Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

2020ರಲ್ಲಿ ಸತ್ತವರ ಶವಗಳನ್ನೇ ಮರೆತಿದ್ದ ಸಿಬ್ಬಂದಿ : ಗಬ್ಬು ವಾಸನೆ ಬಳಿಕ ಹೊರೆ ತೆಗೆದ ಇಎಸ್ಐ ಸಿಬ್ಬಂದಿ..!

Facebook
Twitter
Telegram
WhatsApp

ಬೆಂಗಳೂರು: ಮೊದಲ ಅಲೆಯಲ್ಲಿ ಕೊರೊನಾ ಎಂಬ ವೈರಸ್ ಮನುಷ್ಯರನ್ನ ಅದೆಷ್ಟು ಕ್ರೂರತೆಗೆ ನೂಕಿತ್ತು ಎಂದರೆ ತಮ್ಮವರೇ ಸತ್ತರು ಅವರ ಮುಖವನ್ನು ನೋಡದೆ, ಶವಗಳನ್ನು ಮುಟ್ಟದೆ ಇರುವಷ್ಟು ಮನುಷ್ಯತ್ವವನ್ನೇ ಮರೆತಿದ್ದರು.

ಕೊರೊನಾ ಬಂದವರನ್ನ ಮಾತಾಡಿಸಿದ್ರೆ ಇನ್ನೆಲ್ಲಿ ಕೊರೊನಾ ವೈರಸ್ ತಗುಲುತ್ತೋ ಅನ್ನೋ ರೀತಿ ವರ್ತಿಸ್ತಾ ಇದ್ರು. ಆ ಸಮಯದಲ್ಲಿ ಸಾವನ್ನಪ್ಪಿದವ ಶವಸಂಸ್ಕಾರವನ್ನ ಆದಷ್ಟು ಸರ್ಕಾರದಿಂದಲೇ ಮಾಡಲಾಗುತ್ತಿತ್ತು. ಕುಟುಂಬಸ್ಥರು ಮಾಡಿದ್ರು ಕೂಡ ಅದಕ್ಕೆ ಆದಂತ ಸಾಕಷ್ಟು ನಿಯಮಗಳನ್ನ ಸೂಚಿಸಲಾಗಿತ್ತು. ಆದ್ರೆ ಸಿಲಿಕಾನ್ ಸಿಟಿಯಲ್ಲಿ ಕುಟುಂಬಸ್ಥರು ಶವವನ್ನೆ ತೆಗೆದುಕೊಂಡು ಹೋಗದೆ, ಆ ಶವಗಳು ವರ್ಷದ ಮೇಲೆ ಕಣ್ಣಿಗೆ ಬಿದ್ದಿರುವ ಘಟನೆ ನಡೆದಿದೆ.

ನಗರದ ಇಎಸ್ಐ ಆಸ್ಪತ್ರೆಯಲ್ಲಿ ಇಂಥದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಚಾರಾಜಪೇಟೆಯ ದುರ್ಗಾ ಮತ್ತು ಕೆ ಪಿ ಅಗ್ರಾಹಾರದ ಮುನಿರಾಜು ಎಂಬುವವರು 2020ರಲ್ಲಿಯೇ ಸೋಂಕಿಗೆ ಒಳಗಾಗಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ರು. ಬಳಿಕ ಕುಟುಂಬಸ್ಥರು ಮೃತ ದೇಹಗಳನ್ನ ತೆಗೆದುಕೊಂಡು ಹೋಗಲು ಬಂದೇ ಇರಲಿಲ್ಲ.

ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ ಎರಡು ಶವಗಳನ್ನ ಶವಗಾರದಲ್ಲೇ ಇಟ್ಟು ಮರೆತು ಬಿಟ್ಟಿದ್ದರು. ಇದೀಗ 15 ತಿಂಗಳ ಬಳಿಕ ಆ ಶವಗಳನ್ನ ಹೊರತೆಗೆದಿದ್ದಾರೆ. ಅದು ಶವಗಳು ವಾಸನೆ ಬರಲು ಶುರುವಾದ ಮೇಲೆ ಸಿಬ್ಬಂದಿಗೆ ಶವಗಳ ನೆನಪಾಗಿದೆ. ಈಗ ತೆಗೆದು ಮರಣೋತ್ತರ‌ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನೆ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ

ಈ ರಾಶಿಯ ತಂದೆ ತಾಯಿಗೆ ಮಗಳ ಕುಟುಂಬದಲ್ಲಿ ತುಂಬ ಸಮಸ್ಯೆ ಇದೆ, ಈ ರಾಶಿಯವರ ಉದ್ಯೋಗದಲ್ಲಿ ತುಂಬಾ ಸಮಸ್ಯೆ ಅದರ ಜೊತೆ ಹಣಕಾಸಿನ ಸಮಸ್ಯೆ ಕಾಡಲಿದೆ, ಬುಧವಾರ ರಾಶಿ ಭವಿಷ್ಯ -ಏಪ್ರಿಲ್-24,2024 ಸೂರ್ಯೋದಯ: 05:57,

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

error: Content is protected !!