ಚಿತ್ರದುರ್ಗ(ಆ.14) : ಸರ್ಕಾರ ಪೌರ ಕಾರ್ಮಿಕರಿಗಾಗಿ ಉತ್ತಮವಾದ ಸೇವೆಯನ್ನು ನೀಡುತ್ತಿದೆ ಇದರ ಸದುಯೋಗ ಮಾಡಿಕೊಳ್ಳುವಂತೆ ಶಾಸಕ ತಿಪ್ಪಾರೆಡ್ಡಿ ಕರೆ ನೀಡಿದರು.
ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಚಂದ್ರಮ್ಮ ಪಾರ್ಕಿನಲ್ಲಿ ನೂತನವಾಗಿ ಸಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿ, ಸ್ವಚ್ಚತೆಯನ್ನು ಕಾಪಾಡುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಲವಾರು ಕಾರ್ಮಿಕರಿಗೆ ವಾಸಿಯಾಗದ ಖಾಯಿಲೆಗಳು ಬಂದಿದೆ. ಕೆಲಸಗಾರರಿಗೆ ಉತ್ತಮವಾದ ಭದ್ರತೆಯನ್ನು ನೀಡಬೇಕಾಗಿದೆ. ಇವರ ಹೊಣೆಗಾರಿಕೆಯನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ ಎಂದರು.
ಈ ಮುಂಚೆ ಮಾನವರನ್ನು ಬಳಕೆ ಮಾಡಿಕೊಂಡು ಸ್ವಚ್ಚತೆಯನ್ನು ಮಾಡಲಾಗುತ್ತಿತ್ತು. ಆದರೆ ಈಗ ಅವರನ್ನು ಬಳಕೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸರ್ಕಾರಗಳು ಇವರ ಬಗ್ಗೆ ಉತ್ತಮವಾದ ಸೌಲಭ್ಯವನ್ನು ನೀಡುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕಿದೆ. ಇವರ ಬಗ್ಗೆ ಸರ್ಕಾರಗಳು ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಿದೆ. ಕರೋನ ಸಮಾಯದಲ್ಲಿ ನೀವುಗಳು ಮಾಡಿದ ಕಾರ್ಯ ತುಂಬಾ ಶ್ಲಾಘನೀಯವಾದದು ಎಂದು ಶಾಸಕರು ತಿಳಿಸಿದರು.
ಪ್ರಧಾನ ಮಂತ್ರಿಗಳು ನಿಮ್ಮಗಳ ಪಾದ ಪೂಜೆಯನ್ನು ಮಾಡುವುದರ ಮೂಲಕ ನೀವುಗಳು ಎಷ್ಟು ಮಹತ್ವ ಎಂದು ತೋರಿಸಿಕೊಟ್ಟಿದ್ದಾರೆ. ಚಿತ್ರದುರ್ಗ ನಗರಸಭೆ ಎ ಗ್ರೇಡ್ ಹೊಂದಿದ್ದು ಇದರ ನಿರ್ಮಾಣಕ್ಕೆ 50 ಲಕ್ಷ ರೂ ಕಡಿಮೆಯಾಗಿದೆ. ಈಗ ನಗರಸಭೆಗೆ ಯಾವ ಹೊರೆಯು ಸಹಾ ಇಲ್ಲವಾಗಿದೆ ಇನ್ನಷ್ಟು ಅನುದಾನ ನೀಡಬೇಕಿದೆ ಎಂದ ಅವರು ಇಲ್ಲಿನ ಸದಸ್ಯರು ಪೌರ ಕಾರ್ಮಿಕರ ಜೊತೆಯಲ್ಲಿ ಉತ್ತಮವಾದ ಭಾಂಧವ್ಯವನ್ನು ಹೊಂದಿದ್ದಾರೆ. ಪೌರ ಕಾರ್ಮಿಕರಿಗೆ ಮುಂದಿನ ದಿನದಲ್ಲಿ ಮತ್ತಷ್ಠು ಸೌಲಭ್ಯವನ್ನು ನೀಡಲಾಗುವುದೆಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳ ವೇದ, ಸದಸ್ಯರಾದ ವೆಂಕಟೇಶ್, ಅನುರಾಧ, ಅಂಗಡಿ ಮಂಜುನಾಥ್, ಪೌರಾಯುಕ್ತರಾದ ವಾಸಿಂ, ಇಂಜಿನಿಯರ್ ಕಿರಣ್ ಬಾಬುರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.