ಬೆಂಗಳೂರು; ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಅದ್ದೂರಿಯಾಗಿ ಗಾಯಿಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಕೈಹಿಡಿದಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದೆ. ಈ ಮದುವೆಗೆ ಎರಡು ಕಡೆಯ ಕುಟುಂಬಸ್ಥರು ಹಾಗೂ ರಾಜಕೀಯ ಗಣ್ಯರು, ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಶಿವಶ್ರೀ ಸ್ಕಂದ ಪ್ರಸಾದ್ ಮೂಲತಃ ಚೆನ್ನೈನವರು. ಗಾಯಕಿಯಾಗಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನ ಹೊಗಳಿದ್ದರು. ಟ್ವಿಟ್ಟರ್ ನಲ್ಲಿ ಹಾಕಿದ್ದರು. ಸಂಸದ ತೇಜಸ್ವಿ ಸೂರ್ಯ ಅವರನ್ನೇ ಮದುವೆ ಆಗಿದ್ದಾರೆ. ನೂತನ ದಂಪತಿಗೆ ಬಂಧು ಬಳಗ, ರಾಜಕಾರಣಿಗಳು ಹಾರೈಸಿದ್ದಾರೆ.
ಮಾರ್ಚ್ 5ರ ಬುಧವಾರ ಸಂಜೆ ವರ ಪೂಜೆ ಕಾರ್ಯಕ್ರಮ ನಡೆದಿದೆ. ಇಂದು ಮಾರ್ಚ್ 6, ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ಬೆಳಗ್ಗೆ 9.30 ರಿಂದ 10.15 ರ ನಡುವಿನ ತುಲಾ ಲಗ್ನದಲ್ಲಿ ಮದುವೆ ನಡೆದಿದೆ. ಇಂದು ಗಿರಿನಗರದ ನಿವಾಸದಲ್ಲಿ ವಧುವನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಲಿದೆ.
ಸಂಸದ ತೇಜಸ್ವಿ ಸೂರ್ಯ ಅವರ ಮದುವೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತುಮಕೂರು ಸಂಸದ ವಿ.ಸೋಮಣ್ಣ, ಕೇಂದ್ರ ಸಚುವೆ ಶೋಭಾ ಕರಂದ್ಲಾಜೆ, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್, ಬಿಜೆಪಿ ಶಾಸಕರು, ಸಂಸದರು, ಹಿಂದೂಪರ ನಾಯಕರು, ಸಂಘ ಪರಿವಾರದ ಮುಖಂಡರು ಭಾಗವಹಿಸಿ, ನವಜೋಡಿಗೆ ಹಾರೈಸಿದ್ದಾರೆ. ಇನ್ನು ಮಾರ್ಚ್ 9ರಂದು ಭಾನುವಾರ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…
ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…
ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…
ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…