in

ಉತ್ತರ ಭಾರತದ ಮಹಿಳೆ ಬಂದು ಸೇರಿದ್ದು ಕರಾವಳಿಗೆ..12 ವರ್ಷದ ಬಳಿಕ ಮಗ ಸಿಕ್ಕಿದ್ದೇ ರೋಚಕ..!

suddione whatsapp group join

ದಕ್ಷಿಣ ಕನ್ನಡ : ಆ ತಾಯಿಗೆ ಬಂಗಾಳಿ ಬಿಟ್ರೆ ಬೇರೆ ಭಾಷೆ ಗೊತ್ತಿಲ್ಲ. ಗಂಡನ ಅಗಲಿಕೆಯ ನಂತರ ಮಾನಸಿಕವಾಗಿ ಕುಗ್ಗಿ ಹೋಗಿ ಉತ್ತರ ಭಾರತದಿಂದ ದಕ್ಷಿಣ ಕನ್ನಡದ ಕರಾವಳಿಗೆ ಬಂದ್ರು. ಮನೆಯವರ ಸಂಪರ್ಕವಿಲ್ಲ, ತನ್ನ ಅರಿವಿಲ್ಲ. ಹೀಗೆ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಆ ತಾಯಿಯನ್ನ ನೋಡಿದವನೊಬ್ಬ ಉಡುಪಿಯ ಶಂಕರಮಠದ ವಿಶ್ವಾಸದ ಮಠದ ಸಂಸ್ಥಾಪಕರ ಗಮನಕ್ಕೆ ತಂದರು.

ಬೇಗಂ ನನ್ನು ವಿಶ್ವಾಸ ಮಠಕ್ಕೆ ಕರೆದುಕೊಂಡು ಹೋಗಿ, ಚಿಕಿತ್ಸೆಯನ್ನು ಕೊಡಿಸಿ ಎಲ್ಲವನ್ನು ಸರಿ ಮಾಡಲಾಯ್ತು. ಆಕೆಗೆ ಭಾಷೆಯೇ ಅಡ್ಡಿಯಾಗಿತ್ತು. ಐವರು ಮಕ್ಕಳು, ದುಬ್ರಿಗೆ ಹೋಗಬೇಕು ಅನ್ನೋದ‌್ನ ಬಿಟ್ರೆ ಬೇರೆ ಏನು ಮಾತಾಡ್ತಾ ಇರ್ಲಿಲ್ಲ. ಹೀಗಾಗಿ ಮಕ್ಕಳು, ಕುಟುಂಬಸ್ಥರನ್ನ ಹುಡುಕೋದು ವಿಶ್ವಾಸ ಮಠಕ್ಕೆ ಕಷ್ಟವಾಗಿತ್ತು.

ಆದ್ರೆ ಎಲ್ಲವೂ ದೇವರಿಚ್ಛೆ ಅಂತಾರಲ್ಲ ಹಾಗೇ ಮಠಕ್ಕೆ ಮಣಿಪಾಲ್ ಕೆಎಂಸಿ ವಿದ್ಯಾರ್ಥಿಗಳು ಆಶ್ರಮಕ್ಕೆ ಭೇಟಿ ನೀಡಿ, ಬೇಗಂನನ್ನು ಮಾತಾಡಿಸಿ, ಮಾಹಿತಿ ತೆಗೆದುಕೊಂಡು ಹೋಗಿದ್ರು. ಹಾಗೋ ಹೀಗೋ ವಿದ್ಯಾರ್ಥಿಗಳು ಅವರ ಮಗನನ್ನ ಹುಡುಕಿದ್ದಾರೆ. ಇದೀಗ 12 ವರ್ಷಗಳ ಬಳಿಕ ತಾಯಿ ಮಗ ಒಂದಾಗಿದ್ದಾರೆ. ಎರಡನೇ ಮಗ ಆ ತಾಯಿಯನ್ನ ನೋಡಲು ಕರಾವಳಿಗೆ ಬಂದಿದ್ದಾನೆ. ಈ ಅದ್ಭುತ ಘಟನೆಗೆ ಆ ವಿದ್ಯಾರ್ಥಿಗಳು ಕಾರಣವಾಗಿದ್ದು ಖುಷಿ ತಂದಿದೆ ಎಂದಿದ್ದಾರೆ ಆಶ್ರಮದ ಮುಖ್ಯಸ್ಥರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಎಂ.ಮೃತ್ಯುಂಜಯಪ್ಪನವರ ದುರ್ಗದಲ್ಲಿ ಹುಲಿ ಶಿಕಾರಿ ಅನನ್ಯವಾಗಿ ನಿಲ್ಲಬಲ್ಲಂತ ಏಕೈಕ ಕೃತಿ : ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ

ಕತೆಗಾರನಾಗಿ ಬಡ್ತಿ ಪಡೆದ ಪತ್ರಕರ್ತ ಹೆಚ್ ಎನ್ ತಿಪ್ಪೇರುದ್ರ ಸ್ವಾಮಿ : ಸಾಹಿತಿ ಬಿ.ಎಲ್.ವೇಣು