗಿ ನೇಮಕ ಮಾಡಲು ನಿರ್ಧರಿಸಲಾಗಿದೆ. ವಿಶೇಷ ಎಂದರೆ ರೋಹಟಗಿ ಎರಡನೇ ಬಾರಿ ಈ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ. 2014 ರಿಂದ 2017 ರವರೆಗೂ ಕೂಡ ಮುಕುಲ್ ರೋಹಟಗಿ ಅವರು ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಇದೇ ತಿಂದಗಳ 30ಕ್ಕೆ ಹಾಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಕಳೆದ ಜೂನ್ ನಲ್ಲಿಯೇ ಅವರ ಅಧಿಕಾರಾವಧಿ ಮುಕ್ತಾಯವಾಗಬೇಕಿತ್ತು. ಆದರೆ ಮೂರು ತಿಂಗಳ ಕಾಲ ಅದನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ಈ ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳಲಿದ್ದು, ಮುಕುಲ್ ರೋಹಟಗಿ ಅವರನ್ನು ಆಯ್ಕೆ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *