ಪ್ರೊಡಕ್ಷನ್ ಹೌಸ್ ಶುರು ಮಾಡಿದ ಧೋನಿ.. ಮೊದಲ ಸಿನಿಮಾದ ಭಾಷೆ ಯಾವುದು ಗೊತ್ತಾ?

 

ಸುದ್ದಿಒನ್ ವೆಬ್ ಡೆಸ್ಕ್

ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಗೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೀಪಾವಳಿಯಂದು ಪತ್ನಿ ಸಾಕ್ಷಿ ಸಿಂಗ್ ಧೋನಿ ಜೊತೆಗೂಡಿ ‘ಧೋನಿ ಎಂಟರ್ ಟೈನ್ ಮೆಂಟ್’ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಸಾಕ್ಷಿ ಸಿಂಗ್ ಧೋನಿ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಿಂದ ಮೊದಲ ಬಾರಿಗೆ ತಮಿಳು ಚಿತ್ರ ನಿರ್ಮಾಣ ಮಾಡಲಿದ್ದೇವೆ ಎಂದು ಧೋನಿ ಎಂಟರ್‌ಟೈನ್‌ಮೆಂಟ್ ಪ್ರತಿನಿಧಿಗಳು ತಿಳಿಸಿದ್ದಾರೆ.

ತಮ್ಮ ಸಂಸ್ಥೆ ನಿರ್ಮಿಸಿದ ಮೊದಲ ಚಿತ್ರವನ್ನು ರಮೇಶ್ ತಮಿಳು ಮಣಿ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಇತರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಬಹಿರಂಗಪಡಿಸಿದ್ದಾರೆ. ಫ್ಯಾಮಿಲಿ ಎಂಟರ್ ಟೈನರ್ ಆಗಿ ತಯಾರಾಗಲಿರುವ ಈ ಚಿತ್ರದ ಕಥೆಯನ್ನು ಸಾಕ್ಷಿ ಸಿಂಗ್ ಧೋನಿ ಅವರೇ ನೀಡಿದ್ದಾರಂತೆ.

ಹಾಗೆಯೇ ಕಳೆದ ಕೆಲವು ದಿನಗಳಿಂದ ಕಾಲಿವುಡ್‌ನಲ್ಲಿ ಧೋನಿ ಶೀಘ್ರದಲ್ಲೇ ತಮಿಳು ಸೂಪರ್‌ಸ್ಟಾರ್ ಇಳಯದಳಪತಿ ವಿಜಯ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ.

ಈ ಬಗ್ಗೆ ಧೋನಿಯ ಮನರಂಜನಾ ಕಂಪನಿಯ ಪ್ರತಿನಿಧಿಗಳೂ ಪ್ರತಿಕ್ರಿಯಿಸಿದ್ದಾರೆ. ಧೋನಿಗೆ ತಮಿಳುನಾಡಿನಲ್ಲಿ ಭಾರೀ ಕ್ರೇಜ್ ಇರುವುದರಿಂದ ಧೋನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ತಮಿಳು ಚಿತ್ರಗಳ ಸರಣಿ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಧೋನಿಯ ಮನರಂಜನಾ ಸಂಸ್ಥೆಯು ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯ ಜೊತೆಗೆ ತಮಿಳಿನಲ್ಲಿ ಚಿತ್ರಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಪರೋಕ್ಷ ಸಂಕೇತಗಳನ್ನು ನೀಡಿದೆ.

suddionenews

Recent Posts

ಮೊಳಕಾಲ್ಮರು : ವಕೀಲರ ಸಂಘಕ್ಕೆ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

2 hours ago

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

2 hours ago

ಕೌದಿ ವಸ್ತ್ರ ಧರಿಸಿ ಭಕ್ತಾಧಿಗಳಿಗೆ ದರ್ಶನಾರ್ಶೀವಾದ ನೀಡಿದ ಶಿವಲಿಂಗಾನಂದ ಶ್ರೀಗಳು

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ 27 :…

2 hours ago

ಡಿ.ಕೆ.ಶಿವಕುಮಾರ್ ಮತೀಯ ಶಕ್ತಿಗಳೊಡನೆ ಕೈಜೋಡಿಸುವುದಿಲ್ಲ : ವಿ.ಎಸ್.ಉಗ್ರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

2 hours ago

ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರ

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಮಹಿಳಾ ಪತಂಜಲಿ ಯೋಗ…

3 hours ago

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪ ಆಯ್ಕೆ

    ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 27 : ಹೊಳಲ್ಕೆರೆಯಲ್ಲಿ ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಜಿ.ಪರಮೇಶ್ವರಪ್ಪನವರನ್ನು…

3 hours ago